ಈ ಸುಂದರ ನೀರಂದವ ಕಂಡಿರಾ?

ಉತ್ತರ ಕನ್ನಡ ಜಿಲ್ಲೆ ಜಲಪಾತಗಳ ಜಿಲ್ಲೆ ಇಲ್ಲಿ ದೊಡ್ಡ,ಸಣ್ಣ-ಪುಟ್ಟ ಜಲಪಾತಗಳನ್ನು ಎಣಿಸುತ್ತಾ ಹೋದರೆ ಸಂಚೂರಿ ದಾಟುವುದು ಲೆಕ್ಕ!
ಹೌದು ಪಕ್ಕಾ ಉತ್ತರ ಕನ್ನಡ ಬಲ್ಲವರು ಇಲ್ಲಿ ನೂರು ಜಲಪಾತಗಳನ್ನು ಗುರುತಿಸಬಲ್ಲರು.
ಈಗ ನೀವು ಉತ್ತರಕನ್ನಡ ಜಿಲ್ಲೆಯ ಶಿರಸಿಗೆ ಬಂದು ಅಲ್ಲಿಂದ ಜೋಗ ಜಲಪಾತ ನೋಡಲು ಅನುವಾಗುತ್ತೀರಿ ಎಂದಿಟ್ಟುಕೊಳ್ಳಿ, ಜೋಗ ಜಲಪಾತ ತಿಳಿಬಿಸಿಲಲ್ಲಿ ಮನೋಹರ.
ಮಧ್ಯಾಹ್ನ 11 ರಿಂದ ಸಾಯಂಕಾಲ 5 ರವರೆಗೆ ಮಂಜುಮುಸುಕಿಲ್ಲದಿದ್ದರೆ ಜೋಗದ ಜಲಪಾತ ನೋಡಲು ಅದ್ಭುತ ಹ್ಯಾಗೂ ಅಲ್ಲಿಗೆ 11ಗಂಟೆಯ ನಂತರ ತಲುಪಿದರೆ ಸೂಕ್ತ. ಅದಕ್ಕಿಂತ ಮೊದಲು ಶಿರಸಿಯಿಂದ ಸಿದ್ಧಾಪುರದ ನಾಣಿಕಟ್ಟಾ ತ್ಯಾಗಲಿ ನಂತರ ಕಾಳೇನಳ್ಳಿ ಎನ್ನುವ ಹೆಸರಿನ ಊರಿಂದ ಅರಣ್ಯಮಾರ್ಗದಲ್ಲಿ 2 ಕಿ.ಮೀ ರಸ್ತೆ ಕ್ರಮಿಸುವುದರಲ್ಲಿ ಒಂದು ಜಲಾತದ ದರ್ಶನವಾಗುತ್ತದೆ.
ಅದು ಗಿಳಿಗುಂಡಿ ಹೊಳೆ ಸೃಷ್ಟಿಸಿರುವ ನೈಸರ್ಗಿಕ ಜಲಪಾತ. ಅಪಾಯದ ಕಲ್ಲುಬಂಡೆಗಳನ್ನು ಏರದೆ ಹೊಳೆಯಿಂದ ಹೊರಗೆ ನಿಂತು ಒಂದುಗಂಟೆ ವೀಕ್ಷಿಸಿದರೂ ಸಾಕೆನಿಸದ ಸುಂದರ ಜಲಾತವಿದೆ. ಆ ಜಲಪಾತಕ್ಕೆ ಕಾಳೇನಳ್ಳಿ ಜಲಪಾತ ಎನ್ನುತ್ತಾರೆ. ರಸ್ತೆ ಅಷ್ಟು ಉತ್ತಮವಾಗಿಲ್ಲ ಯಾಕೆಂದರೆ, ಈ ಕ್ಷೇತ್ರಕ್ಕೆ ಕಾಗೇರಿ ವಿಶ್ವೇಶ್ವರ ಹೆಗಡೆ ಮತ್ತು ಸಂಸ್ಕøತ ವ್ಯಾಮೋಹಿ ವೈದಿಕ ಅನಂತ ಹೆಗಡೆ ಜನಪ್ರತಿನಿಧಿಗಳು.
ದೂರದ ಪ್ರವಾಸಿಗಳು, ಪಿಕನಿಕ್ ಮಾಡುವವರಿಗೆ ಅಡಿಗೆ ತಯಾರಿಸಿಕೊಳ್ಳಲು ಅವಕಾಶವಿದೆ. ಅನಿವಾರ್ಯ ನೆರವು, ಮಾಹಿತಿ, ಸಹಾಯ ಬೇಕಾದರೆ ನಾರಾಯಣ ಎನ್ನಿ, ಜಲಪಾತದ ಮೇಲೆ ಮನೆಮಾಡಿಕೊಂಡಿರುವ ನಾರಾಯಣ ಓಡೋಡಿ ಬರುತ್ತಾನೆ. ಚಂಡ ಸಿನೆಮಾ ಶೂಟಿಂಗ್ ನಿಂದ ಪ್ರಾರಂಭಿಸಿ ಈ ಜಲಪಾತದ ದಂತಕತೆಗಳನ್ನು ಹೇಳುತ್ತಾನೆ.
ಇಲ್ಲಿಂದ ಜೋಗ ಮಾರ್ಗದಲ್ಲಿ ಹೊರಟರೆ 4 ಕಿ.ಮಿ. ಕ್ರಮಿಸುತ್ತಲೇ ಶಿರಸಿ-ಸಿದ್ಧಾಪುರ ಮಾರ್ಗದಲ್ಲೇ ತುಂಬರಗೋಡು ಜಲಪಾತ ಸಿಗುತ್ತದೆ. ಅಲ್ಲಿ ಅರ್ಧ ಗಂಟೆ ನೀರನರ್ತನ ಸವಿಯಬಹುದು.
ಮುಂದೆ ಜೋಗ ಮಾರ್ಗದಲ್ಲಿ ಹಲಗೇರಿಯಿಂದ ಒಳಗೆ ಒಂದೇ ಕಿ.ಮೀ. ಅಂತರದಲ್ಲಿ ಆಡುಕಟ್ಟಾ ರಸ್ತೆಯ ಪಕ್ಕಕ್ಕೇ ಹುಸೂರಿನ ನಿಪ್ಲಿ ಜಲಪಾತ ಕಾಣುತ್ತದೆ. ಅಲ್ಲಿ ಕನಿಷ್ಟ ಒಂದೆರಡು ಗಂಟೆ ಸಮಯ ಬಳಸಿ ಚಂದದ ಪ್ರಕೃತಿ ನೀರಧಾರೆ ನೋಡಬಹುದು. ಅಲ್ಲಿಂದ ಮಾವಿನಗುಂಡಿ ಪ್ರವೇಶಿಸುವ ಮೊದಲು ಒಂದು ತೀರ್ಥ ಪ್ರತ್ಯಕ್ಷವಾಗುತ್ತದೆ. ಬಿಸಿಲು, ಸೆಕೆಯೆನಿಸಿದರೆ ಜಾಗೂರೂಕತೆಯಿಂದ ತೀರ್ಥಸ್ನಾನ ಮಾಡಿ. ನಂತರ ಜೋಗದ ಗುಂಡಿ.
ಹಂಸಲೇಖ ಬರೆದ
ಮಾನವನಾಗಿ ಹುಟ್ಟಿದಮೇಲೆ ಏನೇನ್ ಕಂಡಿ, ಸಾಯೋತನಕ ಜೀವನದಾಗ ಗಂಡಾಗುಂಡಿ….
ಜೀವನ (ಸಾಯೋದ್ರೊಳಗ) ದಾಗ ಒಮ್ಮೆ ನೋಡು ಜೋಗದಗುಂಡಿ.
( ಓದ್ತಾ ಇರಿ, ಕಾಯ್ತಾ ಇರಿ ಸಮಾಜಮುಖಿ)

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

ಗ್ರಾಮೀಣ ಸೇವಾ ಸಹಕಾರಿ ಸಂಘಗಳು ಮುಳುಗುತ್ತಿವೆ..! ಜಾಗೃತೆ..

ರೈತರ ಅನುಕೂಲಕ್ಕಿರುವ ಗ್ರಾಮೀಣ ಸೇವಾ ಸಹಕಾರಿ ಸಂಘಗಳು ಮುಳುಗುತ್ತಿವೆ ಎನ್ನುವುದಕ್ಕೆ ಅನೇಕ ದೃಷ್ಟಾಂತಗಳಿವೆ. ಆದರೆ ಸಹಕಾರಿ ಕ್ಷೇತ್ರ ನಿಯಂತ್ರಿಸುವವರು ತಮ್ಮ ಅನುಕೂಲಕ್ಕೆ ಸಂಘಗಳನ್ನು ಬಳಸಿಕೊಂಡು...

bhaarat jodo… ಯುವ ಸಂಘ ನೋಂದಣಿಗೆ ಶಾಸಕರ ಮನವಿ

ಸಿದ್ದಾಪುರ: ರಾಜ್ಯದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ರ ಮಹತ್ವಾಕಾಂಕ್ಷೆ ಭಾರತ್ ಜೋಡೋ ಯುವ ಸಂಘಗಳನ್ನು ತಕ್ಷಣ ನೊಂದಣಿ ಮಾಡಿಸಿಕೊಂಡು ಸರ್ಕಾರದ ಅನುದಾನ ಸದುಪಯೋಗ ಪಡಿಸಿಕೊಳ್ಳುವಂತೆ ಶಿರಸಿ-ಸಿದ್ದಾಪುರ...

ಶ್ರೇಷ್ಠ ಶಿಕ್ಷಕ ವಿರೂಪಾಕ್ಶಪ್ಪ ಮೇಟಿ

ಕೆ.ಪಿ.ಸಿ.ಸಿ ಯಿಂದ ನೀಡಲಾಗುವ ಮಾಜಿ ಪ್ರಧಾನಿ ಶ್ರೀ ರಾಜೀವ ಗಾಂಧಿ ರಾಜ್ಯ ಮಟ್ಟದ ಶ್ರೇಷ್ಠ ಶಿಕ್ಷಕ ಪ್ರಶಸ್ತಿಗೆ ಆಯ್ಕೆಯಾದ ಉಪನ್ಯಾಸಕ ವಿರುಪಾಕ್ಷಪ್ಪ ಮೇಟಿ ಸಿದ್ದಾಪುರ,ಸೆ,೩:-...

kolsirsi vss issue…part -04 ನಾನೇ ಹೊಣೆ ನಾನೇ ಜವಾಬ್ದಾರಿ ಎಂದ ಸಿಇಒ ಮಾಳವಿ….

ಕೋಲ ಶಿರಸಿ vss ನ ಪ್ರಕರಣ ಹಗರಣದ ಸ್ವರೂಪ ಪಡೆದಿದೆ… ಈ ಅಪರಾ ತಪರಾ ರೂವಾರಿ ಸಿಇಒ/ ಸೆಕ್ರೆಟರಿ ಎಂಬುದು ನಿರ್ವಿವಾದ. ಈ ಬಗ್ಗೆ...

ಕೋಲಶಿರಸಿ vss ಆಡಳಿತ ಸಮೀತಿ & ಸಿಇಒ ವಿರುದ್ಧ ಇಲಾಖೆಗೆ ದೂರು

ಸಿದ್ದಾಪುರ ತಾಲೂಕಿನ ಕೋಲಶಿರಸಿ vss ನಲ್ಲಿ ನಡೆದಿದೆ ಎನ್ನಲಾದ ಬಹುಕೋಟಿ ಹಗರಣದ ಹಿಂದೆ ಇರುವ ಹಾಲಿ ಆಡಳಿತ ಮಂಡಳಿ & ಸಿಇಒ/ ಕಾರ್ಯದರ್ಶಿ ಗಳ...

Latest Posts

ಗ್ರಾಮೀಣ ಸೇವಾ ಸಹಕಾರಿ ಸಂಘಗಳು ಮುಳುಗುತ್ತಿವೆ..! ಜಾಗೃತೆ..

ರೈತರ ಅನುಕೂಲಕ್ಕಿರುವ ಗ್ರಾಮೀಣ ಸೇವಾ ಸಹಕಾರಿ ಸಂಘಗಳು ಮುಳುಗುತ್ತಿವೆ ಎನ್ನುವುದಕ್ಕೆ ಅನೇಕ ದೃಷ್ಟಾಂತಗಳಿವೆ. ಆದರೆ ಸಹಕಾರಿ ಕ್ಷೇತ್ರ ನಿಯಂತ್ರಿಸುವವರು ತಮ್ಮ ಅನುಕೂಲಕ್ಕೆ ಸಂಘಗಳನ್ನು ಬಳಸಿಕೊಂಡು ಸಹಕಾರಿ ಕ್ಷೇತ್ರ ಜನಪರ ಎನ್ನುವ ಸುಳ್ಳು ಪ್ರಚಾರದಲ್ಲಿ ತೊಡಗಿದ್ದಾರೆ. ಸಿದ್ದಾಪುರ ಕೋಲಶಿರ್ಸಿ ಸೇವಾ ಸಹಕಾರಿ ಸಂಘದ ಬಹುಕೋಟಿ ಹಗರಣದ ನಂತರ ಒಂದೊಂದೇ ಗುಟ್ಟುಗಳು ರಟ್ಟಾಗತೊಡಗಿವೆ. ಸಿದ್ದಾಪುರದ ಪ್ರಮುಖ ಸಹಕಾರಿಗಳು,...

Recommended For You

About the Author: Kanneshwar Naik

1 Comment

Leave a Reply

Your email address will not be published. Required fields are marked *