ಕೂಡ್ಲ ಕೃಷ್ಣನ ಕತೆ .. ಕಳ್ಳನೊಬ್ಬನ ಮಾನವೀಯ ಮುಖ…

…..ಕೆಲವೊಂದು ವಿಚಾರಗಳು ದಾಖಲಾಗದೆ ಐತಿಹ್ಯದ ರೂಪದಲ್ಲಿ ಚಲಾವಣೆಯಲ್ಲಿ ಉಳಿದು ಬಿಡುತ್ತವೆ.. ಆ ವ್ಯಕ್ತಿಯ.ಬಗ್ಗೆ ಯಾರೆಂದರೆ ಯಾರು ಕೂಡ ಸೂಕ್ತ ಮಾಹಿತಿ ನೀಡಿಲ್ಲ. ನನ್ನ ತಂದೆಯವರು ಹೇಳಿದ ವಿಷಯವನ್ನು ಕೇಳಿದ ನಾನು ನೆನಪಿನಲ್ಲಿ ಇದ್ದಷ್ಟನ್ನು ಮುಕ್ತವಾಗಿಸಿ ಬಿಡುತ್ತೇನೆ…ಕೂಡ್ಲ ಇದು ಹೊನ್ನಾವರ ತಾಲೂ ಕಿನ ಶರಾವತಿ ನದಿಯ ಉಪನದಿ ಗುಂಡಬಾಳ ನದಿ ದಂಡೆಯ ಮೇಲಿರುವ ಚಿಕ್ಕ ಹಳ್ಳಿ ನನ್ನ ತಂದೆಯ ಹುಟ್ಟೂ ರು ನನ್ನ ಅಜ್ಜ ಕೃಷ್ಣ ನಾಯ್ಕ ವಲಸೆ ಬಂದು ಗೂಡುಕಟ್ಟಿದ ಊರು..

ನನ್ನ ದೊಡ್ಡಪ್ಪ ಯಕ್ಷಗಾನ ಕ್ಷೇತ್ರದ ಮಹಾನ್ ಅರ್ಥದಾರಿ ನಾರಾಯಣ ನಾಯ್ಕರು ಬಾಳಿದ ಊರು..ಇದೆ ಊರು ಮಹಾನ ಕಳ್ಳ ಕೂಡ್ಲ ಕೃಷ್ಣನ ಮಾನವವೀಯ ಕಳ್ಳತನಗಳ ಕಥೆಯ ಕಣಜ..ಅಂತಹವರು ತುಂಬಾ ವಿರಳ, ಕಳ್ಳತನವನ್ನೆ ಕಸುಬಾಗಿಸಿಕೊಂಡ ವ್ಯಕ್ತಿ ಜನೋಪಕಾರಿಯಾಗಿ ದಂತಕಥೆಯಾದ..ಘಟನೆ ಇದು.. ಇದೆ ಕೂಡ್ಲ ಗ್ರಾಮದ ಗ್ರಾಮವಕ್ಕಲಿಗ ಮನೆತನದಲ್ಲಿ ನನ್ನಪ್ಪನಿಗಿಂತ 25 ವರ್ಷ ದೊಡ್ಡವನಾಗಿ ಹುಟ್ಟಿದವನು. ..(..ಆ ಕುಟುಂಬ ಈಗಲು ಅಲ್ಲಿ ಇದೆ… )..ಈ ಕೂಡ್ಲಕೃಷ್ಣ. ಚಿಕ್ಕ ವಯಸ್ಸಿನಿಂದಲೆ ಕಳ್ಳತನ ಶುರುಹಚ್ಚಿಕೊಂಡು ದೊಡ್ಡ ಕಳ್ಳನಾಗಿ, ಕಳ್ಳತನ ಮಾಡಿದ ಹಣವನ್ನೆಲ್ಲ ನಿರ್ಗತಿಕರಿಗೆ ದಾನ ಮಾಡಿ ಜನಮಾನಸದಲ್ಲಿ ಅಚ್ಚಳಿಯದೆ ಉಳಿದು, ದುರಂತ ಬಾಳುಬಾಳಿದ ವ್ಯತಿರಿಕ್ತ ವ್ಯಕ್ತಿಯಾಗಿ, ಉತ್ತರ ಕನ್ನಡ ಜಿಲ್ಲೆಯ.ಕರವಾಳಿಭಾಗದಲ್ಲಿ ದಂತಕಥೆಯಾಗಿ ಮರೆಯಾದವನು ಕೂಡ್ಲ ಕೃಷ್ಣ..ಆಡುಭಾಷೆಯಲ್ಲಿ ಅವನನ್ನು ಕೂಡ್ಲ ಕುಟ್ನ ಅಂತ ನೆನಪಿಸಿಕೊಳ್ಳುತ್ತಾರೆ..

. ಅವನ ಬಗ್ಗೆ ಅವನ ಕಳ್ಳತನಗಳ ಬಗ್ಗೆ ಅನೇಕ ಐತಿಹ್ಯಗಳಿವೆ..ತಾನು ಶ್ರೀಮಂತರ ಮನೆಯಲ್ಲಿ ಕಳ್ಳತನ ಮಾಡಿ ತಂದ ಹಣ ಬಂಗಾರವನ್ನು ಊಟಕ್ಕೆ ಗತಿಯೇ ಇಲ್ಲದ ಬಡವರಿಗೆ ಹಂಚಿಬಿಡುತ್ತಿದ್ದನಂತೆ… ಚಾಲೆಂಜ್ ಹಾಕಿ ಕಾಯುತ್ತಾ ಕುಳಿತವರ ಮನೆಯನ್ನು ಚಾಣಾಕ್ಷತನದಲ್ಲಿ ಕದ್ದು ಭೇಷ್ ಎನಿಸಿಕೊಂಡು ಮಾರನೆದಿನ ಅವರ ಹಣಬಂಗಾರವನ್ನು ಅವರಿಗೆ ಕೊಟ್ಟಾಗ ಊರಿಗೆ ಊರೆ ಕೂಡ್ಲ ಕುಟ್ನನ ಬಗ್ಗೆ ಮಾತಾಡಿಕೊಂಡಿತ್ತಂತೆ…ಯಕ್ಷಗಾನ ನೋಡುತ್ತಾ ಕುಳಿತ ವ್ಯಕ್ತಿ ಸದ್ದಿಲ್ಲದೆ ದೂರದ ಸಿದ್ಧಾಪುರದಲ್ಲಿ ಕಳ್ಳತನ ಮಾಡಿ ಬಂದು ಬೆಳಗಿನಜಾವ ಯಕ್ಷಗಾನ ಮೇಳದವರಿಗೆ ದುಡ್ಡು ಕೊಟ್ಟನಂತೆ… ಮುದುಕಿಯೊಬ್ಬಳು ಹಸಿವೆಯಿಂದ ಅವನ ಎದುರು ಹೊಟ್ಟೆ ಬಡಿದುಕೊಂಡಾಗ ನನ್ನ ಎದುರು ಹೊಟ್ಟೆ ಬಡಿದುಕೊಳ್ಳಬೇಡ ಮೇಲಿನದಾರಿಯ ದೊಡ್ಡ ಗೇರು ಮರದ ಬುಡದಲ್ಲಿ ಹೋಗಿ ಬಡಿದದು ಕೊ ಎಂದನಂತೆ.ಈ ಬೆರಕಿ ಮುದುಕಿ ಗೇರು ಮರದ ಬುಡದಲ್ಲಿ ಅಗೆದ ಹೊಸಮಣ್ಣು ಸರಿಸಿದಾಗ ಸಾಕಷ್ಟು ಬಂಗಾರವನ್ನು ಆತ ಕಳ್ಳತನ ಮಾಡಿ ಹೂತಿಟ್ಟಿದ್ದು ಸಿಕ್ಕಿತಂತೆ..(ಆ ಕುಟುಂಬ ಶ್ರೀಮಂತರಾಗಿ ಇಂದು ಅದೆ ಗ್ರಾಮದಲ್ಲಿ ಇದ್ದಾರೆ) ಆತ ಕಳ್ಳತನ ಮಾಡುವುದು ಕೇವಲ ಹವ್ಯಾಸಕ್ಕಾಗಿ ಮಾತ್ರವಂತೆ..ಕದ್ದು ತಂದು ಬೇರೆ ಬೇರೆ ನಿರ್ಗತಿಕರಿಗೆ ಹಂಚಿಬಿಡುತ್ತಿದ್ದನಂತೆ..ಅನೇಕ ಬಡವರ ಮನೆಯ ಹೆಣ್ಣು ಮಕ್ಕಳ ಮದುವೆಗೆ ಹಣ ನೀಡಿದ್ದನಂತೆ…ಅಂತ ಕೂಡ್ಲ ಕುಟ್ನ ಈಗ ನಾನಿರುವ ಬಿಸಲಕೊಪ್ಪಕ್ಕೆ ಒಮ್ಮೆ ಕಳ್ಳತನಕ್ಕೆ ಬಂದು ಸೋತು ಹೋದನಂತೆ..

ಬಿಸಲಕೊಪ್ಪದ ಪ್ರತಿಷ್ಠಿತ ಭಟ್ಟರ ಮನೆ ಕುಟುಂಬ ಆ ಕಾಲದಲ್ಲಿ ಉತ್ತರ ಕನ್ನಡ ಜಿಲ್ಲೆಯ ಶ್ರೀಮಂತ ಕುಟುಂಬಗಳಲ್ಲೊಂದು ಅವರ ಮನೆ ಕಳ್ಳತನ ಮಾಡಲು ಬಂದ ಕುಟ್ನ ಮೂರು ದಿನ ಅವರ ಮನೆಯ ಮಾಳಿಗೆಯ ಮೇಲೆ ಉಳಿದವನು ಕೊನೆಗೆ ನಾನು ಕಳ್ಳತನಕ್ಕೆ ಬಂದೆ ಆದರೆ ನನ್ನಿಂದ ನಿಮ್ಮ ಮನೆ ಕಳ್ಳತನ ಮಾಡಲು ಆಗಲಿಲ್ಲ. …ಸ್ವಲ್ಪ ಹಾಲು ಕೊಡಿ ಎಂದು ಕುಡಿದು ಇನ್ನಾರಿಂದಲೂ ನಿಮ್ಮ ಮನೆ ಕಳ್ಳತನ ಮಾಡಲು ಸಾಧ್ಯವಿಲ್ಲ ಎಂದು ಆಶೀರ್ವಾದವಿತ್ತು ಹೋದನಂತೆ..( ಅವನು ಹಾಲು ಕುಡಿದ ಮನೆಯ ಕಳ್ಳತನ ಮಾಡುತ್ತಿರಲಿಲ್ಲವಂತೆ ಅಷ್ಟು ನಿಯತ್ತು ಇತ್ತ.. ಇಗಿನ ಉಂಡ ಮನೆಯ ಗಳ ಎಣಿಸುವವರಿಗೆ )ಒಮ್ಮೆ ಅವನ ಹಿಂದೆ ಪೋಲಿಸರು ಬಿದ್ದರಂತೆ ಮನೆಯ ಮೇಲ್ಚಾವಣಿ ಏರಿ ಉದ್ದಕಾವಿನ ಛತ್ರಿ(ಆಗ ಉದ್ದ ಮರದ ಕಾವಿನ ಛತ್ರಿಗಳೆ ಬಳಕೆಯಲ್ಲಿದ್ದವು) ಹಿಡಿದು ಕೆಳಗೆ ಹಾರಿ ತಪ್ಪಿಸಿಕೊಂಡನಂತೆ…. ಪ್ಯಾರಾಚ್ಯೂಟ್ ಬಳಕೆ ಮಾಡಿದಂತೆ….ಮುಂದೆ ಗದ್ದೆ ಬಯಲೊಂದರಲ್ಲಿ ಅವನನ್ನು ಪೋಲಿಸರು ಹಿಡಿದು ಮೈತುಂಬಾ ಹಗ್ಗ ಸುತ್ತಿ ಎತ್ತಿಕೊಂಡು ಹೋಗಿ ಜೈಲಿಗೆ ಹಾಕಿದರಂತೆ..ಆತ ಅಲ್ಲಿಯೆ ತೀರಿಕೊಂಡನಾ ಬಿಡುಗಡೆಯಾಗಿತ್ತಾ ಯಾವ ಸುಳಿವು ನನಗೆ ಸಿಗಲಿಲ್ಲ….ಅವನ ಬಗ್ಗೆ ತುಂಬಾ ಕಥೆಗಳಿವೆ ದೂರದ ಅಂಕೋಲಾದ ಮಿತ್ರ ವಿನೋದ ನಾಯಕ ವಂದಿಗೆ ಅವರ ತಂದೆ ಗಾಂಧಿ ಹುಟ್ಟಿದ ಪೋರಬಂದರಿನಲ್ಲಿ ನೌಕರಿ ಮಾಡಿದ್ದವರು,,..ಅವರು ಈ ಕೂಡ್ಲ ಕೃಷ್ಣನ ಒಂದಷ್ಟು ಕಥೆಗಳನ್ನು ನನಗೆ ಹೇಳಿದ್ದರು. ಹಾಗೆ ಕಳ್ಳತನ ಮಾಡುವ ಕುಟ್ನ ಕಳ್ಳತನ ಮಾಡುವ ಮನಸ್ಸಿನವನಲ್ಲವಂತೆ . ಅವರ ಮನೆಯಲ್ಲಿಯ ಯಾವುದೊ ದೈವಿ ಶಕ್ತಿ ಆತನ ಮೈ ಯಲ್ಲಿ ಬೆರೆತು ಆತನನ್ನು ಕಳ್ಳನನ್ನಾಗಿ ಮಾಡಿಸುತ್ತಿತಂತೆ…ಆತ ಕಳ್ಳತನಕ್ಕೆ ಹೋದಲ್ಲಿ ಸಿಕ್ಕಿಬೀಳುತ್ತಿರಲಿಲ್ಲವಂತೆ…. ಉಹಾಪೋಹದ ಆಧಾರದಲ್ಲಿ ಆತನನ್ನು ಬಂಧಿಸಿದ ಪೋಲಿಸರು ಜೈಲಿಗೆ ಹಾಕಿಬಿಟ್ಟರಂತೆ…ಆತ ಕೊಲೆ ಸುಲಿಗೆ ಮಾಡುವ ಕಳ್ಳನಲ್ಲ..ಈ ಕಥೆಗಳು ಸತ್ಯ ಆದರೆ ಸಾಕ್ಷಾಧಾ ರಗಳ ಕೊರತೆಯಿಂದ .ಇಲ್ಲಿಗೆ ಮುಗಿಸುವೆ…

-ರಾಜು ನಾಯಕ…

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

ಗ್ರಾಮೀಣ ಸೇವಾ ಸಹಕಾರಿ ಸಂಘಗಳು ಮುಳುಗುತ್ತಿವೆ..! ಜಾಗೃತೆ..

ರೈತರ ಅನುಕೂಲಕ್ಕಿರುವ ಗ್ರಾಮೀಣ ಸೇವಾ ಸಹಕಾರಿ ಸಂಘಗಳು ಮುಳುಗುತ್ತಿವೆ ಎನ್ನುವುದಕ್ಕೆ ಅನೇಕ ದೃಷ್ಟಾಂತಗಳಿವೆ. ಆದರೆ ಸಹಕಾರಿ ಕ್ಷೇತ್ರ ನಿಯಂತ್ರಿಸುವವರು ತಮ್ಮ ಅನುಕೂಲಕ್ಕೆ ಸಂಘಗಳನ್ನು ಬಳಸಿಕೊಂಡು...

bhaarat jodo… ಯುವ ಸಂಘ ನೋಂದಣಿಗೆ ಶಾಸಕರ ಮನವಿ

ಸಿದ್ದಾಪುರ: ರಾಜ್ಯದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ರ ಮಹತ್ವಾಕಾಂಕ್ಷೆ ಭಾರತ್ ಜೋಡೋ ಯುವ ಸಂಘಗಳನ್ನು ತಕ್ಷಣ ನೊಂದಣಿ ಮಾಡಿಸಿಕೊಂಡು ಸರ್ಕಾರದ ಅನುದಾನ ಸದುಪಯೋಗ ಪಡಿಸಿಕೊಳ್ಳುವಂತೆ ಶಿರಸಿ-ಸಿದ್ದಾಪುರ...

ಶ್ರೇಷ್ಠ ಶಿಕ್ಷಕ ವಿರೂಪಾಕ್ಶಪ್ಪ ಮೇಟಿ

ಕೆ.ಪಿ.ಸಿ.ಸಿ ಯಿಂದ ನೀಡಲಾಗುವ ಮಾಜಿ ಪ್ರಧಾನಿ ಶ್ರೀ ರಾಜೀವ ಗಾಂಧಿ ರಾಜ್ಯ ಮಟ್ಟದ ಶ್ರೇಷ್ಠ ಶಿಕ್ಷಕ ಪ್ರಶಸ್ತಿಗೆ ಆಯ್ಕೆಯಾದ ಉಪನ್ಯಾಸಕ ವಿರುಪಾಕ್ಷಪ್ಪ ಮೇಟಿ ಸಿದ್ದಾಪುರ,ಸೆ,೩:-...

kolsirsi vss issue…part -04 ನಾನೇ ಹೊಣೆ ನಾನೇ ಜವಾಬ್ದಾರಿ ಎಂದ ಸಿಇಒ ಮಾಳವಿ….

ಕೋಲ ಶಿರಸಿ vss ನ ಪ್ರಕರಣ ಹಗರಣದ ಸ್ವರೂಪ ಪಡೆದಿದೆ… ಈ ಅಪರಾ ತಪರಾ ರೂವಾರಿ ಸಿಇಒ/ ಸೆಕ್ರೆಟರಿ ಎಂಬುದು ನಿರ್ವಿವಾದ. ಈ ಬಗ್ಗೆ...

ಕೋಲಶಿರಸಿ vss ಆಡಳಿತ ಸಮೀತಿ & ಸಿಇಒ ವಿರುದ್ಧ ಇಲಾಖೆಗೆ ದೂರು

ಸಿದ್ದಾಪುರ ತಾಲೂಕಿನ ಕೋಲಶಿರಸಿ vss ನಲ್ಲಿ ನಡೆದಿದೆ ಎನ್ನಲಾದ ಬಹುಕೋಟಿ ಹಗರಣದ ಹಿಂದೆ ಇರುವ ಹಾಲಿ ಆಡಳಿತ ಮಂಡಳಿ & ಸಿಇಒ/ ಕಾರ್ಯದರ್ಶಿ ಗಳ...

Latest Posts

ಗ್ರಾಮೀಣ ಸೇವಾ ಸಹಕಾರಿ ಸಂಘಗಳು ಮುಳುಗುತ್ತಿವೆ..! ಜಾಗೃತೆ..

ರೈತರ ಅನುಕೂಲಕ್ಕಿರುವ ಗ್ರಾಮೀಣ ಸೇವಾ ಸಹಕಾರಿ ಸಂಘಗಳು ಮುಳುಗುತ್ತಿವೆ ಎನ್ನುವುದಕ್ಕೆ ಅನೇಕ ದೃಷ್ಟಾಂತಗಳಿವೆ. ಆದರೆ ಸಹಕಾರಿ ಕ್ಷೇತ್ರ ನಿಯಂತ್ರಿಸುವವರು ತಮ್ಮ ಅನುಕೂಲಕ್ಕೆ ಸಂಘಗಳನ್ನು ಬಳಸಿಕೊಂಡು ಸಹಕಾರಿ ಕ್ಷೇತ್ರ ಜನಪರ ಎನ್ನುವ ಸುಳ್ಳು ಪ್ರಚಾರದಲ್ಲಿ ತೊಡಗಿದ್ದಾರೆ. ಸಿದ್ದಾಪುರ ಕೋಲಶಿರ್ಸಿ ಸೇವಾ ಸಹಕಾರಿ ಸಂಘದ ಬಹುಕೋಟಿ ಹಗರಣದ ನಂತರ ಒಂದೊಂದೇ ಗುಟ್ಟುಗಳು ರಟ್ಟಾಗತೊಡಗಿವೆ. ಸಿದ್ದಾಪುರದ ಪ್ರಮುಖ ಸಹಕಾರಿಗಳು,...

Recommended For You

About the Author: Kanneshwar Naik

Leave a Reply

Your email address will not be published. Required fields are marked *