sep spl of sdp-ಸಿದ್ಧಾಪುರ ಸೆಪ್ಟೆಂಬರ್ ವಿಶೇಶ, ಚೆನ್ನಣ್ಣ ನವರ್ ಬಳಗದಿಂದ ಮನೆಮನೆಗೆ ತೆರಳಿ ಸನ್ಮಾನ,ಅಭಿನಂದನೆ

ಸಿದ್ದಾಪುರ 
ಶಿಕ್ಷಕರ ದಿನಾಚರಣೆಯ ಪ್ರಯುಕ್ತ ರವಿ ಡಿ ಚೆನ್ನಣ್ಣವರ್ ಐಪಿಎಸ್ ಅಭಿಮಾನಿ ಬಳಗ (ರಿ) ಮನಮನೆ ವತಿಯಿಂದ ಮನಮನೆ ಪ್ರೌಢಶಾಲೆ ಯಲ್ಲಿ ಈ ವರ್ಷದ ಎಸ್ ಎಸ್ ಎಲ್ ಸಿ ಹಾಗೂ ಮನಮನೆ ಊರಿನ ಮಕ್ಕಳಲ್ಲಿ ಈ ವರ್ಷದ ಪಿ ಯು ಸಿ ಪರೀಕ್ಷೆಯಲ್ಲಿ ಶೇಕಡಾ 80% ಕ್ಕಿಂತ ಹೆಚ್ಚಿನ ಅಂಕಗಳನ್ನು ಗಳಿಸಿದ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಅವರ ಮನೆಗಳಿಗೆ ತೆರಳಿ ಅವರ ಪಾಲಕರ ಸಮ್ಮುಖದಲ್ಲಿ  ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಆ ಎಲ್ಲಾ ಮಕ್ಕಳಿಗೂ ಅವರ ಮುಂದಿನ ಶಿಕ್ಷಣದ ದಾರಿಗೆ ಶುಭ ಹಾರೈಸಲಾಯಿತು. 
 ಮನಮನೆ ಊರಿನ ಯುವ ಸಮೂಹವು ಕರ್ನಾಟಕ ದಕ್ಷ ಹಾಗೂ ಸಿಂಗಂ ಖ್ಯಾತಿಯ ರವಿ ಡಿ ಚೆನ್ನಣ್ಣವರ್ ಅವರ ಅಭಿಮಾನದಿಂದ ಅವರ ಅಭಿಮಾನ ಬಳಗವನ್ನು ಸ್ಥಾಪಿಸಿದ್ದಾರೆ.  ಜ್ಞಾನ ಜಗತ್ತನ್ನ ಅಳುತ್ತದೆ ಎಂಬ ಘೋಷವಾಕ್ಯವನ್ನು ಹೊಂದಿದ ಈ ಅಭಿಮಾನಿ ಬಳಗವು ಹತ್ತು ಹಲವಾರು ಸಾಮಾಜಿಕ ಹಾಗು ಶೈಕ್ಷಣಿಕವಾಗಿ ಉತ್ತಮವಾದ ಕೆಲಸಕಾರ್ಯಗಳನ್ನು ಮಾಡುತ್ತಿದ್ದು ರವಿ ಡಿ ಚೆನ್ನಣ್ಣನವರ್ ಐಪಿಎಸ್ ( ಪ್ರಸ್ತುತ ಬೆಂಗಳೂರು ಗ್ರಾಮಾಂತರ ಪೊಲೀಸ್ ಅಧೀಕ್ಷಕರು )ಹಾಗೂ ಇನ್ನಿತರ ಜನರ  ಪ್ರಸಂಶೆಗೆ ಪಾತ್ರವಾಗಿದೆ.

ಬೆಳೆ ಹಾನಿ-ಸಿದ್ದಾಪುರ ತಾಲೂಕಿನ ಹಾರ್ಸಿಕಟ್ಟಾ ಗ್ರಾಪಂ ವ್ಯಾಪ್ತಿಯ ತೆಂಗಿನಮನೆಯ ದ್ಯಾವಾ ಕನ್ನಾ ನಾಯ್ಕ ಅವರ ಅಡಕೆ ತೋಟಕ್ಕೆ ಕಾಡುಹಂದಿಗಳು ದಾಳಿ ನಡೆಸಿ 25ಕ್ಕೂ ಹೆಚ್ಚು ಅಡಕೆ ಸಸಿಗಳನ್ನು ನಾಶಪಡಿಸಿದೆ. ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಪೈ ರಿಗೆ ಸನ್ಮಾನ- ಸಿದ್ಧಾಪುರ
ತಾ ಲೂಕು ಪಶುಸಂಗೋಪನಾ ಇಲಾಖೆಯ ಸಹಾಯಕ ನಿರ್ದೇಶಕರಾಗಿದ್ದ ಡಾ.ನಂದಕುಮಾರ ಪೈ ಮುಂಬಡ್ತಿ ಪಡೆದು ಪಶುಸಂಗೋಪನಾ ಇಲಾಖೆಯ ಜಿಲ್ಲಾ ಉಪನಿರ್ದೇಶಕರಾಗಿ ಅಧಿಕಾರವಹಿಸಿಕೊಂಡಿದ್ದಾರೆ.
ಅವರನ್ನು ಸಿದ್ದಾಪುರ ಪಶುಸಂಗೋಪನಾ ಇಲಾಖೆಯ ಕಚೇರಿಯಲ್ಲಿ ಮಂಗಳವಾರ ಪ್ರಭಾರಿ ಸಹಾಯಕ ನಿರ್ದೇಶಕ ಡಾ.ಶ್ರೇಯಸ್ ರಾಜ್,ಡಾ.ರಮೇಶಬಾಬು ಕವಂಚೂರು ಹಾಗೂ ಅಧಿಕಾರಿಗಳು, ಸಿಬ್ಬಂದಿಗಳು ಸನ್ಮಾನಿಸಿ ಬೀಳ್ಕೊಟ್ಟರು.

ಸೇವಾ ನಿವೃತ್ತಿ- ಬೀಳ್ಕೊಡುಗೆ-
ಸಿದ್ದಾಪುರ.
ಭಾರತ ಸಂಚಾರ ನಿಗಮದಲ್ಲಿ 30 ವರ್ಷಗಳ ಕಾಲ ಸೇವೆ ಸಲ್ಲಿಸಿ, ನಿವೃತ್ತಿ ಹೊಂದಿದ ಮುಕುಂದ ಐ.ನಾಯ್ಕ ಅವರಿಗೆ ಬಿ.ಎಸ್.ಎನ್.ಎಲ್. ಸಿಬ್ಬಂದಿಗಳು ಹಾಗೂ ಆತ್ಮೀಯರು ಸನ್ಮಾನಿಸಿ, ಬೀಳ್ಕೊಡುಗೆ ನೀಡಿದ ಕಾರ್ಯಕ್ರಮ ಇತ್ತೀಚೆಗೆ ಪಟ್ಟಣದ ಲಯನ್ ಬಾಲಭವನದಲ್ಲಿ ನಡೆಯಿತು.
ಕಾರ್ಯಕ್ರಮದಸ ಅಧ್ಯಕ್ಷತೆವಹಿಸಿದ್ದ ಬಿ.ಎಸ್.ಎನ್.ಎಲ್.ನ ನಿವೃತ್ತ ಅಧಿಕಾರಿ ವಿ.ಎಸ್.ಭಟ್ಟ ಮಾತನಾಡಿ ಮುಕುಂದ ನಾಯ್ಕರ ಪ್ರಾಮಾಣಿಕವಾದ ಸೇವೆ ಮತ್ತು ನೇರವಾದ,ದಿಟ್ಟವಾದ ನಡವಳಿಕೆಯ ವ್ಯಕ್ತಿತ್ವವನ್ನು ಶಾಘ್ಲಿಸಿದರು.
ಮುಖ್ಯ ಅತಿಥಿಯಾಗಿ ಪಾಲ್ಗೊಂಡ ಬಿ.ಎಸ್.ಎನ್.ಎಲ್.ಅಧಿಕಾರಿ ಜಿ.ಎಚ್.ಪಾಲೇಕರ ಮಾತನಾಡಿ ಮುಕುಂದ ನಾಯ್ಕ ಅವರು ಬಿ.ಎಸ್.ಎನ್.ಎಲ್.ನಲ್ಲಿ ಅತ್ಯುತ್ತಮ ಸೇವೆ ನೀಡಿದ್ದಾರೆ. ತಮ್ಮ ಸೇವೆಯ ವಿಶೇಷವಾಗಿ ಹಾರ್ಸಿಕಟ್ಟಾ ಭಾಗದ ಗ್ರಾಹಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ ಎಂದರು. ಜೆ.ತಿ.ಒ. ಶಿವಪ್ರಸಾದ ಉಪಸ್ಥಿತರಿದ್ದರು.
ಬಿ.ಎಸ್.ಎನ್.ಎಲ್.ನ ನಿವೃತ್ತ ಸಿಬ್ಬಂದಿಗಳು, ಹಂಗಾಮಿ ನೌಕರರು, ಗ್ರಾಹಕರು, ಆತ್ಮೀಯರು ಮುಕುಂದ ನಾಯ್ಕ ದಂಪತಿಗಳನ್ನು ಸನ್ಮಾನಿಸಿದರು.

ಚೆನ್ನಣ್ಣನವರ್ ಅಭಿಮಾನಿ ಬಳಗದಿಂದ ಸನ್ಮಾನ, ಻ಭಿನಂದನೆ
ನಿವೃತ್ತ ಮುಕುಂದ ನಾಯ್ಕರಿಗೆಗೌರವಾರ್ಪಣೆ
ಲಯನ್ಸ್ ನಿಂದ ಮಾಸ್ಕ್ ವಿತರಣೆ
ತೆಂಗಿನಮನೆಯ ಬೆಳೆಹಾನಿ

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

“ಒಂದೇ ಕಲ್ಲಿಗೆ ಎರಡು ಹಕ್ಕಿ, ಸಿದ್ದಾಪುರ ಬ್ಲಾಕ್ ಕಾಂಗ್ರೆಸ್ ಕಕ್ಕಾಬಿಕ್ಕಿ!”

ವಿಶ್ಲೇಷಣೆ….. (- ಅನಾಮಿಕ) ​ಶಿರಸಿ ಮತ್ತು ಸಿದ್ದಾಪುರ, ಎರಡು ಕಣ್ಣುಗಳಿದ್ದಂತೆ, ಆದರೆ ಈ ಎರಡೂ ಕಣ್ಣುಗಳಿಗೆ ಒಂದೇ ಜೋಡಿ ಕನ್ನಡಕ! ಹೌದು, ಎರಡೂ ಕ್ಷೇತ್ರಗಳಿಗೆ...

ಕಾಳಗದಲ್ಲಿ “ಅಧ್ಯಕ್ಷ ಗಾದಿ”,.. ಲಾಭಿಯೇ ಮುಂದಿನ ಹಾದಿ..!??

Sirsi block congress issue….( ಓದುಗರ ವಿಶ್ಲೇಷಣೆ) ಶಿರಸಿ ಬ್ಲಾಕ್ ಕಾಂಗ್ರೆಸ್ ರಾಜಕೀಯ ಕಣದಲ್ಲಿ ಈಗ ಸಖತ್ ಟೆನ್ಷನ್! ಪರೇಡ್ ಮುಗಿಸಿದ ಬೆನ್ನಲ್ಲೇ, ಈಗ...

ಒಂದು ಪತ್ರ.. ಒಡೆದಾಳುವವರ ದಾಳವಾಗಬೇಡಿ ನಾಮಧಾರಿಗಳೆ…

ಮಾನ್ಯರೆ… ನಮಸ್ಕಾರಗಳು… ಕೆಲವು ದಿವಸಗಳಿಂದ ನಿಮಗೊಂದು ಪತ್ರ ಬರೆಯಬೇಕೆಂದುಕೊಂಡು ಯೋಚಿಸುತ್ತಾ ಈ ಬರಹ ಬರೆಯುತ್ತಿದ್ದೇನೆ. Samaajamukhi youtube channel, samajamukhi.net News ಮೂಲಕ ನೀವು...

ಓಣಿಕೇರಿ ಮಾಸ್ತ್ಯ ರಾಮ ನಾಯ್ಕ ನಿಧನ

ಸಿದ್ದಾಪುರ, ತಾಲೂಕಿನ ಕಿಲಾರ ಓಣಿಕೇರಿಯ ಹಿರಿಯ ಸಾಮಾಜಿಕ ಕಾರ್ಯಕರ್ತ ಮಾಸ್ತ್ಯಾ ರಾಮ ನಾಯ್ಕ ಮಂಗಳವಾರ ನಿಧನರಾದರು. ಮೂವರು ಗಂಡುಮಕ್ಕಳು ಸೇರಿ ಅಪಾರ ಬಂಧು ಬಳಗ...

ಯಾರಾಗ್ತಾರೆ…ಸಿದ್ದಾಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ?

ಉತ್ತರಕನ್ನಡಜಿಲ್ಲೆಯ೧೩ ಬ್ಲಾಕ್ಕಾಂಗ್ರೆಸ್ ಗಳ ವೇಟ್ ಒಂದಾದರೆ ಸಿದ್ದಾಪುರದ ತಾಲೂಕಾ ಕಾಂಗ್ರೆಸ್ ಬಲವೇ ಬೇರೆ . ಒಂದು ಕಾಲದಲ್ಲಿ ಬಂಗಾರಪ್ಪ ಒಲುವಿನಿಂದ ಇಡೀ ಜಿಲ್ಲೆ ಸಿದ್ದಾಪುರವನ್ನು...

Latest Posts

“ಒಂದೇ ಕಲ್ಲಿಗೆ ಎರಡು ಹಕ್ಕಿ, ಸಿದ್ದಾಪುರ ಬ್ಲಾಕ್ ಕಾಂಗ್ರೆಸ್ ಕಕ್ಕಾಬಿಕ್ಕಿ!”

ವಿಶ್ಲೇಷಣೆ….. (- ಅನಾಮಿಕ) ​ಶಿರಸಿ ಮತ್ತು ಸಿದ್ದಾಪುರ, ಎರಡು ಕಣ್ಣುಗಳಿದ್ದಂತೆ, ಆದರೆ ಈ ಎರಡೂ ಕಣ್ಣುಗಳಿಗೆ ಒಂದೇ ಜೋಡಿ ಕನ್ನಡಕ! ಹೌದು, ಎರಡೂ ಕ್ಷೇತ್ರಗಳಿಗೆ ಒಬ್ಬರೇ ಶಾಸಕರು’. ಆದರೆ ಹೈಕಮಾಂಡ್ ಸೂತ್ರ ಮಾತ್ರ ಅತ್ತ ಶಿರಸಿಯಲ್ಲಿ ಬೆಂಕಿ ಹಚ್ಚಿದರೆ, ಇತ್ತ ಸಿದ್ದಾಪುರದಲ್ಲಿ ಅದೇ ಸೂತ್ರ ಸಾಹೇಬರಿಗೆ ಬಾಯಿಗೆ ಜಾರಿ ಬಿದ್ದ ತುಪ್ಪದಂತಾಗಿದೆ! ಬನ್ನಿ.. ಸಿದ್ದಾಪುರ...

Recommended For You

About the Author: Kanneshwar Naik

Leave a Reply

Your email address will not be published. Required fields are marked *