ಎರಡುವಾರಗಳ ಕಾಲ ಮಿತಿಯಲ್ಲಿ ಸಾರಿಗೆ ಅವ್ಯವಸ್ಥೆ ಸರಿಪಡಿಸಲು ಭರವಸೆ

ಸಿದ್ಧಾಪುರ ತಾಲೂಕಿನ ಬಸ್ ಸಂಪರ್ಕದ ಅವ್ಯವಸ್ಥೆ ಪರಿಹಾರಕ್ಕೆ ಇಂದು ಇಲ್ಲಿಯ ತಾ.ಪಂ.ನಲ್ಲಿ ಕರೆದ ಸಾರಿಗೆ ಅದಾಲತ್ ಯಶಸ್ವಿಆಗುವ ಸೂಚನೆ ದೊರೆತಿದೆ. ಕಳೆದ ಎರಡು ವರ್ಷಗಳಿಂದ ತಾಲೂಕು ಪಂಚಾಯತ್ ಸಭೆ ಸೇರಿದಂತೆ ವಿವಿಧೆಡೆ ವ್ಯಕ್ತವಾಗುತ್ತಿದ್ದ ಸಾರಿಗೆ ಅವ್ಯವಸ್ಥೆ ಆರೋಪದ ಹಿನ್ನೆಲೆಯಲ್ಲಿ ಇಂದು ತಾ.ಪಂ. ಸಭಾಭವನದಲ್ಲಿ ತಾ.ಪಂ. ಅಧ್ಯಕ್ಷ ಸುಧೀರ್ ಗೌಡರ್ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು.

ಸಭೆಯಲ್ಲಿ ಉಪಸ್ಥಿತರಿದ್ದ ರಾಜ್ಯ ಸಾರಿಗೆ ಸಂಸ್ಥೆ ಅಧಿಕಾರಿಗಳು ಸಾರ್ವಜನಿಕರ ಅಹವಾಲು ಆಲಿಸಿದರು. ವಿದ್ಯಾರ್ಥಿಗಳೊಂದಿಗೆ ದೊಡ್ಡ ಸಂಖ್ಯೆಯಲ್ಲಿ ಸೇರಿದ್ದ ಸಾರ್ವಜನಿಕರು ಇಡೀ ತಾಲೂಕಿನ ಸಾರಿಗೆ ಅವ್ಯವಸ್ಥೆ ಅದರಿಂದಾಗುವ ತೊಂದರೆಗಳ ಬಗ್ಗೆ ಅಧಿಕಾರಿಗಳು, ಸಭೆಯ ಗಮನ ಸೆಳೆದರು. ಬೇಡ್ಕಣಿ ಸರ್ಕಾರಿ ಪದವಿ ಮಹಾವಿದ್ಯಾಲಯ, ಅವರಗುಪ್ಪಾದಲ್ಲಿರುವ ತಾಂತ್ರಿಕ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳು ಹಾಗೂ ತಾಲೂಕಿನ ಪದವಿಪೂರ್ವ ಮಹಾವಿದ್ಯಾಲಯಗಳ ವಿದ್ಯಾರ್ಥಿಗಳು ಸಾರಿಗೆ ಅವ್ಯವಸ್ಥೆಯಿಂದ ತಮಗಾಗುವ ತೊಂದರೆ ತೆರೆದಿಟ್ಟರು. ಅದಕ್ಕೆ ಧ್ವನಿ ಸೇರಿಸಿದ ಜನಪ್ರತಿನಿಧಿಗಳು ತೊಂದರೆ, ಸಮಸ್ಯೆಗಳಿಗೆ ಪರಿಹಾರದ ಸಲಹೆ-ಸೂಚನೆ ನೀಡಿದರು.
ಈ ಅಹವಾಲುಗಳನ್ನು ಆಲಿಸಿದ ಅಧಿಕಾರಿಗಳು ವಿದ್ಯಾರ್ಥಿಗಳು, ಜನಪ್ರತಿನಿಧಿಗಳ ಸಲಹೆ,ಸೂಚನೆಗಳಂತೆ ಮಾರ್ಗ, ಸಮಯ ಬದಲಾವಣೆ ಸೇರಿದಂತೆ ಅಗತ್ಯ ಕೆಲಸಗಳನ್ನು ಎರಡು ವಾರಗಳಲ್ಲಿ ಪೂರ್ತಿಗೊಳಿಸುವಂತೆ ಭರವಸೆ ನೀಡಿದರು.

ಈ ಸಭೆ, ಸಭೆಯ ಸಲಹೆ,ಸೂಚನೆ ಭರವಸೆಗಳ ಹಿನ್ನೆಲೆಯಲ್ಲಿ ಕಾಲಮಿತಿಯಲ್ಲಿ ತಾಲೂಕಿನ ಸಾರಿಗೆ ಸಮಸ್ಯೆಗಳಿಗೆ ಪರಿಹಾರ ದೊರೆಯಬಹುದೆಂದು ನಿರೀಕ್ಷಿಸಲಾಗಿದೆ.
ಶಿರಸಿ ವಿಭಾಗದಲ್ಲಿ 125 ಚಾಲಕ, ನಿರ್ವಾಹಕರ ಕೊರತೆ ಇದೆ. ಇಂಥ ತೊಂದರೆಗಳ ಈ ಸ್ಥಿತಿಯಲ್ಲಿ ನಮ್ಮ ಮಿತಿಯಲ್ಲಿ ಉತ್ತಮ ಸೇವೆ ನೀಡುವ ಪ್ರಯತ್ನ ಮಾಡುತಿದ್ದೇವೆ. ಸಾರ್ವಜನಿಕರು, ವಿದ್ಯಾರ್ಥಿಗಳು ಸಹಕರಿಸದಿದ್ದರೆ ಕಷ್ಟ

-ಸುರೇಶ್ ನಾಯ್ಕ (ಡಿ.ಟಿ.ಓ.)


ನಮ್ಮ ಶಾಲಾ ಕಾಲೇಜಿನ ಸಮಯಕ್ಕೆ ಅನುಗುಣವಾಗಿ ಬಸ್ ವ್ಯವಸ್ಥೆ ಮಾಡಬೇಕು. ಈಗಿನ ಸ್ಥಿತಿಯಲ್ಲಿ ಕಾಲೇಜು ವಿದ್ಯಾರ್ಥಿಗಳಲ್ಲಿ 50% ಕ್ಕಿಂತ ಹೆಚ್ಚಿನ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಈ ತೊಂದರೆಗಳ
ಬಾಧಿತರಾಗಿದ್ದಾರೆ.

– ವಿದ್ಯಾರ್ಥಿ ಮುಖಂಡರು

ಸಿದ್ಧಾಪುರದಲ್ಲಿ ಮಾರ್ಗಮಧ್ಯದಲ್ಲಿ ಕೆಟ್ಟುನಿಲ್ಲುವ ಬಸ್‍ಗಳ ಸಂಖ್ಯೆ ಹೆಚ್ಚುತ್ತಿದೆ. ತಾಲೂಕಿಗೆ ಒಂದಾದರೂ ಹೆಚ್ಚುವರಿ ಬಸ್ ಇದ್ದರೆ ಇಷ್ಟು ಸಮಸ್ಯೆಯಾಗುವುದಿಲ್ಲ. ಜೋಗಿನ ಮಠ ಮತ್ತು ಜೋಗಗಳಿಗೆ ಶಿರಸಿ-ಸಿದ್ಧಾಪುರದಿಂದ ಒಂದೂ ನೇರಮಾರ್ಗದ ವಾಹನವಿಲ್ಲ. ಶಿರಸಿ-ಸಾಗರ ಮಾರ್ಗದ ಬಸ್ ಗಳಲ್ಲಿ ಕೆಲವನ್ನು ಜೋಗ ಸಿದ್ಧಾಪುರ ಮಾರ್ಗದಲ್ಲಿ ಬಿಡಬೇಕು.

– ಶ್ರೀಧರ ಬಸನಬೈಲ್

ಎಲ್ಲವನ್ನೂ ವ್ಯವಹಾರಿಕವಾಗಿ ನೋಡಬೇಡಿ, ಪ್ರತಿ 15 ನಿಮಿಷಕ್ಕೊಂದರಂತೆ ಶಿರಸಿ-ಸಾಗರ ರಸ್ತೆಯಲ್ಲಿ ಚಲಿಸುವ ಬಸ್ ಮಾರ್ಗ ಬದಲಿಸಿ, ಗ್ರಾಮೀಣ ಜನರಿಗೆ ತ್ವರಿತ ಸೇವೆ ನೀಡಿ.

ಕೃಷ್ಣಮೂರ್ತಿ ಐಸೂರು

ನಮ್ಮ ತಾಲೂಕಿನ ಪ್ರಯಾಣಿಕರು, ವಿದ್ಯಾರ್ಥಿಗಳು ಸಾರ್ವಜನಿಕರು ಎಲ್ಲರೂ ನಮ್ಮವರೇ ಅವರೆಲ್ಲಾ ಶಿಸ್ತು, ಸಂಯಮದಿಂದ ವರ್ತಿಸಿದರೆ ಅರ್ಧ ಸಮಸ್ಯೆ ಬಗೆಹರಿದಂತೆ -ಆರ್.ಟಿ.ನಾಯ್ಕ ,ನಿಯಂತ್ರಣಾಧಿ

-ಕೆ.ಆರ್. ವಿನಾಯಕ

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

O

siddapur nk – this week…..

ಸಿದ್ದಾಪುರ : ಮನೆಗೆ ನುಗ್ಗಿ ಮಹಿಳೆಯ ಚಿನ್ನದ ಸರ ಎಗರಿಸಿದ ಸರಗಳ್ಳ!!?* *ಸಿದ್ದಾಪುರ*: ಮಹಿಳೆಯೊಬ್ಬರ ಮಂಗಲಸೂತ್ರ ಕದ್ದ ಪ್ರಕರಣವೊಂದು ನಿನ್ನೆ ನಡೆದಿರುವ ಕುರಿತು ಉತ್ತರ...

ಕಡವೆ ಪ್ರಕರಣ: ಅಧಿಕಾರಿಗಳ ಮೇಲೆ ದೌರ್ಜನ್ಯ ಪ್ರಕರಣ ದಾಖಲಿಸಿದ ಸಂತ್ರಸ್ತ!

ಹುಸೂರಿನ ಕಡವೆ ಪ್ರಕರಣ ಮರೆಮಾಚುವ ಮುನ್ನ ಸಿದ್ಧಾಪುರದ ತ್ಯಾಗಲಿ (ನಾಣಿಕಟ್ಟಾದಲ್ಲಿ)  ಯಲ್ಲಿ ಕಡವೆ ಭೇಟೆ ಮಾಡಿದ ಪ್ರಕರಣ ನಡೆದಿದ್ದು ಈ ಪ್ರಕರಣದಲ್ಲಿ ಆತುರದಿಂದ ವ್ಯಕ್ತಿಯೊಬ್ಬರನ್ನು...

ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ……

ಡಿಕೆಶಿ ಪದಗ್ರಹಣಕ್ಕೆ ಸಿದ್ಧತೆ; ವಿಧಾನಸೌಧದ ಸುತ್ತಮುತ್ತ ಇರುವ ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ ಕರ್ನಾಟಕ ರಾಜ್ಯಪಾಲರ ಹೆಸರಿನಲ್ಲಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ...

ಭಟ್ಕಳ: ತಟ್ಟೆಹಕ್ಕಲು ನದಿಯಲ್ಲಿ ಮುಳುಗಿ ಒಂದೇ ಕುಟುಂಬದ 8 ಮಂದಿ ನೀರುಪಾಲು, ತಲಾ 5 ಲಕ್ಷ ಪರಿಹಾರ ಘೋಷಿಸಿದ ಸರ್ಕಾರ!

ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ತಟ್ಟೆಹಕ್ಕಲು ನದಿಯಲ್ಲಿ ಕಪ್ಪೆ ಚಿಪ್ಪು ತೆಗೆಯಲು ಹೋದ ಎಂಟು ಮಂದಿ ಜಲಸಮಾಧಿಯಾಗಿರುವ ದಾರುಣ ಘಟನೆ ನಡೆದಿದ್ದು ಇಬ್ಬರು ನಾಪತ್ತೆಯಾಗಿದ್ದಾರೆ....

Latest Posts

O

Recommended For You

About the Author: Kanneshwar Naik

Leave a Reply

Your email address will not be published. Required fields are marked *