v.s.hegde death-ಆಘಾತತಂದ ಸಾವುಗಳು

ದೇಶ, ರಾಜ್ಯದಾದ್ಯಂತ ಸಾವುಗಳ ಸರಪಳಿ ಮುಂದುವರಿದಿದೆ. ಶಾಸಕರು, ಸಂಸದರ ಸಾವು-ನೋವುಗಳ ನಡುವೆ ಸಹೃಯಿ ಅಧಿಕಾರಿಗಳಾಗಿದ್ದ ವಿ.ಎಸ್. ಹೆಗಡೆ ಕಾನಗೋಡು, ಎಲ್.ಐ.ಸಿ. ಉಪವ್ಯಸ್ಥಾಪಕ ಸತೀಶ್ ಶಾನಭಾಗ ಸಾವು ಹಲವರನ್ನು ಕಾಡಿವೆ. ಸಿದ್ಧಾಪುರದಲ್ಲಿ ತಾ.ಪಂ. ಕಾರ್ಯನಿರ್ವಹಣಾಧಿಕಾರಿಗಳಾಗಿ ಕೆಲಸ ಮಾಡಿ ಇಲ್ಲಿಂದ ವರ್ಗಾವಣೆಯಾಗಿ, ಪದೋನ್ನತಿ ಹೊಂದಿದ್ದ ವಿ.ಎಸ್. ಹೆಗಡೆ ಜನಾನುರಾಗಿ ವ್ಯಕ್ತಿಯಾಗಿ, ಜನಪರವಾಗಿ ಕೆಲಸ ಮಾಡಿ ಇದೇ ವರ್ಷ ನಿವೃತ್ತಿಹೊಂದಿದ್ದರು. ಕರುಳು ಕ್ಯಾನ್ಸರ್ ಗೆ ತುತ್ತಾಗಿದ್ದ ಹೆಗಡೆ ಬೆಂಗಳೂರಿನಲ್ಲೇ ವಾಸ್ತವ್ಯ ಹೊಂದಿ ಅಲ್ಲಿಯೇ ಚಿಕಿತ್ಸೆ ಪಡೆಯುತಿದ್ದರು ಇಂದು ಬೆಳಿಗ್ಗೆ ನಿಧನರಾದ ಅವರ ಪಾರ್ಥಿವಶರೀರ ಇಂದು ರಾತ್ರಿ ಶಿರಸಿ ಕಾನಗೋಡಿಗೆ ಬರಲಿದ್ದು ನಾಳೆ ಮುಂಜಾನೆ 9.30 ಕ್ಕೆ ಅಂತ್ಯಸಂಸ್ಕಾರ ನಡೆಯಲಿದೆ ಎಂದು ತಿಳಿಸಲಾಗಿದೆ.

ಎಲ್.ಐ.ಸಿ. ಗೆ ಹಾನಿ- ಎಲ್.ಐ.ಸಿ.ಏಜೆಂಟರಾಗಿ ಸೇವೆ ಸಲ್ಲಿಸಿದ್ದ ಷಣ್ಮುಖ ಮಡಿವಾಳ ಿದೇ ವಾರ ನಿಧನರಾಗಿದ್ದಾರೆ. ಅವರು ಕರೋನಾ ಕ್ಕೆ ತುತ್ತಾಗಿರುವ ವಿಚಾರ ಅವರ ಅಂತ್ಯ ಸಂಸ್ಕಾರದ ನಂತರ ಸುದ್ದಿಯಾಗಿದೆ. ಖುಷಿಯ ಸಂಗತಿ ಎಂದರೆ ಷಣ್ಮುಖ ಮಡಿವಾಳರ ಪ್ರಾಥಮಿಕ ಸಂಪರ್ಕದ ವ್ಯಕ್ತಿಗಳು, ಶವ ಸಂಸ್ಕಾರದಲ್ಲಿ ಪಾಲ್ಗೊಂಡ ಬಹುತೇಕ ಎಲ್ಲರ ರ್ಯಾಪಿಡ್ ಟೆಸ್ಟ್ ಮಾದರಿಯಲ್ಲಿ ಕರೋನಾ ದೃಢಪಟ್ಟಿಲ್ಲ.

ಸಿದ್ಧಾಪುರ ಸಾಯಿನಗರದ ಎಲ್.ಐ.ಸಿ. ಏಜೆಂಟ್ ಷಣ್ಮುಖ ಸಾವಿನ ಮಾರನೇ ದಿನ ಇದೇ ಸಾಯಿನಗರದ ನಿವಾಸಿ, ಸಾಗರ ಎಲ್.ಐ.ಸಿ. ಕಛೇರಿಯ ಉಪ ವ್ಯವಸ್ಥಾಪಕ ಸತೀಶ್ ಶಾನಭಾಗ ನಿಧನ ಹಲವರ ಶೋಕಕ್ಕೆ ಕಾರಣವಾಗಿದೆ. ಉತ್ತಮ ವ್ಯಕ್ತಿ- ಮಿತಭಾಷಿಯಾಗಿದ್ದ ಸತೀಶ ಶಾನಭಾಗ ಹೃದಯಾಘಾತದಿಂದ ಮೃತಪಟ್ಟಿರುವುದು ಹಲವರ ನೋವಿಗೆ ಕಾರಣವಾಗಿದೆ.

ಎಸ್.ಪಿ.ಬಿ.- ಹಲವು ದಿವಸಗಳ ದೀರ್ಘ ಅನಾರೋಗ್ಯದಿಂದ ಬಳಲಿದ ಗಾಯಕ ಎಸ್. ಪಿ.ಬಿ. ನಿಧನ ನಾಡನ್ನು ಶೋಕಸಾಗರದಲ್ಲಿ ಮುಳುಗಿಸಿದೆ. ಎಸ್.ಪಿ. ಬಾಲಸುಬ್ರಮಣ್ಯಂ ಹಲವು ಭಾಷೆಗಳ ಶ್ರೇಷ್ಠ ಗಾಯಕರಾಗಿ ನಾಲ್ಕು ಸಾವಿರಕ್ಕೂ ಹೆಚ್ಚಿನ ಚಿತ್ರಗಳಿಗೆ ಹಾಡಿರುವುದು ಅವರ ಸಾಧನೆಗೆ ಸಾಕ್ಷಿ.

ಸಿದ್ದಾಪುರ: ತಾಲೂಕಿನ ಬಾಳೇಸರ ಸಮೀಪದ ಕಲ್ಮನೆಯ ನಾಗವೇಣಿ ಪರಮೇಶ್ವರ ಭಟ್ಟ (82) ಗುರುವಾರ ನಿಧನಹೊಂದಿದರು.
ಅವರಿಗೆ ಮೂವರು ಪುತ್ರರು,ಇಬ್ಬರು ಪುತ್ರಿಯರು ಹಾಗೂ ಅಪಾರ ಬಂಧುಬಳಗವಿದೆ.

ಎಸ್.ಪಿ.ಬಿ. ಬಾಲಸುಬ್ರಹ್ಮಣ್ಯಂ ಶರೀರ ಹೊರಟುಹೋದರೂ
ಶಾರೀರ ನಮ್ಮ ನಡುವೆ ಇರುತ್ತದೆ : ಅರವಿಂದ ಕರ್ಕಿಕೋಡಿ
ಕಾರವಾರ: ಗಾಯಕ ಡಾ. ಎಸ್.ಪಿ.ಬಾಲಸುಬ್ರಹ್ಮಣ್ಯಂ ಅವರ ನಿಧನ ಕನ್ನಡಕ್ಕೆ ಬಹು ದೊಡ್ಡ ನಷ್ಟ. ಬಹುಭಾಷಾ ಗಾಯಕರಾದರೂ ಕನ್ನಡವನ್ನೇ ಉಸಿರಾಡುತ್ತಿದ್ದ ಅವರು ಈ ಭಾಷೆಯ ಬಗ್ಗೆ ವಿಶೇಷ ಅಭಿಮಾನ ಹೊಂದಿದ್ದರು ಎಂದು ಉತ್ತರ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಅರವಿಂದ ಕರ್ಕಿಕೋಡಿ ಅವರು ಸಂತಾಪ ಸೂಚಿಸಿದ್ದಾರೆ.
ಯುವ ಗಾಯಕರಿಗೆ ಸ್ಪೂರ್ತಿಯ ಚಿಲುಮೆಯಾಗಿದ್ದ ಎಸ್.ಪಿ.ಬಿ. ಅವರು ತನಗೆ ಮುಂದಿನ ಜನ್ಮವೊಂದಿದ್ದರೆ ಕರ್ನಾಟಕದಲ್ಲೇ ಹುಟ್ಟುತ್ತೇನೆ ಅನ್ನುವ ಅವರ ಹೃದಯಭಾವ ಕನ್ನಡಿಗರನ್ನು ಭಾವುಕರನ್ನಾಗಿಸುತ್ತಿತ್ತು. ಬಾಲಸುಬ್ರಹ್ಮಣ್ಯಂ ಅವರನ್ನು ಈ ನೆಲ ಸದಾ ಸ್ಮರಿಸುತ್ತದೆ. ಅವರ ಶರೀರ ಹೊರಟು ಹೋದರೂ ಶಾರೀರ ನಮ್ಮ ನಡುವೆ ಸದಾ ಇರುತ್ತದೆ ಎಂದು ಅರವಿಂದ ಕರ್ಕಿಕೋಡಿ ಅಭಿಪ್ರಾಯಪಟ್ಟಿದ್ದಾರೆ.

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

O

siddapur nk – this week…..

ಸಿದ್ದಾಪುರ : ಮನೆಗೆ ನುಗ್ಗಿ ಮಹಿಳೆಯ ಚಿನ್ನದ ಸರ ಎಗರಿಸಿದ ಸರಗಳ್ಳ!!?* *ಸಿದ್ದಾಪುರ*: ಮಹಿಳೆಯೊಬ್ಬರ ಮಂಗಲಸೂತ್ರ ಕದ್ದ ಪ್ರಕರಣವೊಂದು ನಿನ್ನೆ ನಡೆದಿರುವ ಕುರಿತು ಉತ್ತರ...

ಕಡವೆ ಪ್ರಕರಣ: ಅಧಿಕಾರಿಗಳ ಮೇಲೆ ದೌರ್ಜನ್ಯ ಪ್ರಕರಣ ದಾಖಲಿಸಿದ ಸಂತ್ರಸ್ತ!

ಹುಸೂರಿನ ಕಡವೆ ಪ್ರಕರಣ ಮರೆಮಾಚುವ ಮುನ್ನ ಸಿದ್ಧಾಪುರದ ತ್ಯಾಗಲಿ (ನಾಣಿಕಟ್ಟಾದಲ್ಲಿ)  ಯಲ್ಲಿ ಕಡವೆ ಭೇಟೆ ಮಾಡಿದ ಪ್ರಕರಣ ನಡೆದಿದ್ದು ಈ ಪ್ರಕರಣದಲ್ಲಿ ಆತುರದಿಂದ ವ್ಯಕ್ತಿಯೊಬ್ಬರನ್ನು...

ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ……

ಡಿಕೆಶಿ ಪದಗ್ರಹಣಕ್ಕೆ ಸಿದ್ಧತೆ; ವಿಧಾನಸೌಧದ ಸುತ್ತಮುತ್ತ ಇರುವ ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ ಕರ್ನಾಟಕ ರಾಜ್ಯಪಾಲರ ಹೆಸರಿನಲ್ಲಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ...

ಭಟ್ಕಳ: ತಟ್ಟೆಹಕ್ಕಲು ನದಿಯಲ್ಲಿ ಮುಳುಗಿ ಒಂದೇ ಕುಟುಂಬದ 8 ಮಂದಿ ನೀರುಪಾಲು, ತಲಾ 5 ಲಕ್ಷ ಪರಿಹಾರ ಘೋಷಿಸಿದ ಸರ್ಕಾರ!

ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ತಟ್ಟೆಹಕ್ಕಲು ನದಿಯಲ್ಲಿ ಕಪ್ಪೆ ಚಿಪ್ಪು ತೆಗೆಯಲು ಹೋದ ಎಂಟು ಮಂದಿ ಜಲಸಮಾಧಿಯಾಗಿರುವ ದಾರುಣ ಘಟನೆ ನಡೆದಿದ್ದು ಇಬ್ಬರು ನಾಪತ್ತೆಯಾಗಿದ್ದಾರೆ....

Latest Posts

O

Recommended For You

About the Author: Kanneshwar Naik

Leave a Reply

Your email address will not be published. Required fields are marked *