ಕಾರ್ನಾಡ್ ಕೃತಿಗಳ ಕುರಿತು ಸಂವಾದ ಮತ್ತು ಓದು ಅಭಿಯಾನದ ಸಮಾರೋಪ

ಜುಲೈ 27, 28 : ಶಿರಸಿಯಲ್ಲಿ ಕೋಶ ಓದು ದೇಶ ನೋಡು ಬಳಗದಿಂದ
ಕಾರ್ನಾಡ್ ಕೃತಿಗಳ ಕುರಿತು ಸಂವಾದ ಮತ್ತು ಓದು ಅಭಿಯಾನದ ಸಮಾರೋಪ
ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ, ನಾಡಿನ ಹೆಮ್ಮೆಯ ನಾಟಕಕಾರ ಗಿರೀಶ್ ಕಾರ್ನಾಡ್ ಸ್ಮರಣೆಯಲ್ಲಿ ‘ಕೋಶ ಓದು, ದೇಶ ನೋಡು ಬಳಗ’ ಈ ಬಾರಿ ಕಾರ್ನಾಡ್ ಕೃತಿಗಳನ್ನು ಓದುವ, ಓದಿಸುವ ಅಭಿಯಾನ ಹಮ್ಮಿಕೊಂಡಿತ್ತು. ಕಳೆದ ಜೂನ್ ತಿಂಗಳ ಕೊನೆಯ ವಾರದಲ್ಲಿ ಸಾಮಾಜಿಕ ಜಾಲತಾಣಗಳ ಮೂಲಕ ಚಾಲನೆ ಪಡೆದ ಅಭಿಯಾನ ಒಂದು ತಿಂಗಳು ಪೂರೈಸಿ, 27, 28 ಜುಲೈ 2019ರಂದು ‘ಕಾರ್ನಾಡರ ಕೃತಿಗಳೊಂದಿಗೆ ಸಮಕಾಲೀನ ಸಂವಾದ’ ಮತ್ತು ಸಮಾರೋಪಕ್ಕೆ ಸಿದ್ಧವಾಗಿದೆ.
ಈ ಅವಧಿಯಲ್ಲಿ ರಾಜ್ಯದಾದ್ಯಂತ ನೂರಾರು ಜನರು ಅಭಿಯಾನದ ಭಾಗವಾಗಿ ಕಾರ್ನಾಡ್ ಕೃತಿಗಳನ್ನು ಓದಿದ್ದಾರೆ ಮತ್ತು ಹಲವರು ಸಾಮಾಜಿಕ ಜಾಲತಾಣ ಹಾಗೂ ಸ್ಥಳೀಯ ಗುಂಪುಗಳಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಕೋಶ ಓದು, ದೇಶ ನೋಡು ಬಳಗವು ಕಳೆದ ಎರಡುವರ್ಷಗಳಿಂದ ಮಹತ್ವದ ಕೃತಿಗಳನ್ನು ಓದುವ, ಓದಿಸುವ ಮತ್ತು ಸಂವಾದ ನಡೆಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತ ಬಂದಿದೆ. 2017ರಲ್ಲಿ ನಿರಂಜನರ ಚಿರಸ್ಮರಣೆ ಕಾದಂಬರಿಯ ಓದು ಮತ್ತು ಕಯ್ಯೂರು ಭೇಟಿಯೊಡನೆ ಆರಂಭವಾದ ಅಭಿಯಾನ, ಆನಂತರ ಶಿವರಾಮ ಕಾರಂತರ ಚೋಮನ ದುಡಿ, ಖುಷ್ವಂತ್ ಸಿಂಗರ ಟ್ರೈನ್ ಟು ಪಾಕಿಸ್ತಾನ್, ಮಾಂಟೋ ಕಥೆಗಳು ಹಾಗೂ ಭೀಷ್ಮ ಸಹಾನಿಯವರ ತಮಸ್ ಕೃತಿಗಳ ಯಶಸ್ವಿ ಓದು? ಸಂವಾದ ನಡೆಸಿತ್ತು.
ಈ ಬಾರಿ ಕಾರ್ನಾಡ್ ನಿಧನರಾದ ಹಿನ್ನೆಲೆಯಲ್ಲಿ ಹಾಗೂ ಕಾರ್ನಾಡರ ಕೃತಿಗಳ ಸಮಕಾಲೀನತೆಯನ್ನು ಚರ್ಚಿಸುವ ನಿಟ್ಟಿನಲ್ಲಿ ಅವರ ಕೃತಿಗಳನ್ನು ಸಂವಾದಕ್ಕೆ ಆಯ್ದುಕೊಳ್ಳಲಾಗಿತ್ತು.
ಗಿರೀಶ್ ಕಾರ್ನಾಡರು ತನ್ನ ಬಾಲ್ಯ ಕಳೆದ ಶಿರಸಿಯಲ್ಲಿ ಈ ಬಾರಿಯ ಓದು ಅಭಿಯಾನದ ಭಾಗವಾಗಿ ಸಂವಾದ ನಡೆಯಲಿದ್ದು, ಜುಲೈ 27ರ ಶನಿವಾರ ಬೆಳಗ್ಗೆ 10 :30 ಕ್ಕೆ ಚಾಲನೆ ಪಡೆಯಲಿದೆ. ಕಾರ್ಯಕ್ರಮವು ಯಲ್ಲಾಪುರ ರಸ್ತೆಯಲ್ಲಿರುವ ದೇವನಿಲಯದ ನಿಸರ್ಗಧಾಮದಲ್ಲಿ ನಡೆಯಲಿದೆ.
ಶಾಂತಾರಾಮ ನಾಯಕ ಹಿಚ್ಕಡ ಅಧ್ಯಕ್ಷತೆಯಲ್ಲಿ, ಡಾ.ರಾಜೇಂದ್ರ ಚೆನ್ನಿ ಕಾರ್ಯಕ್ರಮದ ಉದ್ಘಾಟನೆ ಮಾಡಲಿದ್ದಾರೆ. ಈ ಸಂದರ್ಭದಲ್ಲಿ ಡಾ.ಹಸೀನಾ ಖಾದ್ರಿ ಹಾಗೂ ಮುನೀರ್ ಕಾಟಿಪಳ್ಳ ಅವರ ಉಪಸ್ಥಿತಿ ಇರಲಿದೆ. ಅನಂತರ ಶ್ರೀಪಾದ ಭಟ್ ನಿರ್ದೇಶನದಲ್ಲಿ ಕಾರ್ನಾಡರ ನಾಟಕಗಳ ವಾಚಿಕಾಭಿನಯ ನಡೆಯಲಿದೆ. ಎರಡೂ ದಿನಗಳ ಕಾಲ ರಾಜ್ಯದ ವಿವಿಧ ಭಾಗಗಳಿಂದ ಬರುವ 1ಂಂ ಕ್ಕೂ ಹೆಚ್ಚು ಓದುಗರು ಕಾರ್ನಾಡರ ಕೃತಿಗಳ ಕುರಿತು ವಿವಿಧ ಆಯಾಮಗಳ ಚರ್ಚೆ ನಡೆಸಲಿದ್ದಾರೆ.
ಜುಲೈ 28ರ ಇಳಿ ಮಧ್ಯಾಹ್ನ ಸಮಾರೋಪ ಕಾರ್ಯಕ್ರಮ ನಡೆಯಲಿದ್ದು, ಡಾ..ಎಂ.ಜಿ. ಹೆಗಡೆ ಸಮಾರೋಪ ಮಾತುಗಳನ್ನಾಡಲಿದ್ದಾರೆ ಹಾಗೂ ಡಾ.ಅನಸೂಯಾ ಕಾಂಬ್ಳೆ ಉಪಸ್ಥಿತಿ ಇರಲಿದೆ.
ಚಿಂತನ ರಂಗ ಅಧ್ಯಯನ ಕೇಂದ್ರ ಹಾಗೂ ಸಹಯಾನ, ಕೆರೆಕೋಣ ಸಹಯೋಗದಲ್ಲಿ ಕೋಶ ಓದು ದೇಶ ನೋಡು ಬಳಗವು ಈ ಕಾರ್ಯಕ್ರಮಗಳನ್ನು ಆಯೋಜಿಸಿದೆ.

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

ಪ್ರತಿಭೋತ್ಸವ: ಕಲಾವಿದರಿಗೆ ಸನ್ಮಾನ

ಸಿದ್ದಾಪುರ: ಪಟ್ಟಣದ ನಿವೇದಿತಾ ಮಹಿಳಾ ಮಂಡಳಿಯಲ್ಲಿ ನಡೆಯುತ್ತಿರುವ ಶ್ರೀ ಸದ್ಗುರು ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತಾ ವಿದ್ಯಾಲಯ ದ ಸಿದ್ದಾಪುರ ಶಾಖೆಯ ಪ್ರತಿಭೋತ್ಸವ ಕಾರ್ಯಕ್ರಮ ಅಕ್ಟೋಬರ್...

“ಒಂದೇ ಕಲ್ಲಿಗೆ ಎರಡು ಹಕ್ಕಿ, ಸಿದ್ದಾಪುರ ಬ್ಲಾಕ್ ಕಾಂಗ್ರೆಸ್ ಕಕ್ಕಾಬಿಕ್ಕಿ!”

ವಿಶ್ಲೇಷಣೆ….. (- ಅನಾಮಿಕ) ​ಶಿರಸಿ ಮತ್ತು ಸಿದ್ದಾಪುರ, ಎರಡು ಕಣ್ಣುಗಳಿದ್ದಂತೆ, ಆದರೆ ಈ ಎರಡೂ ಕಣ್ಣುಗಳಿಗೆ ಒಂದೇ ಜೋಡಿ ಕನ್ನಡಕ! ಹೌದು, ಎರಡೂ ಕ್ಷೇತ್ರಗಳಿಗೆ...

ಕಾಳಗದಲ್ಲಿ “ಅಧ್ಯಕ್ಷ ಗಾದಿ”,.. ಲಾಭಿಯೇ ಮುಂದಿನ ಹಾದಿ..!??

Sirsi block congress issue….( ಓದುಗರ ವಿಶ್ಲೇಷಣೆ) ಶಿರಸಿ ಬ್ಲಾಕ್ ಕಾಂಗ್ರೆಸ್ ರಾಜಕೀಯ ಕಣದಲ್ಲಿ ಈಗ ಸಖತ್ ಟೆನ್ಷನ್! ಪರೇಡ್ ಮುಗಿಸಿದ ಬೆನ್ನಲ್ಲೇ, ಈಗ...

ಒಂದು ಪತ್ರ.. ಒಡೆದಾಳುವವರ ದಾಳವಾಗಬೇಡಿ ನಾಮಧಾರಿಗಳೆ…

ಮಾನ್ಯರೆ… ನಮಸ್ಕಾರಗಳು… ಕೆಲವು ದಿವಸಗಳಿಂದ ನಿಮಗೊಂದು ಪತ್ರ ಬರೆಯಬೇಕೆಂದುಕೊಂಡು ಯೋಚಿಸುತ್ತಾ ಈ ಬರಹ ಬರೆಯುತ್ತಿದ್ದೇನೆ. Samaajamukhi youtube channel, samajamukhi.net News ಮೂಲಕ ನೀವು...

ಓಣಿಕೇರಿ ಮಾಸ್ತ್ಯ ರಾಮ ನಾಯ್ಕ ನಿಧನ

ಸಿದ್ದಾಪುರ, ತಾಲೂಕಿನ ಕಿಲಾರ ಓಣಿಕೇರಿಯ ಹಿರಿಯ ಸಾಮಾಜಿಕ ಕಾರ್ಯಕರ್ತ ಮಾಸ್ತ್ಯಾ ರಾಮ ನಾಯ್ಕ ಮಂಗಳವಾರ ನಿಧನರಾದರು. ಮೂವರು ಗಂಡುಮಕ್ಕಳು ಸೇರಿ ಅಪಾರ ಬಂಧು ಬಳಗ...

Latest Posts

ಪ್ರತಿಭೋತ್ಸವ: ಕಲಾವಿದರಿಗೆ ಸನ್ಮಾನ

ಸಿದ್ದಾಪುರ: ಪಟ್ಟಣದ ನಿವೇದಿತಾ ಮಹಿಳಾ ಮಂಡಳಿಯಲ್ಲಿ ನಡೆಯುತ್ತಿರುವ ಶ್ರೀ ಸದ್ಗುರು ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತಾ ವಿದ್ಯಾಲಯ ದ ಸಿದ್ದಾಪುರ ಶಾಖೆಯ ಪ್ರತಿಭೋತ್ಸವ ಕಾರ್ಯಕ್ರಮ ಅಕ್ಟೋಬರ್ 25 ರಂದು ಇಲ್ಲಿಯ ಶಂಕರಮಠದಲ್ಲಿ ಜರುಗಲಿದೆ ಎಂದು ಸಂಗೀತ ಶಿಕ್ಷಕಿ ವಿದುಷಿ ವಸುದಾ ಶರ್ಮಾ ತಿಳಿಸಿದರು.ಪಟ್ಟಣದ ನಿವೇದಿತಾ ಮಹಿಳಾ ಮಂಡಳಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿ, ಪ್ರಸ್ತುತ 35...

Recommended For You

About the Author: Kanneshwar Naik

Leave a Reply

Your email address will not be published. Required fields are marked *