ಅಪರಾಧ ನಿಯಂತ್ರಿಸಿ,ಶಾಂತಿ-ಸುವ್ಯವಸ್ಥೆಗೆ ಶ್ರಮಿಸಲು ಪೊಲೀಸರ ಭರವಸೆ


ವಿದೇಶಿ ವಿದ್ರೋಹಕ ಶಕ್ತಿಗಳು ನಮ್ಮ ಯುವಕರು,ಯುವತಿಯರನ್ನು ದಿಕ್ಕುತಪ್ಪಿಸುವ ಹುನ್ನಾರದಲ್ಲಿ ತೊಡಗಿದ್ದು,ಮಾದಕ ವಸ್ತುಗಳು,ಸಾಮಾಜಿಕ ಜಾಲತಾಣಗಳ ಮೂಲಕ ನಡೆಯುವ ಈ ಪರೋಕ್ಷ ದಾಳಿಯನ್ನು ತಡೆಯಲುಪಾಲಕರು, ಹಿರಿಯರು ಜಾಗೃತರಾಗುವ ಅವಶ್ಯಕತೆಯಿದೆ ಎಂದು ಶಿರಸಿ ಪೊಲೀಸ್ ಉಪ ವರಿಷ್ಠಾಧಿಕಾರಿ ಗೋಪಾಲಕೃಷ್ಣ ನಾಯಕ ಹೇಳಿದ್ದಾರೆ.
ಸಿದ್ಧಾಪುರದ ಲಯನ್ಸ್ ಬಾಲಭವನದಲ್ಲಿ ನಡೆದ ಪೊಲೀಸ್ ಜನಸಂಪರ್ಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು ಶಿರಸಿ ಉಪವಿಭಾಗ ಸೇರಿದಂತೆ ಉತ್ತರಕನ್ನಡ ಜಿಲ್ಲೆಯಲ್ಲಿ ನೆರೆಯ ರಾಜ್ಯಗಳು, ದೇಶಗಳ ಕುಟಿಲ ಯತ್ನಗಳಿಂದ ಡಗ್ಸ್, ಗಾಂಜಾ ಸೇರಿದ ಮಾದಕ ವಸ್ತುಗಳ ಮಾರಾಟಜಾಲ ಕಾರ್ಯನಿರ್ವಹಿಸುತಿದ್ದು ಸಾರ್ವಜನಿಕರು, ಎಳೆಯ ಮಕ್ಕಳ ಪಾಲಕರು ಈ ಬಗ್ಗೆ ಗಮನ ಹರಿಸದಿದ್ದರೆ ಅಪಾಯವಿದೆ ಎಂದು ವಿವರಿಸಿದರು.
ಸಾರ್ವಜನಿಕರು ಮತ್ತು ಪೊಲೀಸರ ನಡುವೆ ಉತ್ತಮ ಸಂಬಂಧವಿರಬೇಕೆಂಬ ಆಶಯದಿಂದ ಇಂಥ ಸಭೆ ನಡೆಸುತಿದ್ದೇವೆ. 2017 ರಿಂದ ಸಿದ್ಧಾಪುರದಲ್ಲಿ ಅಪಘಾತ, ಸಾವು, ಅಪರಾಧ ಪ್ರಕರಣಗಳ ಪತ್ತೆ ಹೆಚ್ಚುತಿದ್ದು ಸಾರ್ವಜನಿಕರ ಸಹಕಾರದಿಂದ ಇಲ್ಲಿ ಕಾನೂನುಬಾಹೀರ ಚಟುವಟಿಕೆಗಳನ್ನು ನಿಯಂತ್ರಿಸುವ ಭರವಸೆ ನೀಡಿದರು.
ಸಭೆಯಲ್ಲಿ ಸೇರಿದ ಸಾರ್ವಜನಿಕರು ತಾಲೂಕಿನ ಅಕ್ರಮಮದ್ಯ ಮಾರಾಟ,ಇಸ್ಪೀಟ್,ಓ.ಸಿ. ವ್ಯವಹಾರಗಳ ಬಗ್ಗೆ ಆಕ್ಷೇಪಿಸಿ ನಿಯಂತ್ರಣಕ್ಕೆ ಕೋರಿದರು. ಅಪರಿಚಿತರ ಬಗ್ಗೆ ನಿಗಾ ಇಡುವುದು, ವಾಹನಗಳ ನಿಲುಗಡೆಗೆ ಸ್ಥಳ ನಿಗದಿಪಡಿಸುವುದು,ಅಪರಾಧಪ್ರಕರಣಗಳ ನಿಯಂತ್ರಿಸುವುದು ಸೇರಿದಂತೆ ತಾಲೂಕಿನ ಶಾಂತಿ-ಸುವ್ಯವಸ್ಥೆ ಕಾಪಾಡಿ, ಜನಜೀವನಕ್ಕೆ ಅನುಕೂಲಮಾಡಲು ಶ್ರಮಿಸುವುದಾಗಿ ತಿಳಿಸಿದರು.

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

ಸಾಲಭಾದೆಗೆ ರೈತನ ಆತ್ಮ# ಹತ್ಯೆ#

ಸಾಲಬಾಧೆ ತಾಳಲಾರದೆ ವ್ಯಕ್ತಿಯೊಬ್ಬ ಆತ್ಮಹತ್ಯೆಗೆ ಶರಣಾದದುರ್ಘಟನೆ ಸಿದ್ದಾಪುರಕೋಲಶಿರಸಿ ಯಲ್ಲಿ ನಡೆದಿದೆ. ಮೃತ ಈಶ್ವರ ಹಾಲಾ ನಾಯ್ಕ ಕೃಷಿ- ಕೂಲಿಮಾಡಿಕೊಂಡಿದ್ದು ಪಿತ್ರಾರ್ಜಿತ ಆಸ್ತಿ ಇದ್ದರೂ ಅವರ...

ಕೆ.ಜಿ. ಬಣದ ಪ್ರತಿಪಾದನೆಗೆ ಕೋರ್ಟ್ ಅಸ್ತು.. ನಾಮಧಾರಿ ಅಭಿವೃದ್ಧಿ ಸಂಘ ನಿರಾಳ

ಸಿದ್ದಾಪುರ, ಇಲ್ಲಿಯ ನಾಮಧಾರಿ ಅಭಿವೃದ್ಧಿ ಸಂಘದ ಸದ ಸ್ಯತ್ವ ದ ವಿಚಾರದಲ್ಲಿ ವಿವಾದವಾಗಿ ನ್ಯಾಯಾಲಯ ಕೆಲವು ಸದಸ್ಯರ ವಿರುದ್ಧ ಹೊರಡಿಸಿದ್ದ ಪ್ರತಿಬಂಧಕಾಜ್ಞೆ ಸಿಂಧು ಎನ್ನುವ...

ವಿಪತ್ತು ನಿರ್ವಹಣೆಯಲ್ಲಿ ಶೌರ್ಯ ತಂಡಗಳ ಪಾತ್ರ ಮಹತ್ವದ್ದು:- ತಹಸೀಲ್ದಾರ್ ಮಂಜುಳ ನಾಯಕ್

ಸಿದ್ದಾಪುರ ಸಿದ್ದಾಪುರ, ಅ. 26: ವಿಪತ್ತು ಸಂಭವಿಸಿದ ಸಂದರ್ಭದಲ್ಲಿ ತುರ್ತಾಗಿ ಸ್ಪಂದಿಸಿ, ಅಮೂಲ್ಯ ಜೀವಗಳನ್ನು ರಕ್ಷಿಸುವಲ್ಲಿ ಶೌರ್ಯ ವಿಪತ್ತು ನಿರ್ವಹಣಾ ತಂಡಗಳ ಪಾತ್ರ ಮಹತ್ವದ್ದಾಗಿದೆ....

ಅಂತರಾಷ್ಟ್ರೀಯ ಈಜು ಕ್ರೀಡಾಕೂಟದಲ್ಲಿ ಕಂಚು ಪಡೆದ ಶ್ಯಾಮಸುಂದರ ಜಿ.

ಸಿದ್ದಾಪುರ: ಬೆಂಗಳೂರಿನಲ್ಲಿ ನಡೆದ Masters Asian Aquatic Swimming Championship – 2026 ಅಂತಾರಾಷ್ಟ್ರೀಯ ಈಜು ಕ್ರೀಡಾಕೂಟದಲ್ಲಿ ಸಿದ್ದಾಪುರದ ನಿವಾಸಿ ಹಾಗೂ ಸಾಗರ ತಾಲ್ಲೂಕಿನಲ್ಲಿ...

ಪ್ರತಿಭೋತ್ಸವ: ಕಲಾವಿದರಿಗೆ ಸನ್ಮಾನ

ಸಿದ್ದಾಪುರ: ಪಟ್ಟಣದ ನಿವೇದಿತಾ ಮಹಿಳಾ ಮಂಡಳಿಯಲ್ಲಿ ನಡೆಯುತ್ತಿರುವ ಶ್ರೀ ಸದ್ಗುರು ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತಾ ವಿದ್ಯಾಲಯ ದ ಸಿದ್ದಾಪುರ ಶಾಖೆಯ ಪ್ರತಿಭೋತ್ಸವ ಕಾರ್ಯಕ್ರಮ ಅಕ್ಟೋಬರ್...

Latest Posts

ಸಾಲಭಾದೆಗೆ ರೈತನ ಆತ್ಮ# ಹತ್ಯೆ#

ಸಾಲಬಾಧೆ ತಾಳಲಾರದೆ ವ್ಯಕ್ತಿಯೊಬ್ಬ ಆತ್ಮಹತ್ಯೆಗೆ ಶರಣಾದದುರ್ಘಟನೆ ಸಿದ್ದಾಪುರಕೋಲಶಿರಸಿ ಯಲ್ಲಿ ನಡೆದಿದೆ. ಮೃತ ಈಶ್ವರ ಹಾಲಾ ನಾಯ್ಕ ಕೃಷಿ- ಕೂಲಿಮಾಡಿಕೊಂಡಿದ್ದು ಪಿತ್ರಾರ್ಜಿತ ಆಸ್ತಿ ಇದ್ದರೂ ಅವರ ಹೆಸರಿನಲ್ಲಿರಲಿಲ್ಲ ತುಂಡುಭೂಮಿಹೊಂದಿದ್ದ ಈಶ್ವರ ನಾಯ್ಕ ಅನಾರೋಗ್ಯಕ್ಕೆ ತುತ್ತಾಗಿ ಕೃಷಿ- ಕೂಲಿಮಾಡುವಷ್ಟುಸಶಕ್ತನಾಗಿರಲಿಲ್ಲ. ಅನಾರೋಗ್ಯದ ನಡುವೆ ನಿರುದ್ಯೋಗ ಜೊತೆಗೆಜೀವನನಿರ್ವಹಣೆಗೆಮಾಡಿಕೊಂಡಿದ್ದ ಸಾಲ ಇವುಗಳಿಂದ ಚಿಂತಿತನಾ ಗಿದ್ದವನು ಶುಕ್ರವಾರ ಮನೆಯಿಂದ ಕೆಲಸಕ್ಕೆಂದು ಹೊರನಡೆದಿದ್ದವನು ಸಾಯಂಕಾಲದ...

Recommended For You

About the Author: Kanneshwar Naik

Leave a Reply

Your email address will not be published. Required fields are marked *