ಚಿಂತನಾ ಸಭೆಗೆ ಗೈರಾದ ಶಾಸಕರು,ಸಮೂದಾಯದ ಸಂಘಗಳು…ಎಲ್ಲಿದ್ದವು ಜಾತಿ ಸಂಘಗಳು ಎಂದು ಪ್ರಶ್ನಿಸಿದ ಸ್ವಾಮೀಜಿ!

ಸಿದ್ಧಾಪುರ ಬಾಲಭವನದಲ್ಲಿ ಇಂದು ರಾಷ್ಟ್ರೀಯ ಈಡಿಗ ಮಹಾಮಂಡಳಿ ಆಯೋಜನೆಯಲ್ಲಿ ನಡೆದ ಚಿಂತನಾ ಸಭೆಯಲ್ಲಿ ಜಿಲ್ಲೆಯ ಏಕೈಕ ದೀವರ ಶಾಸಕ ಭೀಮಣ್ಣ ನಾಯ್ಕ ಅನುಪಸ್ಥಿತಿ ಜೊತೆಗೆ ಜಿಲ್ಲೆಯಾದ್ಯಂತ ಇರುವ ಈಡಿಗ, ಬಿಲ್ಲವ ನಾಮಧಾರಿ ಸಂಘಗಳ ಗೈರು ಹಾಜರಿ ಎದ್ದು ಕಾಣುವಂತಾಗಿದ್ದು ವಿಶೇಶವಾಗಿತ್ತು.

ರಾಷ್ಟ್ರೀಯ ಈಡಿಗ ಮಹಾಮಂಡಳಿಯ ರಾಜ್ಯ ಪದಾಧಿಕಾರಿಗಳು, ಜಿಲ್ಲೆಯ ಕೆಲವು ತಾಲೂಕುಗಳ ಅಧ್ಯಕ್ಷರುಗಳು ಸೇರಿದಂತೆ ರಾಷ್ಟ್ರೀಯ ಈಡಿಗ ಮಹಾಮಂಡಳಿ ಪದಾಧಿಕಾರಿಗಳ ಜೊತೆಗೆ ಸ್ಥಳೀಯ ಮುಖಂಡರು, ಜನಪ್ರತಿನಿಧಿಗಳು ಬಾರದಿರುವುದು ಚರ್ಚೆಯ ವಿಷಯವಾಯಿತು.

ಈ ಬಗ್ಗೆ ಪರೋಕ್ಷವಾಗಿ ಮಾತನಾಡಿದ ಪ್ರಣವಾನಂಧ ಸ್ವಾಮೀಜಿ ಕಳೆದ ವರ್ಷದ ಅಂಕೋಲಾ ಶಿರೂರಿನ ದುರಂತ ಪ್ರಸ್ಥಾಪಿಸಿ ಈ ದುರಂತದಲ್ಲಿ ಏಳು ಜನ ನಾಮಧಾರಿಗಳು ಮೃತರಾದರು ಅವರಿಗೆ ಪರಿಹಾರ ನೀಡದ ಜಿಲ್ಲಾಡಳಿತ ಆರ್.ಸಿ.ಬಿ. ಸಾವಿಗೆ, ಮೀನುಗಾರರ ಸಾವಿಗೆ ಪರಿಹಾರ ನೀಡಿದೆ. ರಾಷ್ಟ್ರೀಯ ದುರಂತವಾದ ಶಿರೂರಿನ ಸಂತೃಸ್ತರಿಗೆ ಪರಿಹಾರ ನೀಡದಿರುವುದು ಉತ್ತರ ಕನ್ನಡ ಜಿಲ್ಲಾಡಳಿತದ ಪಕ್ಷಪಾತಕ್ಕೆ ಸಾಕ್ಷಿ. ಈ ಪ್ರಕರಣದ ಬಗ್ಗೆ ಸ್ಥಳೀಯ ಶಾಸಕರು, ನಮ್ಮ ಸಮೂದಾಯದ ಜನಪ್ರತಿನಿಧಿಗಳು, ತಾಲೂಕಿಗೆ ಒಂದೆರಡರಂತಿರುವ ಜಾತಿ ಸಂಘಗಳು ಧ್ವನಿ ಎತ್ತದಿರುವುದು ಈಡಿಗ, ಬಿಲ್ಲವ, ನಾಮಧಾರಿಗಳ ಉಪೇಕ್ಷೆಗೆ ಉದಾಹರಣೆ ಎಂದು ಹರಿಹಾಯ್ದರು.

ಈ ಕಾರ್ಯಕ್ರಮ ಉದ್ಘಾಟಿಸಿದ ಮಾಜಿ ಶಾಸಕ ಜೆ.ಡಿ. ನಾಯ್ಕ ಜಿಲ್ಲೆಯ ಬಹುಸಂಖ್ಯಾತರಾಗಿ ನಮ್ಮ ಮೇಲೇ ಅನ್ಯಾಯ, ಅನಾದರ ನಡೆಯುತ್ತಿರುವುದು ಯಾರ ಚಿತಾವಣೆಯಿಂದ ಬಹುಸಂಖ್ಯಾತರನ್ನೇ ಕಡೆಗಣಿಸುವ ಪಟ್ಟಭದ್ರರ ವ್ಯವಸ್ಥೆ ಸಮಾಜದ ದುರವಸ್ಥೆಯಲ್ಲವೆ? ಎಂದು ಪ್ರಶ್ನಿಸಿದರು. ಈ ಕಾರ್ಯಕ್ರಮದ ವಿಡಿಯೋ ತುಣುಕುಗಳು samaajamukhi ಯೂ ಟ್ಯೂಬ್‌ ಚಾನೆಲ್‌ ನಲ್ಲಿವೆ.

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

O

siddapur nk – this week…..

ಸಿದ್ದಾಪುರ : ಮನೆಗೆ ನುಗ್ಗಿ ಮಹಿಳೆಯ ಚಿನ್ನದ ಸರ ಎಗರಿಸಿದ ಸರಗಳ್ಳ!!?* *ಸಿದ್ದಾಪುರ*: ಮಹಿಳೆಯೊಬ್ಬರ ಮಂಗಲಸೂತ್ರ ಕದ್ದ ಪ್ರಕರಣವೊಂದು ನಿನ್ನೆ ನಡೆದಿರುವ ಕುರಿತು ಉತ್ತರ...

ಕಡವೆ ಪ್ರಕರಣ: ಅಧಿಕಾರಿಗಳ ಮೇಲೆ ದೌರ್ಜನ್ಯ ಪ್ರಕರಣ ದಾಖಲಿಸಿದ ಸಂತ್ರಸ್ತ!

ಹುಸೂರಿನ ಕಡವೆ ಪ್ರಕರಣ ಮರೆಮಾಚುವ ಮುನ್ನ ಸಿದ್ಧಾಪುರದ ತ್ಯಾಗಲಿ (ನಾಣಿಕಟ್ಟಾದಲ್ಲಿ)  ಯಲ್ಲಿ ಕಡವೆ ಭೇಟೆ ಮಾಡಿದ ಪ್ರಕರಣ ನಡೆದಿದ್ದು ಈ ಪ್ರಕರಣದಲ್ಲಿ ಆತುರದಿಂದ ವ್ಯಕ್ತಿಯೊಬ್ಬರನ್ನು...

ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ……

ಡಿಕೆಶಿ ಪದಗ್ರಹಣಕ್ಕೆ ಸಿದ್ಧತೆ; ವಿಧಾನಸೌಧದ ಸುತ್ತಮುತ್ತ ಇರುವ ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ ಕರ್ನಾಟಕ ರಾಜ್ಯಪಾಲರ ಹೆಸರಿನಲ್ಲಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ...

ಭಟ್ಕಳ: ತಟ್ಟೆಹಕ್ಕಲು ನದಿಯಲ್ಲಿ ಮುಳುಗಿ ಒಂದೇ ಕುಟುಂಬದ 8 ಮಂದಿ ನೀರುಪಾಲು, ತಲಾ 5 ಲಕ್ಷ ಪರಿಹಾರ ಘೋಷಿಸಿದ ಸರ್ಕಾರ!

ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ತಟ್ಟೆಹಕ್ಕಲು ನದಿಯಲ್ಲಿ ಕಪ್ಪೆ ಚಿಪ್ಪು ತೆಗೆಯಲು ಹೋದ ಎಂಟು ಮಂದಿ ಜಲಸಮಾಧಿಯಾಗಿರುವ ದಾರುಣ ಘಟನೆ ನಡೆದಿದ್ದು ಇಬ್ಬರು ನಾಪತ್ತೆಯಾಗಿದ್ದಾರೆ....

Latest Posts

O

Recommended For You

About the Author: Kanneshwar Naik

Leave a Reply

Your email address will not be published. Required fields are marked *