ಕನ್ಯಾಡಿ ವರ್ಧಂತಿ ಉತ್ಸವಕ್ಕೆ ಆಹ್ವಾನ, ಹಾರ್ಸಿಕಟ್ಟಾದಲ್ಲಿ 5 ದಿವಸದ ಗಣೇಶೋತ್ಸವ


ಧರ್ಮಸ್ಥಳ ಕನ್ಯಾಡಿ ಶ್ರೀರಾಮಕ್ಷೇತ್ರದ ಬ್ರಹ್ಮಾನಂದ ಸ್ವಾಮಿಗಳ ಪಟ್ಟಾಭಿಷೇಕದ 11 ನೇ ವರ್ಧಂತಿ ಉತ್ಸವ ಸೆ.03 ರಂದು ನಡೆಯಲಿದ್ದು ಈ ಕಾರ್ಯಕ್ರಮಕ್ಕೆ ತಾಲೂಕಿನ ಜನತೆ ಬರಬೇಕೆಂದು ಶ್ರೀರಾಮ ಕ್ಷೇತ್ರ ಸೇವಾ ಸಮೀತಿ ತಾಲೂಕಾಧ್ಯಕ್ಷ ವಿ.ಎನ್. ನಾಯ್ಕ ಬೇಡ್ಕಣಿ ಮನವಿ ಮಾಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಶ್ರೀರಾಮ ಕ್ಷೇತ್ರ ವಿದ್ಯೆ, ಆರೋಗ್ಯ, ಗೋಪಾಲನೆ ಸೇರಿದಂತೆ ಸಮಾಜದ ಪೂರಕ ಕೆಲಸಗಳಿಂದ ಪ್ರಸಿದ್ಧವಾಗುತ್ತಿದೆ. ಮಳೆ, ನೆರೆ ಹಿನ್ನೆಲೆಯಲ್ಲಿ ಈ ವರ್ಷ ಸರಳವಾಗಿ ವಿಧಿವತ್ತಾಗಿ ಆಚರಿಸುತ್ತಿರುವ ವರ್ಧಂತಿ ಉತ್ಸವಕ್ಕೆ ಬರಲು ಸಮಾಜದ ಸರ್ವರನ್ನು ಆಹ್ವಾನಿಸಿದರು. ಸುದ್ದಿಗೋಷ್ಠಿಯಲ್ಲಿ ಪದ್ಮಾಕರ ನಾಯ್ಕ, ಶಂಕರಮೂರ್ತಿ ನಾಯ್ಕ ಹಾಗೂ ನಾಮಧಾರಿ ಅಭಿವೃದ್ಧಿ ಸಂಘದ ಎಸ್.ಎಮ್.ನಾಯ್ಕ ಉಪಸ್ಥಿತರಿದ್ದರು.
ಹಾರ್ಸಿಕಟ್ಟಾದಲ್ಲಿ 5 ದಿವಸದ ಗಣೇಶೋತ್ಸವ
ಸಿದ್ದಾಪುರ
ತಾಲೂಕಿನ ಹಾರ್ಸಿಕಟ್ಟಾ ಗಜಾನನೋತ್ಸವ ಸಮಿತಿಯ 37 ನೇವರ್ಷದ ಗಣೇಶೋತ್ಸವ ಸೆ.2ರಿಂದ 6ರವರೆಗೆ ವಿವಿಧ ಧಾರ್ಮಿಕ ಹಾಗೂ ಸಾಂಸ್ಕøತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.
ಸೆ.2ರಂದು ಬೆಳಗ್ಗೆ 11ಕ್ಕೆ ವೇ.ಮೂ.ಶ್ರೀಧರ ಭಟ್ಟ ಮಾಣಿಕ್ನಮನೆ ಪೌರೋಹಿತ್ಯದಲ್ಲಿ ಮಂಗಲಮೂರ್ತಿ ಪ್ರತಿಷ್ಠಾಪನೆ, ಸಂಜೆ 6ರಿಂದ ಸ್ಥಳೀಯರಿಂದ ಭಜನೆ. 3ರಂದು ಬೆಳಗ್ಗೆ 11ಕ್ಕೆ ಸತ್ಯಗಣಪತಿ ವೃತ, ಸಂಜೆ 7ರಿಂದ ಯಕ್ಷಚಂದನ ದಂಟಕಲ್ ಹಾಗೂ ಅತಿಥಿ ಕಲಾವಿದರಿಂದ ಮಹಾಮಂತ್ರಿ ದುಷ್ಟಬುದ್ಧಿ ಯಕ್ಷಗಾನ. 4ರಂದು ಬೆಳಗ್ಗೆ 11ಕ್ಕೆ ಗಣಹೋಮ ಹಾಗೂ ದೇವಿ ಪಾರಾಯಣ, ಸಂಜೆ 6ರಿಂದ ದಿ.ಸರ್ವೋತ್ತಮ ಕೃಷ್ಣ ಭಟ್ಟ ಮೆಮೋರಿಯಲ್ ಟ್ರಸ್ಟ್ ಸಿದ್ದಾಪುರ ದಿಂದ ಭಜನೆ ಹಾಗೂ ವಿಷ್ಣು ಸಹಸ್ರನಾಮ ಪಠಣ, 7ರಿಂದ ಬೇಡ್ಕಣಿಯ ಮಾರುತಿ ಪ್ರಸಾದಿತ ಯಕ್ಷಗಾನ ಮಂಡಳಿಯವರಿಂದ ಶ್ರೀಕಾಂತ ಹೆಗ್ಗೋಡು ನಿರ್ದೇಶನದಲ್ಲಿ ಹಾಗೂ ಲಕ್ಷ್ಮಣ ನಾಯ್ಕ ಬೇಡ್ಕಣಿ ಸಂಯೋಜನೆಯಲ್ಲಿ ಶ್ರೀ ದೇವಿ ಮಹಾತ್ಮೆ ಯಕ್ಷಗಾನ.5ರಂದು ಬೆಳಗ್ಗೆ 11ಕ್ಕೆ ಶನಿಕಥೆ, ಸಂಜೆ 5ರಿಂದ ಸ್ಥಳೀಯ ಶಾಲಾ ಮಕ್ಕಳಿಂದ ಕಾರ್ಯಕ್ರಮ ವೈವಿಧ್ಯ. ಪ್ರತಿಮಾ ಭಾಗ್ವತ್ ಹುಲಿಮನೆಳಿಂದ ಭರತನಾಟ್ಯ, ಯಕ್ಷತರಂಗಿಣಿ ಹಾರ್ಸಿಕಟ್ಟಾ ದಿಂದ ನಂದನ ನಾಯ್ಕ ಅರಶಿನಗೋಡ ನಿರ್ದೇಶನದಲ್ಲಿ ಯಕ್ಷನೃತ್ಯ ನಂತರ ನಾರಾಯಣದಾಸ ಹೀಪನಳ್ಳಿ ಅವರಿಂದ ಹರಿಕೀರ್ತನೆ.6ರಂದು ಬೆಳಗ್ಗೆ 11ಕ್ಕೆ ಸತ್ಯನಾರಾಯಣವೃತ, ಮಧ್ಯಾಹ್ನ 4ಕ್ಕೆ ಮಹಾಮಂಗಳಾರತಿ,ನಂತರ ಕೊಡ್ಗಿಬೈಲ್ ಸಿದ್ಧಿವಿನಾಯಕ ಡೊಳ್ಳಿನ ತಂಡದವರೊಂದಿಗೆ ಗಣಪತಿ ಮೂರ್ತಿಯ ವಿಸರ್ಜನೆ ನಡೆಯಲಿದೆ.

ಉತ್ತಮ ಸೇವೆಗೆ ಎಲ್‍ಐಸಿ ಮಾದರಿ

ಸಿದ್ದಾಪುರ;ಸೆ.02- ಇಂದು ನಾವು ಬಹುತೇಕ ಯಾವುದೇ ಆಫೀಸಿಗೆ ಹೋದರೂ ಅಲ್ಲಿ ನಮ್ಮನ್ನು ಯಾರೂ ಗಮನಿಸುವುದಿಲ್ಲ. ವಯಸ್ಸಾದವರಿಗೂ ಏನಾಗಬೇಕೆಂದು ಕೇಳಿ ಸಹಕರಿಸುವುದಿಲ್ಲ. ಆದರೆ ಭಾರತೀಯ ಜೀವವಿಮಾ ನಿಗಮದ ಕಾರ್ಯಾಲಯಗಳಲ್ಲಿಯ ಅಧಿಕಾರಿಗಳು, ಸಿಬ್ಬಂದಿಗಳು ಗ್ರಾಹಕರನ್ನು ಉತ್ತಮವಾಗಿ ನಡೆಸಿಕೊಳ್ಳುತ್ತಾರೆ. ನಿಗಮದಿಂದ ನಮಗೆ ಎಷ್ಟೇ ಹಣ ಮರಳಿ ಬರುವುದಿದ್ದರೂ ಅದನ್ನು ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೇ ನ್ಯಾಯಯುತವಾಗಿ ದೊರೆಯುವಂತೆ ಮಾಡುತ್ತಾರೆ ಎಂದು ವಯೋವೃದ್ಧ ನಿವೃತ್ತ ಶಿಕ್ಷಕ ಈರಾ ಕನ್ನಾ ನಾಯ್ಕ ಶಿರಳಗಿ ಹೇಳಿದ್ದಾರೆ.
ಅವರು ಭಾರತೀಯ ಜೀವವಿಮಾ ನಿಗಮದ ಸ್ಥಳೀಯ ಸಂಪರ್ಕ ಶಾಖೆಯಲ್ಲಿ ನಿಗಮದ 63 ನೇ ವಾರ್ಷಿಕೋತ್ಸವವನ್ನು ರವಿವಾರ ಉದ್ಘಾಟಿಸಿ ಮಾತನಾಡುತ್ತಿದ್ದರು. ದೇಶದ ಅಭಿವೃದ್ಧಿಯಲ್ಲಿ ತನ್ನ ಕೈ ಜೋಡಿಸುತ್ತಿರುವ ಎಲ್‍ಐಸಿ ಸಂಸ್ಥೆಯು ಸೂರ್ಯಚಂದ್ರರಿರುವವರೆಗೂ ಬೆಳಗಲಿ ಎಂದು ಅವರು ಹಾರೈಸಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಪರ್ಕ ಶಾಖೆಯ ಶಾಖಾಧಿಕಾರಿ ರಘುಕುಲೇಂದ್ರ ಎಸ್.ಆರ್. ಎಲ್‍ಐಸಿ ಇಂದು ಪ್ರಪಂಚದ ಪ್ರತಿಷ್ಠಿತ ಸಂಸ್ಥೆಯಾಗಿ ಬೆಳೆದಿದೆ. ತನ್ನಲ್ಲಿಯ ಹೆಚ್ಚಿನ ಹಣವನ್ನು ಕೇಂದ್ರ ಸರಕಾರದ ವಿವಿಧ ಯೋಜನೆಗಳಲ್ಲಿ ತೊಡಗಿಸುತ್ತಿದೆಯಲ್ಲದೆ, ಪ್ರತಿವರ್ಷವೂ ಕೇಂದ್ರಕ್ಕೆ ಸಹಸ್ರಾರು ಕೋಟಿ ರೂ.ಗಳ ತನ್ನ ಲಾಭಾಂಶವನ್ನು ನೀಡುತ್ತಾ ಬಂದಿದೆ. ಕಳೆದ ತಿಂಗಳ ಕೊನೆಯಲ್ಲಿ ಜೀವನ ಶಾಂತಿ ಪಾಲಿಸಿಯ ಮೂಲಕ ನಿಗಮವು 50 ಸಾವಿರ ಕೋಟಿ ರೂ.ಗಳಿಗೂ ಮೀರಿ ಪ್ರಥಮ ಪ್ರೀಮಿಯಂ ಆದಾಯಗಳಿಸುವ ಮೂಲಕ ದಾಖಲೆ ನಿರ್ಮಿಸಿದೆ. ಸಿದ್ದಾಪುರ ಸಂಪರ್ಕ ಶಾಖೆ ಸಹ ಉತ್ತಮ ಪ್ರಗತಿ ತೋರಿದ್ದು ವಿಭಾಗದಲ್ಲಿ ಪ್ರಥಮ ಸ್ಥಾನದ ಹೆಗ್ಗಳಿಕೆಗೆ ಪಾತ್ರವಾಗಿದೆ ಎಂದರು. ನಿಗಮದ 63 ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ ನಮ್ಮೆಲ್ಲಾ ಗ್ರಾಹಕರಿಗೂ ಸುಖ ಸಮೃದ್ಧಿ ದೊರೆಯಲೆಂದು ಪ್ರಾರ್ಥಿಸುತ್ತೇವೆ ಎಂದರು. ಅಭಿವೃದ್ಧಿ ಅಧಿಕಾರಿ ಎಸ್.ಜಿ.ಶಾನಭಾಗ, ಸಿಬ್ಬಂದಿ ಭರತ ಶಹಾ, ಹಿರಿಕಿರಿಯ ಪ್ರತಿನಿಧಿಗಳು ಪಾಲ್ಗೊಂಡಿದ್ದರು. ಅಭಿವೃದ್ಧಿ ಅಧಿಕಾರಿ ದೀಪಕ ಹೆಗಡೆ ವಂದನಾರ್ಪಣೆ ಮಾಡಿದರು.

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

ಭಿತ್ತಿಯ ಚಿತ್ರ ಬಿ. ಡಿ. ಹಿರೇಮಠ

ಬಿ. ಡಿ. ಹಿರೇಮಠ… ಯಾರಿಗೆ ಗೊತ್ತಿಲ್ಲ ಹೇಳಿ….೨೦ ವರ್ಷಗಳ ಹಿಂದೆ ಹೈ ಕೋರ್ಟ್ ಧಾರವಾಡ ವಿಭಾಗೀಯ ಪೀಠಕ್ಕಾಗಿ ಹೋರಾಡಿ ಮನೆ ಮಾತಾಗಿದ್ದ ಬಿಡಿ ಹಿರೇಮಠ...

ಶಾಲೆಗೆ ಹೋಗದ ರಾಜ!

ಅಕ್ಷರ ಕಲಿಯದೇ ಆಕಾಶದೆತ್ತರಕ್ಕೆ ಬೆಳೆದ ಅಪರೂಪದ ನಟ ಅನರ್ಘ್ಯ ರತ್ನ. ಮತ್ತೇ ಶಾಲೆಗೆ ಮುಖ ತೋರಿಸಲೇ ಇಲ್ಲ.

ಗ್ರಾಮೀಣ ಸೇವಾ ಸಹಕಾರಿ ಸಂಘಗಳು ಮುಳುಗುತ್ತಿವೆ..! ಜಾಗೃತೆ..

ರೈತರ ಅನುಕೂಲಕ್ಕಿರುವ ಗ್ರಾಮೀಣ ಸೇವಾ ಸಹಕಾರಿ ಸಂಘಗಳು ಮುಳುಗುತ್ತಿವೆ ಎನ್ನುವುದಕ್ಕೆ ಅನೇಕ ದೃಷ್ಟಾಂತಗಳಿವೆ. ಆದರೆ ಸಹಕಾರಿ ಕ್ಷೇತ್ರ ನಿಯಂತ್ರಿಸುವವರು ತಮ್ಮ ಅನುಕೂಲಕ್ಕೆ ಸಂಘಗಳನ್ನು ಬಳಸಿಕೊಂಡು...

bhaarat jodo… ಯುವ ಸಂಘ ನೋಂದಣಿಗೆ ಶಾಸಕರ ಮನವಿ

ಸಿದ್ದಾಪುರ: ರಾಜ್ಯದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ರ ಮಹತ್ವಾಕಾಂಕ್ಷೆ ಭಾರತ್ ಜೋಡೋ ಯುವ ಸಂಘಗಳನ್ನು ತಕ್ಷಣ ನೊಂದಣಿ ಮಾಡಿಸಿಕೊಂಡು ಸರ್ಕಾರದ ಅನುದಾನ ಸದುಪಯೋಗ ಪಡಿಸಿಕೊಳ್ಳುವಂತೆ ಶಿರಸಿ-ಸಿದ್ದಾಪುರ...

ಶ್ರೇಷ್ಠ ಶಿಕ್ಷಕ ವಿರೂಪಾಕ್ಶಪ್ಪ ಮೇಟಿ

ಕೆ.ಪಿ.ಸಿ.ಸಿ ಯಿಂದ ನೀಡಲಾಗುವ ಮಾಜಿ ಪ್ರಧಾನಿ ಶ್ರೀ ರಾಜೀವ ಗಾಂಧಿ ರಾಜ್ಯ ಮಟ್ಟದ ಶ್ರೇಷ್ಠ ಶಿಕ್ಷಕ ಪ್ರಶಸ್ತಿಗೆ ಆಯ್ಕೆಯಾದ ಉಪನ್ಯಾಸಕ ವಿರುಪಾಕ್ಷಪ್ಪ ಮೇಟಿ ಸಿದ್ದಾಪುರ,ಸೆ,೩:-...

Latest Posts

ಭಿತ್ತಿಯ ಚಿತ್ರ ಬಿ. ಡಿ. ಹಿರೇಮಠ

ಬಿ. ಡಿ. ಹಿರೇಮಠ… ಯಾರಿಗೆ ಗೊತ್ತಿಲ್ಲ ಹೇಳಿ….೨೦ ವರ್ಷಗಳ ಹಿಂದೆ ಹೈ ಕೋರ್ಟ್ ಧಾರವಾಡ ವಿಭಾಗೀಯ ಪೀಠಕ್ಕಾಗಿ ಹೋರಾಡಿ ಮನೆ ಮಾತಾಗಿದ್ದ ಬಿಡಿ ಹಿರೇಮಠ ಅಂದರೆ ಎಲ್ಲರ ಭಿತ್ತಿಯ ಚಿತ್ರ… ಅವಳಿ ನಗರ ಹುಬ್ಬಳ್ಳಿ – ಧಾರವಾಡದಲ್ಲಿ ಉತ್ತರ ಕರ್ನಾಟಕ ಅಂದರೆ…. ಅದು ಪಾಪು, ಚಂಪಾ… ಪಾವಟೆ, ನಂತರದ ದೊಡ್ಡ ಹೆಸರು. ಅಧಿಕಾರ ಇಲ್ಲದೆ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *