kovid nk today- ಬೆಂಗಳೂರಿನಿಂದ ಮರಳಿದ ಸಿದ್ಧಾಪುರದ ಮೂರು ಗ್ರಾಮೀಣ ಪ್ರಕರಣಗಳು ಸೇರಿ ಇಂದು ಉ.ಕ. ದ 79 ಜನರಲ್ಲಿ ಕೋವಿಡ್ ದೃಢ

ಉತ್ತರ ಕನ್ನಡ ಜಿಲ್ಲೆಯ ಕರೋನಾ ಕೇಸ್ ಗಳ ನಾಗಾಲೋಟಕ್ಕೆ ಸಾಕ್ಷಿಯಾಗುವಂತೆ ಇಂದು ಜಿಲ್ಲೆಯ 79 ಜನರಲ್ಲಿ ಕೋವಿಡ್ ದೃಢ ಪಟ್ಟಿದೆ.

ಹಳಿಯಾಳ,ದಾಂಡೇಲಿಗಳಲ್ಲಿ 35,ಭಟ್ಕಳ 11, ಮುಂಡಗೋಡು 8 ಕಾರವಾರ 7, ಕುಮಟಾ5, ಶಿರಸಿ,ಹೊನ್ನಾವರ,ಯಲ್ಲಾಪುರಗಳಲ್ಲಿ ತಲಾ ಒಂದು ಹಾಗೂ ಸಿದ್ಧಾಪುರದ ಮೂವರಲ್ಲಿ ಕರೋನಾ ದೃಢಪಟ್ಟಿದೆ.
ಸಿದ್ಧಾಪುರದ ಕೊರ್ಲಕೈ ಪಂಚಾಯತ್ ನ ಆಡುಕಟ್ಟಾ, ಬೇಡ್ಕಣಿ ಮತ್ತು ಹಾರ್ಸಿಕಟ್ಟಾ ಪಂಚಾಯತ್ ಗಳ ತಲಾ ಒಬ್ಬರಲ್ಲಿ ಕರೋನಾ ದೃಢ ಪಟ್ಟಿದೆ. ಈ ಪಂಚಾಯತ್ಗಳ ಮೂರೂ ಪ್ರದೇಶಗಳಲ್ಲಿ ಕಂಟೇನ್ ಮೆಂಟ್ ಪ್ರದೇಶ ಎಂದು ಘೋಶಿಸಲಾಗಿದ್ದು ಈ ಮೂರೂ ಪ್ರಕರಣಗಳ ಪ್ರಾಥಮಿಕ ಸಂಪರ್ಕದ ವ್ಯಕ್ತಿಗಳಿಗೆ ಕಾರಂಟೈನ್ ಮಾಡಲಾಗಿದೆ.

ಸಿದ್ದಾಪುರ
ಕರೊನಾ ವೈರಸ್ ಎಲ್ಲ ಕಡೆ ವ್ಯಾಪಕವಾಗಿ ಹರಡುತ್ತಿರುವುದರಿಂದ ನಾಡಿನ ಪ್ರಸಿದ್ದ ಉಂಚಳ್ಳಿ ಜಲಪಾತ ವೀಕ್ಷಣೆಯನ್ನು ತಾತ್ಕಾಲಿಕವಾಗಿ ಬಂದ್ ಮಾ ಡಲಾಗಿದೆ.
ನಿತ್ಯ ಸಾವಿರಾರು ಪ್ರವಾಸಿಗರು ಜಲಪಾತ ವೀಕ್ಷಣೆಗೆ ಬರುತ್ತಿರುವುದರಿಂದ ಸ್ಥಳೀಯ ಜನತೆ ಆತಂಕ ವ್ಯಕ್ತಪಡಿಸಿದ್ದರಿಂದ ಗ್ರಾಮ ಅರಣ್ಯ ಸಮಿತಿ ಉಂಚಳ್ಳಿ ಸಾರ್ವಜನಿಕರ ಒತ್ತಾಯದ ಮೇರೆಗೆ ಜಲಪಾತ ವೀಕ್ಷಣೆಯನ್ನು ತಾತ್ಕಾಲಿಕವಾಗಿ ಬಂದ ಮಾಡಲು ತೀರ್ಮಾನಿಸಿ ಜೋಗಕ್ಕೆ ತೆರಳುವ ರಸ್ತೆಯನ್ನು ಬಂದ್ ಮಾಡಿದೆ. ಪ್ರವಾಸಿಗರು ಸಹಕರಿಸುವಂತೆ ಉಂಚಳ್ಳಿ ಗ್ರಾಮ ಅರಣ್ಯ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.

ಸಿದ್ದಾಪುರ; ಫೇಸ್‍ಬುಕ್‍ನಲ್ಲಿ ಬಸವ ಪ್ರಿಯಾ ಉಮೇಶ ಕುಮಾರಎನ್ನುವಖಾತೆ ಹೊಂದಿರುವವ್ಯಕ್ತಿಜಾತಿನಿಂದನೆ, ಧರ್ಮನಿಂದನೆ ಮಾಡಿ ಅವಹೇಳನಕಾರಿ ಪೋಸ್ಟ್ ಮಾಡಿದನ್ನು ಖಂಡಿಸಿ, ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಉತ್ತರಕನ್ನಡಜಿಲ್ಲಾ ವೀರಶೈವ, ಜಂಗಮ, ಅರ್ಚಕರು ಮತ್ತು ಪರೋಹಿತ ಸಂಘವು ತಹಶೀಲ್ದಾರ ಹಾಗೂ ಪೋಲಿಸ್ ನಿರೀಕ್ಷಕರಿಗೆ ಮನವಿ ಸಲ್ಲಿಸಿದೆ. ಇಂತಹಕೃತ್ಯವು ನಾವು ಶ್ರದ್ಧಾ ಭಕ್ತಿಯಿಂದಆರಾಧಿಸುವ ಹಾಗೂ ಪಾಲಿಸುವ ವೈದಿಕ ಪರಂಪರೆಗೆಅಪಮಾನ ಮಾಡಿದಂತೆ.ಇಂತಹ ಬರಹ ಸಮಾಜದಲ್ಲಿ ಶಾಂತಿಕದಡಿ ಗಲಭೆಗೆ ಪ್ರಚೋದಿಸಿದಂತಾಗುತ್ತದೆ.ಕಾರಣ ಸೈಬರ್‍ಕ್ರೈಮ್‍ಅಡಿಯಲ್ಲಿ ಶಿಸ್ತು ಕ್ರಮ ಕೈಗೊಳ್ಳಬೇಕು. ನಮ್ಮಜಾತಿ, ಧರ್ಮ, ವೃತ್ತಿ , ಸಂಸ್ಕೃ ತಿ ಕಾಪಾಡಿಕೊಳ್ಳಲು ರಕ್ಷಣೆ ನೀಡಬೇಕೆಂದು ಮನವಿಯಲ್ಲಿ ಆಗ್ರಹಿಸಿದ್ದಾರೆ.
ಈಸಂರ್ಭದಲ್ಲಿಉತ್ತರಕನ್ನಡಜಿಲ್ಲಾ ವೀರಶೈವ, ಜಂಗಮ, ಅರ್ಚಕರು ಮತ್ತು ಪರೋಹಿತ ಸಂಘದಅಧ್ಯಕ್ಷ ಪರಮೇಶ್ವರಯ್ಯ ಕಾನಳ್ಳಿಮಠ, ಪ್ರಧಾನ ಕಾರ್ಯದರ್ಶಿ ಪುಟ್ಟಯ್ಯ ಶಾಸ್ತ್ರಿ ಹಾಗೂ ಇತರರಿದ್ದರು.

ಸಿದ್ದಾಪುರ
ತಾಲೂಕಿನ ಭುವನಗಿರಿ ಭುವನೇಶ್ವರಿ ದೇವಾಲಯಕ್ಕೆ ಜು.8ರಿಂದ ಅನಿರ್ಧಿಷ್ಠಾವಧಿಯವರೆಗೆ ಸಾರ್ವಜನಿಕರ ಪ್ರವೇಶ ನಿರ್ಬಂಧಿ ಸಿದೆ.
ನಾಡಿನಾದ್ಯಂತ ಹರಡುತ್ತಿರುವ ಮಹಾಮಾರಿ ಕರೊನಾ ವೈರಸ್ ವ್ಯಾಪಕವಾಗಿ ಹರಿಡುತ್ತಿದ್ದು ಸಮುದಾಯಕ್ಕೆ ಹರಡುವ ಬೀತಿ ಇರುವ ಹಿನ್ನೆಲೆಯಲ್ಲಿ ಭುವನಗಿರಿ ಭುವನೇಶ್ವರಿ ಅಡಳಿತ ಮಂಡಳಿ ಸರ್ವಾನುಮತದಿಂದ ಸ್ವಯಂಪ್ರೇರಿತವಾಗಿ ಸಾರ್ವಜನಿಕರಿಗೆ ದೇವಾಲಯದ ಪ್ರವೇಶ ಅನಿರ್ಧಿಷ್ಠಾವಧಿಯವರೆಗೆ ನಿರ್ಬಂಧಿಸಿದ್ದಲ್ಲದೇ ಈ ಸಮಯದಲ್ಲಿ ದೇವರಿಗೆ ಯಾವುದೇ ಸೇವಾ ಅವಕಾಶ ಇರುವುದಿಲ್ಲ ಎಂದು ದೇವಾಲಯದ ಪ್ರಕಟಣೆ ತಿಳಿಸಿದೆ.

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

ಗ್ರಾಮೀಣ ಸೇವಾ ಸಹಕಾರಿ ಸಂಘಗಳು ಮುಳುಗುತ್ತಿವೆ..! ಜಾಗೃತೆ..

ರೈತರ ಅನುಕೂಲಕ್ಕಿರುವ ಗ್ರಾಮೀಣ ಸೇವಾ ಸಹಕಾರಿ ಸಂಘಗಳು ಮುಳುಗುತ್ತಿವೆ ಎನ್ನುವುದಕ್ಕೆ ಅನೇಕ ದೃಷ್ಟಾಂತಗಳಿವೆ. ಆದರೆ ಸಹಕಾರಿ ಕ್ಷೇತ್ರ ನಿಯಂತ್ರಿಸುವವರು ತಮ್ಮ ಅನುಕೂಲಕ್ಕೆ ಸಂಘಗಳನ್ನು ಬಳಸಿಕೊಂಡು...

bhaarat jodo… ಯುವ ಸಂಘ ನೋಂದಣಿಗೆ ಶಾಸಕರ ಮನವಿ

ಸಿದ್ದಾಪುರ: ರಾಜ್ಯದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ರ ಮಹತ್ವಾಕಾಂಕ್ಷೆ ಭಾರತ್ ಜೋಡೋ ಯುವ ಸಂಘಗಳನ್ನು ತಕ್ಷಣ ನೊಂದಣಿ ಮಾಡಿಸಿಕೊಂಡು ಸರ್ಕಾರದ ಅನುದಾನ ಸದುಪಯೋಗ ಪಡಿಸಿಕೊಳ್ಳುವಂತೆ ಶಿರಸಿ-ಸಿದ್ದಾಪುರ...

ಶ್ರೇಷ್ಠ ಶಿಕ್ಷಕ ವಿರೂಪಾಕ್ಶಪ್ಪ ಮೇಟಿ

ಕೆ.ಪಿ.ಸಿ.ಸಿ ಯಿಂದ ನೀಡಲಾಗುವ ಮಾಜಿ ಪ್ರಧಾನಿ ಶ್ರೀ ರಾಜೀವ ಗಾಂಧಿ ರಾಜ್ಯ ಮಟ್ಟದ ಶ್ರೇಷ್ಠ ಶಿಕ್ಷಕ ಪ್ರಶಸ್ತಿಗೆ ಆಯ್ಕೆಯಾದ ಉಪನ್ಯಾಸಕ ವಿರುಪಾಕ್ಷಪ್ಪ ಮೇಟಿ ಸಿದ್ದಾಪುರ,ಸೆ,೩:-...

kolsirsi vss issue…part -04 ನಾನೇ ಹೊಣೆ ನಾನೇ ಜವಾಬ್ದಾರಿ ಎಂದ ಸಿಇಒ ಮಾಳವಿ….

ಕೋಲ ಶಿರಸಿ vss ನ ಪ್ರಕರಣ ಹಗರಣದ ಸ್ವರೂಪ ಪಡೆದಿದೆ… ಈ ಅಪರಾ ತಪರಾ ರೂವಾರಿ ಸಿಇಒ/ ಸೆಕ್ರೆಟರಿ ಎಂಬುದು ನಿರ್ವಿವಾದ. ಈ ಬಗ್ಗೆ...

ಕೋಲಶಿರಸಿ vss ಆಡಳಿತ ಸಮೀತಿ & ಸಿಇಒ ವಿರುದ್ಧ ಇಲಾಖೆಗೆ ದೂರು

ಸಿದ್ದಾಪುರ ತಾಲೂಕಿನ ಕೋಲಶಿರಸಿ vss ನಲ್ಲಿ ನಡೆದಿದೆ ಎನ್ನಲಾದ ಬಹುಕೋಟಿ ಹಗರಣದ ಹಿಂದೆ ಇರುವ ಹಾಲಿ ಆಡಳಿತ ಮಂಡಳಿ & ಸಿಇಒ/ ಕಾರ್ಯದರ್ಶಿ ಗಳ...

Latest Posts

ಗ್ರಾಮೀಣ ಸೇವಾ ಸಹಕಾರಿ ಸಂಘಗಳು ಮುಳುಗುತ್ತಿವೆ..! ಜಾಗೃತೆ..

ರೈತರ ಅನುಕೂಲಕ್ಕಿರುವ ಗ್ರಾಮೀಣ ಸೇವಾ ಸಹಕಾರಿ ಸಂಘಗಳು ಮುಳುಗುತ್ತಿವೆ ಎನ್ನುವುದಕ್ಕೆ ಅನೇಕ ದೃಷ್ಟಾಂತಗಳಿವೆ. ಆದರೆ ಸಹಕಾರಿ ಕ್ಷೇತ್ರ ನಿಯಂತ್ರಿಸುವವರು ತಮ್ಮ ಅನುಕೂಲಕ್ಕೆ ಸಂಘಗಳನ್ನು ಬಳಸಿಕೊಂಡು ಸಹಕಾರಿ ಕ್ಷೇತ್ರ ಜನಪರ ಎನ್ನುವ ಸುಳ್ಳು ಪ್ರಚಾರದಲ್ಲಿ ತೊಡಗಿದ್ದಾರೆ. ಸಿದ್ದಾಪುರ ಕೋಲಶಿರ್ಸಿ ಸೇವಾ ಸಹಕಾರಿ ಸಂಘದ ಬಹುಕೋಟಿ ಹಗರಣದ ನಂತರ ಒಂದೊಂದೇ ಗುಟ್ಟುಗಳು ರಟ್ಟಾಗತೊಡಗಿವೆ. ಸಿದ್ದಾಪುರದ ಪ್ರಮುಖ ಸಹಕಾರಿಗಳು,...

Recommended For You

About the Author: Kanneshwar Naik

Leave a Reply

Your email address will not be published. Required fields are marked *