3-4 ದಿವಸಗಳ ಒಟ್ಟೂ ಹಾನಿ 1 ಸಾವಿರ ಕೋಟಿ!

ಪ್ರವಾಹದ ತೀವೃತೆಇಳಿಕೆ- 4ಸಾವಿರ ಜನರು ಮರಳಿಮನೆಗೆ
ಮಳೆ, ಮಹಾಪೂರ, 3-4 ದಿವಸಗಳ ಒಟ್ಟೂ ಹಾನಿ 1 ಸಾವಿರ ಕೋಟಿ!
ಈ ವಾರದ ಪ್ರಾರಂಭದಿಂದ ಆರಂಭವಾಗಿದ್ದ ಮಳೆ ಮೂರ್ನಾಲ್ಕು ದಿವಸಗಳಲ್ಲಿ 4 ಸಾವಿರ ಜನರನ್ನು ನಿರಾಶ್ರಿತರನ್ನಾಗಿಸಿ ಇಂದಿನಿಂದ ಮಳೆ-ಗಾಳಿ ತೀವೃತೆ ತಗ್ಗಿದ ಕಾರಣದಿಂದ ನಿರಾಶ್ರಿತರು ಮರಳಿ ಗೂಡು ಸೇರುತಿದ್ದಾರೆ.
ರಾಜ್ಯದಲ್ಲಿ ಅತಿಹೆಚ್ಚು ಮಳೆಯಾದ ಸಿದ್ಧಾಪುರ ತಾಲೂಕಿನಲ್ಲಿ 20 ಕುಟುಂಬಗಳ 67 ಜನರು ನಿರಾಶ್ರಿತರಾಗಿದ್ದರು. ಅವರನ್ನು ಮೂರು ಶಾಲೆಗಳಲ್ಲಿ ಊಟ, ವಸತಿ ನೀಡಿ ಪುನರ್ ರ್ವಸತಿ ಒದಗಿಸಲಾಗಿತ್ತು. ಇದೇ ರೀತಿ ಘಟ್ಟದ ಮೇಲಿನ ತಾಲೂಕುಗಳಿಗಿಂತ ಕೆಳಗಿನ ತಾಲೂಕುಗಳಲ್ಲಿ ಮಹಾಪೂರ ಬಹಳಷ್ಟು ಜನರನ್ನು ಭಾದಿಸಿ ಸಾವಿರಾರು ಜನರು ಗಂಜಿ ಕೇಂದ್ರಗಳಲ್ಲಿ ಆಶ್ರಯ ಪಡೆದಿದ್ದರು.
ಲಕ್ಷಾಂತರ ಎಕರೆ ಕೃಷಿ ಭೂಮಿ ಮುಳುಗಡೆಯಾಗಿ ಕೋಟ್ಯಂತರ ರೂಪಾಯಿ ಮೌಲ್ಯದ ಆಸ್ತಿ-ಪಾಸ್ತಿ ಹಾನಿಯಾಗಿತ್ತು. ಉತ್ತರಕನ್ನಡ ಜಿಲ್ಲೆಯ ಮಳೆ, ಪ್ರವಾಹದ ಒಟ್ಟೂ ಆಸ್ತಿ, ಮನೆ, ಬೆಳೆ ನಷ್ಟ ಕನಿಷ್ಟ ನೂರಾರು ಕೋಟಿ ಎಂದು ಅಂದಾಜಿಸಲಾಗಿದೆ.
ಒಂದು ಸಮೀಕ್ಷೆ ಪ್ರಕಾರ ಉತ್ತರ ಕನ್ನಡ ಜಿಲ್ಲೆಯಲ್ಲಿ ಆದ ರಸ್ತೆನಾಶ, ಬೆಳೆನಾಶ, ಆಸ್ತಿ-ಮನೆ, ಜೀವಹಾನಿಗಳ ಒಟ್ಟೂ ಮೊತ್ತ ಸಾವಿರ ಕೋಟಿ!ಗೂ ಅಧಿಕ ಎನ್ನಲಾಗುತ್ತಿದೆ.
ಹಳಿಯಾಳ ತಾಲೂಕಿನಲ್ಲಿ ರಸ್ತೆ, ಸೇತುವೆ ಮೇಲೆ ನುಗ್ಗಿದ ನೀರು ಬೆಳೆಹಾನಿ ಮಾಡಿದೆ. ಜೊಯಡಾ. ದಾಂಡೇಲಿ ತಾಲೂಕುಗಳಲ್ಲಿ ಮಳೆಯಿಂದಾಗಿ ಬೆಳೆ, ಆಸ್ತಿ-ಕೃಷಿಭೂಮಿ ನಾಶವಾಗಿದೆ. ಕಾರವಾರದ ಕೆಲವೆಡೆ ಮಳೆನೀರು ಕೃಷಿ-ಉದ್ಯಮಗಳ ಚಟುವಟಿಕೆ ಮೇಲೆ ಪರಿಣಾಮ ಬೀರಿ ಹಾನಿಯಾಗಿದೆ. ಕೃಷಿ ಭೂಮಿ, ವಾಸ್ತವ್ಯದ ಪ್ರದೇಶಗಳಿಗೆ ನುಗ್ಗಿದ ನೀರು ಮಾಡಿರುವ ಹಾನಿ ಅಪಾರ,
ಅಂಕೋಲಾ ತಾಲೂಕಿನಲ್ಲಿ ಗಂಗಾವಳಿ ನದಿ ನೀರು ಲಕ್ಷಾಂತರ ಎಕರೆ ಕೃಷಿಭೂಮಿ ಮೇಲೆ ಹರಿದು ಬೆಳೆನಾಶ, ಕುಮಟಾ ತಾಲೂಕಿನಲ್ಲಿ ಅಘನಾಶಿನಿ, ಗಂಗಾವಳಿ ನದಿಗಳ ನೀರಿನಿಂದ ಅಪಾರ ಹಾನಿ, ಜನಜೀವನಕ್ಕೆ ನಷ್ಟ.
ಹೊನ್ನಾವರ ಭಟ್ಕಳ ತಾಲೂಕುಗಳಲ್ಲಿ ಶರಾವತಿಯ ನೀರು, ಮಳೆ ಸೇರಿ ಲಕ್ಷಾಂತರ ಎಕರೆ ಬೆಳೆ ನಾಶವಾಗಿದೆ.ಸಿದ್ಧಾಪುರ-ಶಿರಸಿಗಳಲ್ಲೂ ಅಡಿಕೆ, ಭತ್ತ, ಬಾಳೆ, ಶುಂಠಿ ಬೆಳೆಗಳ ಹಾನಿ ಅಪಾರ. ಯಲ್ಲಾಪುರ, ಮುಂಡಗೋಡುಗಳಲ್ಲೂ ಬೆಳೆ ನಾಶ. ಜಿಲ್ಲೆಯಾದ್ಯಂತ ರಸ್ತೆ, ಸೇತುವೆ, ಕಾಲು ಸೇತುವೆ, ತೂಗುಸೇತುವೆಗಳಿಗೆ ಹಾನಿಯಾಗಿದೆ.
ಇಷ್ಟೆಲ್ಲ ಹಾನಿ-ನಷ್ಟಗಳ ನಡುವೆ ಜನ-ಜಾನುವಾರುಗಳ ಜೀವಹಾನಿ ಕಡಿಮೆ. ಉತ್ತರಕನ್ನಡ ಜಿಲ್ಲಾಧಿಕಾರಿ ಹರೀಶ್‍ಕುಮಾರ ಕೆ. ನೇತೃತ್ವದಲ್ಲಿ ಎಲ್ಲಾ ತಾಲೂಕಾ ಆಡಳಿತಗಳು ಪರಿಣಾಮಕಾರಿ ಕೆಲಸ ಮಾಡುವ ಮೂಲಕ ಜನರಲ್ಲಿ ವಿಶ್ವಾಸ ತುಂಬಿದ್ದಾರೆ. ಮನೆ. ಕೃಷಿ, ಕೃಷಿಭೂಮಿ ನಷ್ಟ ತುಂಬಿಕೊಳ್ಳಲು ಕನಿಷ್ಟ 1-2 ತಿಂಗಳ ಅವಧಿಯ ಸಮಯವೇ ಬೇಕು ಎನ್ನಲಾಗಿದೆ.

ನಿರಾಶ್ರಿತರಿಗೆ ತಹಸಿಲ್ಧಾರರ ಮೂಲಕ ನೆರವು ನೀಡಲು ಮನವಿ
ಸಿದ್ಧಾಪುರ,ಆ.08-ತಾಲೂಕಿನ ಎರಡು ನದಿಗಳ ನೀರಿನ ಮಹಾಪೂರ ಮತ್ತು ಮಳೆ ಹಿನ್ನೆಲೆಯಲ್ಲಿ ಸೋವಿನಕೊಪ್ಪ, ಅಕ್ಕುಂಜಿ,ಕಲ್ಯಾಣಪುರ ಶಾಲೆಗಳಲ್ಲಿ ಪುನರ್ವಸತಿ ಕೇಂದ್ರಗಳನ್ನು ಸ್ಥಾಪಿಸಿದ್ದು ಈ ನಿರಾಶ್ರಿತರಿಗೆ ನೆರವು ನೀಡುವ ದಾನಿಗಳು ತಹಸಿಲ್ದಾರರ ಮೂಲಕ ನೆರವು ಒದಗಿಸುವಂತೆ ವಿನಂತಿಸಲಾಗಿದೆ. ಆಸಕ್ತರು ತಮ್ಮ ನೆರವನ್ನು ತಹಸಿಲ್ದಾರರ ಕಾರ್ಯಾಲಯದ ಮೂಲಕ ನೀಡಬೇಕು ಎಂದು ಕಂದಾಯ ಇಲಾಖೆಯ ಪ್ರಕಟಣೆ ತಿಳಿಸಿದೆ.

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

O

siddapur nk – this week…..

ಸಿದ್ದಾಪುರ : ಮನೆಗೆ ನುಗ್ಗಿ ಮಹಿಳೆಯ ಚಿನ್ನದ ಸರ ಎಗರಿಸಿದ ಸರಗಳ್ಳ!!?* *ಸಿದ್ದಾಪುರ*: ಮಹಿಳೆಯೊಬ್ಬರ ಮಂಗಲಸೂತ್ರ ಕದ್ದ ಪ್ರಕರಣವೊಂದು ನಿನ್ನೆ ನಡೆದಿರುವ ಕುರಿತು ಉತ್ತರ...

ಕಡವೆ ಪ್ರಕರಣ: ಅಧಿಕಾರಿಗಳ ಮೇಲೆ ದೌರ್ಜನ್ಯ ಪ್ರಕರಣ ದಾಖಲಿಸಿದ ಸಂತ್ರಸ್ತ!

ಹುಸೂರಿನ ಕಡವೆ ಪ್ರಕರಣ ಮರೆಮಾಚುವ ಮುನ್ನ ಸಿದ್ಧಾಪುರದ ತ್ಯಾಗಲಿ (ನಾಣಿಕಟ್ಟಾದಲ್ಲಿ)  ಯಲ್ಲಿ ಕಡವೆ ಭೇಟೆ ಮಾಡಿದ ಪ್ರಕರಣ ನಡೆದಿದ್ದು ಈ ಪ್ರಕರಣದಲ್ಲಿ ಆತುರದಿಂದ ವ್ಯಕ್ತಿಯೊಬ್ಬರನ್ನು...

ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ……

ಡಿಕೆಶಿ ಪದಗ್ರಹಣಕ್ಕೆ ಸಿದ್ಧತೆ; ವಿಧಾನಸೌಧದ ಸುತ್ತಮುತ್ತ ಇರುವ ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ ಕರ್ನಾಟಕ ರಾಜ್ಯಪಾಲರ ಹೆಸರಿನಲ್ಲಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ...

ಭಟ್ಕಳ: ತಟ್ಟೆಹಕ್ಕಲು ನದಿಯಲ್ಲಿ ಮುಳುಗಿ ಒಂದೇ ಕುಟುಂಬದ 8 ಮಂದಿ ನೀರುಪಾಲು, ತಲಾ 5 ಲಕ್ಷ ಪರಿಹಾರ ಘೋಷಿಸಿದ ಸರ್ಕಾರ!

ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ತಟ್ಟೆಹಕ್ಕಲು ನದಿಯಲ್ಲಿ ಕಪ್ಪೆ ಚಿಪ್ಪು ತೆಗೆಯಲು ಹೋದ ಎಂಟು ಮಂದಿ ಜಲಸಮಾಧಿಯಾಗಿರುವ ದಾರುಣ ಘಟನೆ ನಡೆದಿದ್ದು ಇಬ್ಬರು ನಾಪತ್ತೆಯಾಗಿದ್ದಾರೆ....

Latest Posts

O

Recommended For You

About the Author: Kanneshwar Naik

Leave a Reply

Your email address will not be published. Required fields are marked *