ಆಪದ್ಭಾಂಧವನಾದ ಇಲಿಯಾಸ್‍ಗೆ ಜನರ ಮೆಚ್ಚುಗೆ

ಉತ್ತರ ಕನ್ನಡದಲ್ಲಿ ನಾನು ಎನ್ನುವ ಅಹಂ ಪ್ರದರ್ಶನ ತಾಂತ್ರಿಕವಾಗಿ ತಪ್ಪು ಎಂದು ಹೇಳಿದವರು ಸಾಹಿತಿ ಜಯಂತ್ ಕಾಯ್ಕಿಣಿ,
ನಾನು ಎನ್ನುವುದನ್ನು ವಿಮರ್ಶಾತ್ಮಕವಾಗಿ ಹೇಳಿದವರು ನಟ ಉಪೇಂದ್ರ ಅದೇನೇ ಇರಲಿ, ಅಹಂ ಎನ್ನುತ್ತೀರೋ? ಸ್ವಾಭಿಮಾನ, ದಾಷ್ಟ್ಯ ಎನ್ನುತ್ತೀರೋ ಆಯ್ಕೆ ನಿಮಗೆ ಬಿಟ್ಟಿದ್ದು
ಉತ್ತರಕನ್ನಡದಲ್ಲಿ ಶಾಸಕ ದಿನಕರ ಶೆಟ್ಟಿ ಆಟೋ ಚಾಲಕರಿಗೆ ತಲಾ ಒಂದು ಸಾವಿರ ಧನಸಹಾಯ ಮಾಡಿ ಮೇಲ್ಪಂಕ್ತಿ ಹಾಕುತ್ತಾರೆ. ನಂತರ ಶಿರಸಿಯ ಉಪೆಂದ್ರ ಪೈ ಆಟೋ ಚಾಲಕರಿಗೆ ದಿನಬಳಕೆಯ ವಸ್ತುಗಳ ಕಿಟ್ ನೀಡುತ್ತಾರೆ. ಇವರೊಂದಿಗೆ ಅಸಹಾಯಕರು ಬಡವರಿಗೆ
ತಮ್ಮ ದುಡಿಮೆಯನ್ನು ಹಂಚಿದ್ದೂ ಇದೆ.
ಆದರೆ ಹಿಂದುತ್ವ, ಹಿಂದೂ ಎನ್ನುವ ಕಪಟ ನಾಟಕದ ಮೂಲಕ ಕಳೆದ 25 ವರ್ಷಗಳಿಂದ ಜನಪ್ರತಿನಿಧಿಗಳಾಗಿರುವ ಉತ್ತರಕನ್ನಡ ಸಂಸದ ಅನಂತಕುಮಾರ ಹೆಗಡೆ, ರಾಜ್ಯ ವಿಧಾನಸಭಾ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಲಾಕ್‍ಡೌನ್, ನಿಷೇಧಾಜ್ಷೆಗಳ ಸಂತೃಸ್ತರಾದ ಉತ್ತರಕನ್ನಡದ ಅಸಹಾಯಕರು, ದುರ್ಬಲರಿಗೆ ಕಿಂಚಿತ್ ವೈಯಕ್ತಿಕ ಸಹಾಯ ಮಾಡಿಲ್ಲ, ಇದು ಹಿಂದೂ, ಹಿಂದುತ್ವದ ಒಳಮರ್ಮ.
ಇದಕ್ಕೆ ಪ್ರತಿಯಾಗಿ ಸಿದ್ದಾಪುರದ ತಾ.ಪಂ. ಸದಸ್ಯ ನಾಶಿರ್ ಖಾನ್ ತನ್ನ ಕ್ಷೇತ್ರದಲ್ಲಿ ತರಕಾರಿ, ದಿನಬಳಕೆ ವಸ್ತು ವಿತರಿಸಿದ್ದಾರೆ. ಇವರೊಂದಿಗೆ ಭೀಮಣ್ಣ ನಾಯ್ಕ, ವಸಂತ ನಾಯ್ಕ,ಕೇ,ಜಿ,ನಾಯ್ಕ, ಸಾರಸ್ವತ ಸಮಾಜ, ನಾಮಧಾರಿ ಸಮಾಜಗಳು ಅವರ ಮಿತಿಯಲ್ಲಿ ಅಸಹಾಯಕರಿಗೆ ನೆರವು ನೀಡಿವೆ.
ಇವರೊಂದಿಗೆ ತಮ್ಮ ವ್ಯಾಪ್ತಿ-ಮಿತಿಯಲ್ಲಿ ಬಡ ಅಸಹಾಯಕರಿಗೆ ನೆರವಾದವರು ಉ.ಕ. ಜೆ.ಡಿ.ಎಸ್. ಅಲ್ಪಸಂಖ್ಯಾತರ ಘಟಕದ ಜಿಲ್ಲಾಧ್ಯಕ್ಷ ಇಲಿಯಾಸ್ ಶೇಖ್ ಹಾಳದಕಟ್ಟಾ,

ಪತ್ರಿಕೆ ವಿತರಕನಾಗಿ, ವಾಹನ ಚಾಲಕನಾಗಿ, ವಿದೇಶ, ಸ್ವದೇಶಗಳಲ್ಲಿ ದುಡಿದು ಪರಿಶ್ರಮದಿಂದ ಮೇಲೆ ಬಂದ ಇಲಿಯಾಸ್ ಶೇಖ್ ಹಾಳದಕಟ್ಟಾ ಸಿದ್ದಾಪುರದಲ್ಲಿ ಅನೇಕರಿಗೆ ಫುಡ್ ಕಿಟ್ ನೀಡಿದರು,
ಕರೋನಾ ರೋಗಿಗಳಿಗೆ ಅತಿ ಅವಶ್ಯದ ಆಮ್ಲಜನಕದ ಕಿಟ್ ಹೊತ್ತೊಯ್ದು ಕಾರವಾರದಿಂದ ಉತ್ತರ ಕರ್ನಾಟಕದ ಗುಲಬರ್ಗಾ ಶಿವಮೊಗ್ಗ ವರೆಗೆ 8-10 ಜಿಲ್ಲೆಗಳಿಗೆ ತಲುಪಿಸಿದರು.

ಈಗ ರೋಜಾ ಮಾಡುತ್ತಿರುವ ಇಲಿಯಾಸ್ ಜಿಲ್ಲಾಡಳಿತ, ತಾಲೂಕಾ ಆಡಳಿತ, ಸಾರ್ವಜನಿಕರು, ಹಿತೈಶಿಗಳು, ಸ್ನೇಹಿತರು ಯಾರೇ ಕರೆದರೂ ಅವರ ನೆರವಿಗೆ ಧಾವಿಸುತ್ತಾರೆ.

ಇಲಿಯಾಸ್ ಜಾತಿ-ಧರ್ಮ ನೋಡುವವರಲ್ಲ. ಸಮಾಜಮುಖಿಯಾಗಿ ನೆರೆಹೊರೆಯವರು, ಅಸಹಾಯಕರು, ಅಬಲರ ನೆರವಿಗೆ ಧಾವಿಸುವ ಇವರು ಕರೋನಾ ಕಾರ್ಯಕರ್ತನಾಗಿ,ಕರೋನಾ ಲಾಕ್ ಔಟ್ ಸಂತೃಸ್ತರ ಆಪದ್ಭಾಂದವನಾಗಿ ಕೆಲಸ ಮಾಡಿದ್ದಾರೆ.
ಇಲಿಯಾಸರ ಪ್ರಯತ್ನ, ಪ್ರಾಮಾಣಿಕ ಸೇವೆ ಮೆಚ್ಚಿರುವ ಅನೇಕರು ಇಲಿಯಾಸ್ ನಮ್ಮ ಮನೆಮಗನಂತೆ ನಮ್ಮ ನೆರವಿಗೆ ಬರುತಿದ್ದಾರೆ ಎನ್ನುವ ಅಭಿಮಾನದ ಮಾತುಗಳನ್ನಾಡಿದ್ದಾರೆ. ಜಾತಿ,ಧರ್ಮ, ದೇವರು, ನಂಬಿಕೆ, ಆಚರಣೆಗಳ ಹೆಸರಲ್ಲಿ ಅಧಿಕಾರಹೊಂದಿ ಸ್ವಾರ್ಥ, ಕುಟಿಲ ಧರ್ಮಾಂಧತೆಗಳಿಂದ ಸಮಾಜ ವಿಘಟಿಸುವವರ ಮಧ್ಯೆ ಇಂಥವರು ಸಮಾಜಮುಖಿಗಳಾಗಿ ಪ್ರಶಂಸೆಗೆ ಅರ್ಹರಾಗುತ್ತಾರೆ. ಇವರ ಸೇವೆ, ಪ್ರಾಮಾಣಿಕ ಕೆಲಸಕ್ಕೆ ಸಮಾಜಮುಖಿ ಕೂಡಾ ಲಾಲ್ ಸಲಾಂ ಸೂಚಿಸುತ್ತದೆ.

( related) ಕಾಮ್ ಕರೋನಾ ಪೊಲೀಸ್ ಮತ್ ಮಾರೋನಾ!
ಸರ್ಕಾರಿ ನೌಕರರು ವಿಶೇಶವಾಗಿ ಆರೋಗ್ಯ,ಕಂದಾಯ ಮತ್ತು ಪೊಲೀಸ್ ಇಲಾಖೆಯ ನೌಕರರ ಮಹತ್ವ,ಪ್ರಾಮುಖ್ಯತೆ ಈಗ ಸಮಾಜದ ಗಮನಕ್ಕೆ ಬರುತ್ತಿದೆ. ಪೊಲೀಸರಿಗೆ ಅಧಿಕಾರ ಕೊಟ್ಟರೆ ಏನು ಮಾಡಬಲ್ಲರು ಎನ್ನುವುದಕ್ಕೂ ಈಗಲೇ ಸಾಕ್ಷಿಗಳೂ ಸಿಗುತ್ತಿವೆ. ಪೊಲೀಸ್ ಕ್ರೌರ್ಯ, ಮತಾಂಧರ ಮಂಗಾಟವನ್ನು ಮೀರಿಸುವಂಥದ್ದು ಎನ್ನುವ ಟೀಕೆಗಳೂ ವ್ಯಕ್ತವಾಗುತ್ತಿವೆ.
ಈ ಸಂದರ್ಭದಲ್ಲಿ ಸಮಾಜ,ಸಾರ್ವಜನಿಕರ ಹಿತದೃಷ್ಟಿಯಿಂದ ಕೆಲಸಮಾಡುವ ಪೊಲೀಸರಲ್ಲಿ ಸ್ವಯಂ ಜಾಗೃತಿಯ ಮೂಲಕ ಮಾದರಿಯಾದ ಹೊನ್ನಾವರದ ಪಿ.ಎಸ್.ಐ. ಶಶಿಕುಮಾರ ಒಂದು ಉತ್ತಮ ಮಾದರಿಯಾಗಿದ್ದಾರೆ. ಎರಡು ಜನ ಮಕ್ಕಳು, ಕುಟುಂಬದ ಶಶಿಕುಮಾರ ಕುಟುಂಬದಿಂದ ದೂರ ಉಳಿದು ವಸತಿಗೃಹದಲ್ಲೇ ವಾಸ್ತವ್ಯಮಾಡಿ ಕುಟುಂಬವನ್ನು ದೂರದಿಂದ ನೋಡುತ್ತಾ ಕೊರೋನಾ ವಿಸ್ತರಣೆಗೆ ತಡೆ ಒಡ್ಡುತ್ತಿರುವುದು ಪೊಲೀಸರು ಅನುಸರಿಸಬಹುದಾದ ಮಾದರಿಯಾಗಿದೆ.
ಇದೇ ಮಾದರಿ ಆರೋಗ್ಯ ಇಲಾಖೆಯ ಸಿಬ್ಬಂದಿಗಳಿಗೂ ಅನುಸರಣಾ ಯೋಗ್ಯ. ಪೊಲೀಸರ ಪಿತ್ತ ನೆತ್ತಿಗೇರಿರುವ ವಿದ್ಯಮಾನಗಳ ನಡುವೆ ಪೊಲೀಸರಿಗೆ ಸಂಯಮ, ವಿಶ್ರಾಂತಿ, ಸಾರ್ವಜನಿಕ ವಿಶ್ವಾಸದ ಪ್ರಾಮುಖ್ಯತೆಯನ್ನು ಪೊಲೀಸ್ ಮಹಾನಿರ್ಧೇಶಕರೇ ಹೇಳಿದ ಮೇಲೂ ಪೊಲೀಸರು ಜನರನ್ನು ಹೊಡೆಯುತ್ತಿರುವುದು ಯಾರೂ ಸಮರ್ಥಿಸುವ ಕೆಲಸವಲ್ಲ.
ಶಿರಸಿ ವಿದ್ಯಾರ್ಥಿನಿಯೊಬ್ಬಳು ವಿದೇಶದಿಂದ ಭಾರತಕ್ಕೆ ಬರದೆ ದೇಶಪ್ರೇಮ ಮೆರೆದ ರೀತಿ ಭಾರತದಿಂದ ಹೊರಗಿದ್ದು, ಹೊರನಡೆದು ಕೆಲವು ಕಾಲ ಸ್ವದೇಶಕ್ಕೆ ಮರಳದಿದ್ದರೆ ನಮ್ಮ ಭಾರತ ಕರೋನಾ ಮುಕ್ತವಾಗಿರುವ ಅವಕಾಶವಿತ್ತು. ಇದು ಈಗಲೂ ಹೊರದೇಶದಲ್ಲಿರುವ ಭಾರತೀಯರಿಗೆ ಅನುಸರಣಾಯೊಗ್ಯ ಮಾದರಿಯೆ. ಇದರ ಮಧ್ಯೆ ಮನೆಮನೆಗೆ ಅಗತ್ಯ ಸಾಮಗ್ರಿ, ಆರೊಗ್ಯ ತಪಾಸಣೆ ಒದಗಿಸುತ್ತಿರುವ ಉತ್ತರ ಕನ್ನಡ ಜಿಲ್ಲೆಯ ಮಾದರಿ ದೇಶಕ್ಕೆ ಸದಾ ಅನುಕರಣಾಯೊಗ್ಯ.
ಈ ಎಲ್ಲಾ ರಗಳೆಗಳ ನಡುವೆ ಭಾತರದ ಮೂಲನಿವಾಸಿಗಳ ಮಾಂಸಾಹಾರ ಪದ್ಧತಿಯನ್ನು ಲೇವಡಿಮಾಡುವ ವಿದೇಶಿ ವೈದಿಕ ವಿಕೃತಿ ವೈದಿಕ ಕರೋನಾ ವಾಗಿ ಸಮಾಜದ ಸ್ವಾಸ್ಥ್ಯ ಹಾಳುಮಾಡುತ್ತಿದೆ. ಸಸ್ಯಹಾರಿಗಳ ಅಗತ್ಯ ಪೂರೈಸಿದಂತೆ ಮಾಂಸಾಹಾರಿಗಳ ಮೀನು, ಮಾಂಸ, ಮೊಟ್ಟೆ, ಒಣಮೀನುಗಳ ಪೂರೈಕೆಗೂ ಜಿಲ್ಲಾಡಳಿತ ವ್ಯವಸ್ಥೆ ಮಾಡಬೇಕೆಂಬ ಬೇಡಿಕೆ ಉತ್ತರಕನ್ನಡ ಜಿಲ್ಲೆಯ ಬಹುಸಂಖ್ಯಾತರದ್ದಾಗಿದೆ. ಆದರೆ ಉಳ್ಳವರ ಭಟ್ಟಂಗಿತನ ಮಾಡುತ್ತಾ, ಉತ್ತರಕನ್ನಡ ಶಾಂತ-ಸುವ್ಯವಸ್ಥಿತ,ಸಂಮೃದ್ಧ ಎನ್ನುವ ಪರದೇಶಿ ವೈದಿಕ ವೈರಸ್ ಗಳು ಬೆಂಗಳೂರಿನಲ್ಲಿ ಮಾಂಸ ಖರೀದಿಸುವವರ ಮೇಲೆ ಉರಿದುಕೊಂಡಿರುವುದು ಅವರ ಭಾರತೀಯ ಮೂಲನಿವಾಸಿ ಶೂದ್ರವಿರೋಧದ ಅವಿವೇಕಕ್ಕೆ ಸಾಕ್ಷಿ.
ಕರೋನಾ ಹೆಸರಲ್ಲೂ ಮೆರೆಯುತ್ತಿರುವ ವೈದಿಕ ವಿಕೃತಿ ಉತ್ತರಕನ್ನಡ ಸೇರಿದ ಭವ್ಯಭಾರತದ ಶಾಪ, ಪಾಪ ಎನ್ನುವ ಪ್ರತಿಕ್ರೀಯೆ ವ್ಯಕ್ತವಾಗುತ್ತಿರುವುದು ಉತ್ತಮ ಬೆಳವಣಿಗೆ. ಇದೇ ವೈದಿಕ ವೈರಸ್ ಮಂತ್ರ, ಹೋಮ, ಹವನ, ಪೂಜೆಗಳ ಮೂಲಕ ಕರೋನಾ ಹೋಗಲಾಡಿಸುವ ಲಾಗಾಯ್ತಿನ ಕಪಟ ನಾಟಕ ಮಾಡುತ್ತಿರುವುದು ವೈದಿಕ ಅವಿವೇಕ, ಅನಾಚಾರ, ಬೂಟಾಟಕೆಗಳಿಗೆ ಸಾಕ್ಷಿಯಾಗಿದೆ. ಅಂದಹಾಗೆ ಈ ಸಮಾಜವಿರೋಧಿ, ಆಶಾಡಭೂತಿ ವೈದಿಕ ಕೃಪಣರ ಸಂಖ್ಯೆ ಪ್ರತಿಶತ 5 ಅಲ್ಲ ಎನ್ನುವುದು ಭಾರತದ ಸೌಂದರ್ಯ.

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

O

siddapur nk – this week…..

ಸಿದ್ದಾಪುರ : ಮನೆಗೆ ನುಗ್ಗಿ ಮಹಿಳೆಯ ಚಿನ್ನದ ಸರ ಎಗರಿಸಿದ ಸರಗಳ್ಳ!!?* *ಸಿದ್ದಾಪುರ*: ಮಹಿಳೆಯೊಬ್ಬರ ಮಂಗಲಸೂತ್ರ ಕದ್ದ ಪ್ರಕರಣವೊಂದು ನಿನ್ನೆ ನಡೆದಿರುವ ಕುರಿತು ಉತ್ತರ...

ಕಡವೆ ಪ್ರಕರಣ: ಅಧಿಕಾರಿಗಳ ಮೇಲೆ ದೌರ್ಜನ್ಯ ಪ್ರಕರಣ ದಾಖಲಿಸಿದ ಸಂತ್ರಸ್ತ!

ಹುಸೂರಿನ ಕಡವೆ ಪ್ರಕರಣ ಮರೆಮಾಚುವ ಮುನ್ನ ಸಿದ್ಧಾಪುರದ ತ್ಯಾಗಲಿ (ನಾಣಿಕಟ್ಟಾದಲ್ಲಿ)  ಯಲ್ಲಿ ಕಡವೆ ಭೇಟೆ ಮಾಡಿದ ಪ್ರಕರಣ ನಡೆದಿದ್ದು ಈ ಪ್ರಕರಣದಲ್ಲಿ ಆತುರದಿಂದ ವ್ಯಕ್ತಿಯೊಬ್ಬರನ್ನು...

ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ……

ಡಿಕೆಶಿ ಪದಗ್ರಹಣಕ್ಕೆ ಸಿದ್ಧತೆ; ವಿಧಾನಸೌಧದ ಸುತ್ತಮುತ್ತ ಇರುವ ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ ಕರ್ನಾಟಕ ರಾಜ್ಯಪಾಲರ ಹೆಸರಿನಲ್ಲಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ...

ಭಟ್ಕಳ: ತಟ್ಟೆಹಕ್ಕಲು ನದಿಯಲ್ಲಿ ಮುಳುಗಿ ಒಂದೇ ಕುಟುಂಬದ 8 ಮಂದಿ ನೀರುಪಾಲು, ತಲಾ 5 ಲಕ್ಷ ಪರಿಹಾರ ಘೋಷಿಸಿದ ಸರ್ಕಾರ!

ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ತಟ್ಟೆಹಕ್ಕಲು ನದಿಯಲ್ಲಿ ಕಪ್ಪೆ ಚಿಪ್ಪು ತೆಗೆಯಲು ಹೋದ ಎಂಟು ಮಂದಿ ಜಲಸಮಾಧಿಯಾಗಿರುವ ದಾರುಣ ಘಟನೆ ನಡೆದಿದ್ದು ಇಬ್ಬರು ನಾಪತ್ತೆಯಾಗಿದ್ದಾರೆ....

Latest Posts

O

Recommended For You

About the Author: Kanneshwar Naik

Leave a Reply

Your email address will not be published. Required fields are marked *