ದಾಸನಿಗೆ ಟಾಂಗ್ ಕೊಟ್ಟ ಇಂದ್ರಜಿತ್…

ದರ್ಶನ್ ‘ಹೀರೋಯಿಸಂ’ ಏನಿದ್ದರೂ ಸಿನಿಮಾಗಳಲ್ಲಿ ತೋರಿಸಲಿ: ಇಂದ್ರಜಿತ್ ಲಂಕೇಶ್

ಹೀರೋಯಿಸಂ ಏನಿದ್ದರೂ ಸಿನಿಮಾಗಳಲ್ಲಿ ಇಟ್ಟುಕೊಳ್ಳಲಿ, ಇದು ನಿಜ ಜೀವನ, ಸಾಕ್ಷಿಗಳನ್ನು ಪೋಲೀಸರ ಎದುರು ಇಡಬೇಕೆ ಹೊರತು ಗಂಡಸ್ತನ ನಿರೂಪಿಸಲು ಆಲ್ಲ ಎಂದು ನಿರ್ದೇಶಕ ಇಂದ್ರಜಿತ್ ಲಂಕೇಶ್ ದರ್ಶನ್ ಗೆ ಪ್ರತ್ಯುತ್ತರ ನೀಡಿದ್ದಾರೆ.

ಬೆಂಗಳೂರು:  ಹೀರೋಯಿಸಂ ಏನಿದ್ದರೂ ಸಿನಿಮಾಗಳಲ್ಲಿ ಇಟ್ಟುಕೊಳ್ಳಲಿ, ಇದು ನಿಜ ಜೀವನ, ಸಾಕ್ಷಿಗಳನ್ನು ಪೋಲೀಸರ ಎದುರು ಇಡಬೇಕೆ ಹೊರತು ಗಂಡಸ್ತನ ನಿರೂಪಿಸಲು ಆಲ್ಲ ಎಂದು ನಿರ್ದೇಶಕ ಇಂದ್ರಜಿತ್ ಲಂಕೇಶ್ ದರ್ಶನ್ ಗೆ ಪ್ರತ್ಯುತ್ತರ ನೀಡಿದ್ದಾರೆ.

ಇಂದ್ರಜಿತ್ ಲಂಕೇಶ್ ಅವರು ಅಪ್ಪನಿಗೇ ಹುಟ್ಟಿದ್ದರೆ ನನ್ನ ಧ್ವನಿ ಇರುವ ಆಡಿಯೋವನ್ನು ಇಂದೇ ರಿಲೀಸ್ ಮಾಡಲಿ ಎಂದು ನಟ ದರ್ಶನ್ ಮೈಸೂರಿನಲ್ಲಿ ಮಾಧ್ಯಮದವರೆದುರು ಸಲಾಲು ಹಾಕಿದ ಬೆನ್ನಲ್ಲೇ ಇಂದ್ರಜಿತ್ ಈ ಪ್ರತಿಕ್ರಿಯೆ ನೀಡಿದ್ದಾರೆ.

“ನಾನು ಗೂಂಡಾಗಿರಿ ಎನ್ನುವ ಪದ ಬಳಕೆ ಮಾಡಿದ್ದೆ. ಆದರೆ ಎಲ್ಲಿಯೂ “ಗಾಂಡೂಗಿರಿ” ಎಂದಿಲ್ಲ. ಕಲಾವಿಅದರು ಅನಕ್ಷರಸ್ಥರು ಎಂದು ಹೇಳಿಲ್ಲ. ಸಮಾಜಕ್ಕೆ ಕನ್ನಡಿಯಂತೆ, ಮಾದರಿಯಾಗಿರಬೇಕು ಎಂದು ಹೇಳಿದ್ದೆ “ಎಂದು ಇಂದ್ರಜಿತ್ ಸಮರ್ಥನೆ ನೀಡಿದ್ದಾರೆ.

ಇಂದು ಆಸ್ತಿ ವಿಷಯ ಬಂದಿದೆ., ಮುಂದೇನು ಬರುತ್ತದೆಯೋ ಎಂದು ದರ್ಶನ್ ವಿಚಲಿತರಾಗಿದ್ದಾರೆ ಎಂದು ನಿರ್ದೇಶಕರು ನಟನಿಗೆ ಟಾಂಗ್ ನೀಡಿದ್ದಾರೆ.

ದರ್ಶನ್ ಪದ ಬಳಕೆ ಸರಿಯಿಲ್ಲ

ವರನಟ ಡಾ, ರಾಜ್  ಅವರು ಕನ್ನಡ ನಾಡು, ನುಡಿ ಬಗೆಗೆ ಅಪಾರ ಅಭಿಮಾನ ಹೊಂದಿದ್ದರು. ಆದರೆ ದರ್ಶನ್ ಅವರ ಪದ ಬಳಕೆ ಸರಿಯಾಗಿಲ್ಲ. ಅವರೇನಾದರೂ ತೊಂದರೆ ಅನುಭವಿಸುತ್ತಿದ್ದರೆ ಅಥವಾ ಡಿಸ್ಟರ್ಬ್ ಆಗಿದ್ದರೆ ಸೂಕ್ತ ಚಿಕಿತ್ಸೆ ಪಡೆದುಕೊಳ್ಳ ಲಿ ಎಂದು ಇಂದ್ರಜಿತ್ ಸಲಹೆ ನೀಡಿದ್ದಾರೆ.

ಸರ್ವರ್ ಸಹ ಅಭಿಮಾನಿಯಾಗಿರಬಹುದು

ಹೋಟೆಲ್ ಸರ್ವರ್ ಸಹ ಅವರ ಅಭಿಮಾನಿಯೇ ಇರಬಹುದು. ಆದರೆ ಅವರ ಮೇಲೆ ಕೈ ಮಾಡಿದ್ದೇಕೆ? ನೀವು ಗಂಡಸ್ತನ ಸಾಬೀತು ಮಾಡಲು ಪ್ರಯತ್ನಿಸುತ್ತಿದ್ದೀರಾ? ಎಂದು ಪ್ರಶ್ನಿಸಿದ ಇಂದ್ರಜಿತ್ ನೀವು ಅರುಣಾ ಕುಮಾರಿಯವರನ್ನು ತೋಟಕ್ಕೆ ಕರೆಸಿಕೊಂಡಿದೀರೋ ಇಲ್ಲವೋ? ಧರ್ಮಸ್ಥಳದ ಮಂಜುನಾಥಸ್ವಾಮಿಯ ಎದುರು ಪ್ರಮಾಣ ಮಾಡಿ ಎಂದು ನಟನಿಗೆ ಸವಾಲೆಸೆದಿದ್ದಾರೆ. (kpc)

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

ಕಡವೆ ಪ್ರಕರಣ: ಅಧಿಕಾರಿಗಳ ಮೇಲೆ ದೌರ್ಜನ್ಯ ಪ್ರಕರಣ ದಾಖಲಿಸಿದ ಸಂತ್ರಸ್ತ!

ಹುಸೂರಿನ ಕಡವೆ ಪ್ರಕರಣ ಮರೆಮಾಚುವ ಮುನ್ನ ಸಿದ್ಧಾಪುರದ ತ್ಯಾಗಲಿ (ನಾಣಿಕಟ್ಟಾದಲ್ಲಿ)  ಯಲ್ಲಿ ಕಡವೆ ಭೇಟೆ ಮಾಡಿದ ಪ್ರಕರಣ ನಡೆದಿದ್ದು ಈ ಪ್ರಕರಣದಲ್ಲಿ ಆತುರದಿಂದ ವ್ಯಕ್ತಿಯೊಬ್ಬರನ್ನು...

ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ……

ಡಿಕೆಶಿ ಪದಗ್ರಹಣಕ್ಕೆ ಸಿದ್ಧತೆ; ವಿಧಾನಸೌಧದ ಸುತ್ತಮುತ್ತ ಇರುವ ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ ಕರ್ನಾಟಕ ರಾಜ್ಯಪಾಲರ ಹೆಸರಿನಲ್ಲಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ...

ಭಟ್ಕಳ: ತಟ್ಟೆಹಕ್ಕಲು ನದಿಯಲ್ಲಿ ಮುಳುಗಿ ಒಂದೇ ಕುಟುಂಬದ 8 ಮಂದಿ ನೀರುಪಾಲು, ತಲಾ 5 ಲಕ್ಷ ಪರಿಹಾರ ಘೋಷಿಸಿದ ಸರ್ಕಾರ!

ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ತಟ್ಟೆಹಕ್ಕಲು ನದಿಯಲ್ಲಿ ಕಪ್ಪೆ ಚಿಪ್ಪು ತೆಗೆಯಲು ಹೋದ ಎಂಟು ಮಂದಿ ಜಲಸಮಾಧಿಯಾಗಿರುವ ದಾರುಣ ಘಟನೆ ನಡೆದಿದ್ದು ಇಬ್ಬರು ನಾಪತ್ತೆಯಾಗಿದ್ದಾರೆ....

forest land issue… ಅರಣ್ಯ ಭೂಮಿ ಹಕ್ಕು: ಅಧಿಕಾರಿಗಳ ನಿರ್ಲಕ್ಷ, ಮುಖ್ಯಮಂತ್ರಿಗಳ ಬಳಿ ನಿಯೋಗ ತೆರಳಲು ಎಚ್ಚರಿಕೆ!

ಸಿದ್ದಾಪುರ ತಾಲೂಕು ಸೇರಿದಂತೆ ಉತ್ತರ ಕನ್ನಡ ಜಿಲ್ಲೆಯಾದ್ಯಂತ ಅರಣ್ಯ ಭೂಮಿ ಸಾಗುವಳಿ ಹಕ್ಕು ಅರ್ಜಿ ಪಡೆಯುವ ಪ್ರಕ್ರೀಯೆ ನಾಮಕಾವಾಸ್ಥೆ ನಡೆದಿದ್ದು ಇದಕ್ಕೆ ೧೫ ದಿವಸಗಳ...

ಮುಂಗಾರು ಪೂರ್ವ ಬರ ಸಿಡಿಲು….. ಕೋಟ್ಯಾಂತರ ಹಾನಿ! ಎಚ್ಚೆತ್ತ ಜಿಲ್ಲಾಡಳಿತ…

ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ಸೇರಿದಂತೆ ಮಲೆನಾಡಿನಲ್ಲಿ ಸುರಿದ ಮುಂಗಾರು ಪೂರ್ವ ಮಳೆ ಅಪಾರ ಹಾನಿ ಮಾಡಿದೆ. ಒಣ ಬಿಸಿಲಿನಿಂದ ಕಂಗೆಟ್ಟ ಜನಜೀವನಕ್ಕೆ ಮಳೆ...

Latest Posts

ಕಡವೆ ಪ್ರಕರಣ: ಅಧಿಕಾರಿಗಳ ಮೇಲೆ ದೌರ್ಜನ್ಯ ಪ್ರಕರಣ ದಾಖಲಿಸಿದ ಸಂತ್ರಸ್ತ!

ಹುಸೂರಿನ ಕಡವೆ ಪ್ರಕರಣ ಮರೆಮಾಚುವ ಮುನ್ನ ಸಿದ್ಧಾಪುರದ ತ್ಯಾಗಲಿ (ನಾಣಿಕಟ್ಟಾದಲ್ಲಿ)  ಯಲ್ಲಿ ಕಡವೆ ಭೇಟೆ ಮಾಡಿದ ಪ್ರಕರಣ ನಡೆದಿದ್ದು ಈ ಪ್ರಕರಣದಲ್ಲಿ ಆತುರದಿಂದ ವ್ಯಕ್ತಿಯೊಬ್ಬರನ್ನು ಥಳಿಸಿದ ಆರೋಪದ ಮೇಲೆ ಅರಣ್ಯಾಧಿಕಾರಿಗಳ ಮೇಲೆ ದೌರ್ಜನ್ಯ ಪ್ರಕರಣ ದಾಖಲಾದ ಮಾಹಿತಿ ಬಹಿರಂಗವಾಗಿದೆ. ನಾಣಿಕಟ್ಟಾ ಪ್ರದೇಶದಲ್ಲಿ ಆಗಂತುಕರು ಕಡವೆಯನ್ನು ಕೊಂದು ಪರಾರಿಯಾಗಿದ್ದರು. ಈ ಭೇಟೆ ಪ್ರಕರಣದ ಜಾಡು ಹಿಡಿದ...

Recommended For You

About the Author: Kanneshwar Naik

Leave a Reply

Your email address will not be published. Required fields are marked *