ನಿರಾಕರಣೆ….ಬ್ರೇಕ್‌ ಅಪ್‌ ಇತ್ಯಾದಿ….

ಸಕಾರಣವೋ? ವಿನಾಕಾರಣವೋ ನಿರಾಕರಣೆಗೆ ಒಳಗಾಗುವುದು ಬಹು ಕಷ್ಟದ ಕೆಲಸ. ಧೂಳಿನ ಅಲರ್ಜಿ ಇರುವವರ ಮೂಗು ಧೂಳನ್ನು ಹೇಗೆ ನಿರಾಕರಿಸತ್ತದೆಂದರೆ…. ನಿರಾಕರಣೆ ಬಾಯಿ, ಮೂಗಿನಿಂದ ಬಂದರೂ ದೇಹ ನಾಭಿಯಾಳದಿಂದಲೇ ಸಡನ್‌ ಆಗಿ ಪ್ರತಿಕ್ರೀಯಿಸಿಬಿಡುತ್ತೆ!

ನಿರಾಕರಣೆಯೆಂದರೆ ಪ್ರೀತಿ- ಪ್ರೇಮಕ್ಕೆ ಮಾತ್ರ ಸೀಮಿತವಾದದ್ದಲ್ಲ… ಮಗ ಅಪ್ಪನನ್ನು ನಿರಾಕರಿಸುವುದು, ಹೆಂಡತಿ ಗಂಡನನ್ನು ನಿರಾಕರಿಸುವುದು, ಗಂಡ ಪತ್ನಿಯನ್ನು ನಿರಾಕರಿಸುವುದು, ಅಪ್ಪ ಮಗನನ್ನು ನಿರಾಕರಿಸುವುದು, ಅಣ್ಣ ತಂಗಿಯನ್ನು ನಿರಾಕರಿಸುವುದು, ಅಕ್ಕ ತಮ್ಮನನ್ನು ನಿರಾಕರಿಸುವುದು, ಸಹಾಯಕ ಬಾಸ್‌ ನನ್ನು ನಿರಾಕರಿಸುವುದು, ಬಾಸ್‌ ಸೇವಕನನ್ನು ನಿರಾಕರಿಸುವುದು, ಶಿಕ್ಷಕ ವಿದ್ಯಾರ್ಥಿಯನ್ನು ನಿರಾಕರಿಸುವುದು,ವಿದ್ಯಾರ್ಥಿ ಉಪನ್ಯಾಸಕನನ್ನು ನಿರಾಕರಿಸುವುದು, ಮತದಾರರು ನಾಯಕನನ್ನು ನಿರಾಕರಿಸುವುದು, ಮುಖಂಡ ಮತದಾರರನ್ನು ನಿರಾಕರಿಸುವುದು ಹೀಗೆ ನಿರಾಕರಣೆ ನುಗ್ಗದ ಕ್ಷೇತ್ರಗಳೇ ಇಲ್ಲ.

ಒಬ್ಬ ಅಪ್ಪ ತನ್ನ ಎರಡ್ಮೂರು ಮಕ್ಕಳ ಸಂಸಾರವನ್ನು ಬಿಟ್ಟು ತೀರ್ಥಕ್ಷೇತ್ರಗಳನ್ನು ಅರಸಿ ಹೊರಟು ಬಿಡುತಿದ್ದ. ಹೀಗೆ ತನ್ನ ಕುಟುಂಬಕ್ಕೆ ಬೆನ್ನುತಿರುಗಿಸಿ ಹೊರಟವನು ವಾರ, ಪಾಕ್ಷಿಕ, ತಿಂಗಳು ಎರಡು ತಿಂಗಳು ಕೆಲವು ತಿಂಗಳುಗಳ ವರೆಗೆ ಮರಳಿ ಬರುತ್ತಲೇ ಇರಲಿಲ್ಲ! ಹೀಗೆ ಹೊರಟು ಹೋದವನು ಅದ್ಯಾವಾಗಾದರೂ ಬಂದು ಹೆಂಡತಿ ಮಕ್ಕಳ ಮುಖ ನೋಡಿದಾಗ ವಾಸ್ತವದಲ್ಲಿ ಆ ಮುಖ ಕಂಡೊಡನೆ ಮಂದಹಾಸ ಸೂಸಬೇಕಾದ ಆ ಕುಟುಂಬದ ನಿರಾಕರಣ ಭಾವ ಹೇಗಿರುತ್ತಿತ್ತೆಂದರೆ…. ಈತ ಬರದಿದ್ದರೆ ನಾವು ಚೆನ್ನಾಗಿರುತಿದ್ದೆವು ಎಂಬುವಷ್ಟು!

ಇಂಥ ನಿರಾಕರಣದ ಮುಂದೆ ಅದ್ಯಾವುದೋ ತಿರುವಿನಲ್ಲಿ ಸಿಕ್ಕವಳು ವಾರ ತಿಂಗಳು, ವರ್ಷಗಳ ನಂತರ ಬಿಟ್ಟೊರಡುವಾಗಿನ ನಿರಾಕರಣೆ ಇರುತ್ತದಲ್ಲ ಅದ್ಯಾವಲೆಕ್ಕ? ಹಾಗೆ ಯಾವುದೋ ಕಾರಣಕ್ಕೆ, ಏನೋ ಅನಿವಾರ್ಯತೆಗೆ ಸಿಕ್ಕವನ್ನು ತನ್ನ ಹುಡುಗಿಯನ್ನು ಬಿಟ್ಟುಹೋಗುವುದು ಕೊಡುವ ನೋವು ಅದ್ಯಾವ ಚುಕ್ಕೆಗೆ ಸಮ. ಅದಕ್ಕೆ ಬ್ರೇಕ್‌ ಅಪ್‌ ಎಂದು ಕರೆದುಕೊಳ್ಳುತ್ತಾಳೆ. ನಿಜಕ್ಕೂ ಬ್ರೇಕ್‌ ಅಪ್‌ ಎಂದರೆ ಬೇಜವಾಬ್ದಾರಿ ತಂದೆ ತಾಯಿಯನ್ನು ನಿರಾಕರಿಸಿ ಆತ್ಮಹತ್ಯೆಯನ್ನು ಆಯ್ದುಕೊಂಡು ಬಿಡುತ್ತಾನಲ್ಲ ಅಮಾಯಕ ಹುಡುಗ ಅದು ಬ್ರೇಕ್‌ ಅಪ್.‌

ಇವೆಲ್ಲಾ ಯಾಕೆ ನೆನಪಾದವೆಂದರೆ ಬಹಳ ಮನೆಗಳಲ್ಲಿ ಕಾಣುವ ನಿರ್ಜೀವ ದೇವರ ಪುಟಗಳ ಮಧ್ಯೆ, ವಯಸ್ಸಾಗಿ ಕೊನೆಯುಸಿರೆಳೆದ ನಾಲ್ಕೈದು ಅಜ್ಜಿ-ಅಜ್ಜಂದಿರ ಪಟಗಳ ನಡುವೆ ಇನ್ನೂ ಸರಿಯಾಗಿ ಮೀಸೆ ಬಾರದ, ದಾಡಿ ಹಣ್ಣಾಗದ,ಯುವಕತನದ ಮುಗ್ದತೆ ಮಾಸದ ಪೋಟೋಗಳು ನೇತಾಡುತ್ತಾ ಕೆಲವೆಡೆ ಅಲುಗಾಡದೆ ಚಿರಸ್ಥಾಯಿಯಾಗಿತ್ತವಲ್ಲ… ಆ ಪೊಟೋಗಳ ಜೀವಂತ ಮುಖಗಳು ಅದ್ಯಾವ ನಿರಾಕರಣೆಯಿಂದ ದೂರಸಾಗಿರುತ್ತಾರೆ?!

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

ಭಿತ್ತಿಯ ಚಿತ್ರ ಬಿ. ಡಿ. ಹಿರೇಮಠ

ಬಿ. ಡಿ. ಹಿರೇಮಠ… ಯಾರಿಗೆ ಗೊತ್ತಿಲ್ಲ ಹೇಳಿ….೨೦ ವರ್ಷಗಳ ಹಿಂದೆ ಹೈ ಕೋರ್ಟ್ ಧಾರವಾಡ ವಿಭಾಗೀಯ ಪೀಠಕ್ಕಾಗಿ ಹೋರಾಡಿ ಮನೆ ಮಾತಾಗಿದ್ದ ಬಿಡಿ ಹಿರೇಮಠ...

ಶಾಲೆಗೆ ಹೋಗದ ರಾಜ!

ಅಕ್ಷರ ಕಲಿಯದೇ ಆಕಾಶದೆತ್ತರಕ್ಕೆ ಬೆಳೆದ ಅಪರೂಪದ ನಟ ಅನರ್ಘ್ಯ ರತ್ನ. ಮತ್ತೇ ಶಾಲೆಗೆ ಮುಖ ತೋರಿಸಲೇ ಇಲ್ಲ.

ಗ್ರಾಮೀಣ ಸೇವಾ ಸಹಕಾರಿ ಸಂಘಗಳು ಮುಳುಗುತ್ತಿವೆ..! ಜಾಗೃತೆ..

ರೈತರ ಅನುಕೂಲಕ್ಕಿರುವ ಗ್ರಾಮೀಣ ಸೇವಾ ಸಹಕಾರಿ ಸಂಘಗಳು ಮುಳುಗುತ್ತಿವೆ ಎನ್ನುವುದಕ್ಕೆ ಅನೇಕ ದೃಷ್ಟಾಂತಗಳಿವೆ. ಆದರೆ ಸಹಕಾರಿ ಕ್ಷೇತ್ರ ನಿಯಂತ್ರಿಸುವವರು ತಮ್ಮ ಅನುಕೂಲಕ್ಕೆ ಸಂಘಗಳನ್ನು ಬಳಸಿಕೊಂಡು...

bhaarat jodo… ಯುವ ಸಂಘ ನೋಂದಣಿಗೆ ಶಾಸಕರ ಮನವಿ

ಸಿದ್ದಾಪುರ: ರಾಜ್ಯದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ರ ಮಹತ್ವಾಕಾಂಕ್ಷೆ ಭಾರತ್ ಜೋಡೋ ಯುವ ಸಂಘಗಳನ್ನು ತಕ್ಷಣ ನೊಂದಣಿ ಮಾಡಿಸಿಕೊಂಡು ಸರ್ಕಾರದ ಅನುದಾನ ಸದುಪಯೋಗ ಪಡಿಸಿಕೊಳ್ಳುವಂತೆ ಶಿರಸಿ-ಸಿದ್ದಾಪುರ...

ಶ್ರೇಷ್ಠ ಶಿಕ್ಷಕ ವಿರೂಪಾಕ್ಶಪ್ಪ ಮೇಟಿ

ಕೆ.ಪಿ.ಸಿ.ಸಿ ಯಿಂದ ನೀಡಲಾಗುವ ಮಾಜಿ ಪ್ರಧಾನಿ ಶ್ರೀ ರಾಜೀವ ಗಾಂಧಿ ರಾಜ್ಯ ಮಟ್ಟದ ಶ್ರೇಷ್ಠ ಶಿಕ್ಷಕ ಪ್ರಶಸ್ತಿಗೆ ಆಯ್ಕೆಯಾದ ಉಪನ್ಯಾಸಕ ವಿರುಪಾಕ್ಷಪ್ಪ ಮೇಟಿ ಸಿದ್ದಾಪುರ,ಸೆ,೩:-...

Latest Posts

ಭಿತ್ತಿಯ ಚಿತ್ರ ಬಿ. ಡಿ. ಹಿರೇಮಠ

ಬಿ. ಡಿ. ಹಿರೇಮಠ… ಯಾರಿಗೆ ಗೊತ್ತಿಲ್ಲ ಹೇಳಿ….೨೦ ವರ್ಷಗಳ ಹಿಂದೆ ಹೈ ಕೋರ್ಟ್ ಧಾರವಾಡ ವಿಭಾಗೀಯ ಪೀಠಕ್ಕಾಗಿ ಹೋರಾಡಿ ಮನೆ ಮಾತಾಗಿದ್ದ ಬಿಡಿ ಹಿರೇಮಠ ಅಂದರೆ ಎಲ್ಲರ ಭಿತ್ತಿಯ ಚಿತ್ರ… ಅವಳಿ ನಗರ ಹುಬ್ಬಳ್ಳಿ – ಧಾರವಾಡದಲ್ಲಿ ಉತ್ತರ ಕರ್ನಾಟಕ ಅಂದರೆ…. ಅದು ಪಾಪು, ಚಂಪಾ… ಪಾವಟೆ, ನಂತರದ ದೊಡ್ಡ ಹೆಸರು. ಅಧಿಕಾರ ಇಲ್ಲದೆ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *