

ಸೊರಬಾ ಚಿಕ್ಕ ತೌಡತ್ತಿ ಆತ್ಮಹತ್ಯೆ ಪ್ರಕರಣ ಮುಂದಿಟ್ಟುಕೊಂಡು ಸಿದ್ಧಾಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಸಂತ ನಾಯ್ಕ ಬಂಧಿಸುವ ವಿರೋಧಿಗಳ ತಂತ್ರಕ್ಕೆ ಫೇಲಾಗಿದೆ.

ಪೊಲೀಸರ ತಪ್ಪೋ? ಕಾಣದ ಕೈಗಳ ಕೆಲಸವೋ? ಗೊತ್ತಿಲ್ಲ ಚಿಕ್ಕ ತೌಡತ್ತಿಯ ಯುವಕ ಸಂತೋಷ ನಾಯ್ಕ ಆತ್ಮಹತ್ಯೆ ಪ್ರಕರಣದಲ್ಲಿ ಸಾಮೀಲಾಗಿದ್ದಾರೆ ಎಂದು ಶಂಕಿಸಿ ಸಿದ್ಧಾಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಸಂತ ನಾಯ್ಕ ಮತ್ತು ವಕೀಲ ಎಂ.ಎನ್. ನಾಯ್ಕರನ್ನು ಬಂಧಿಸುವ ಕಾರ್ಯತಂತ್ರವನ್ನು ಬಿ.ಜೆ.ಪಿ. ಹೆಣೆದಿತ್ತು ಎನ್ನಲಾಗುತ್ತಿದೆ. ಇದೇ ಕಾರಣಕ್ಕೆ ಬಿ.ಜೆ.ಪಿ. ಜಿಲ್ಲಾಧ್ಯಕ್ಷ ಎನ್. ಎಸ್. ಹೆಗಡೆ ಇಲ್ಲಿಗೆ ಬಂದು ಬುಧವಾರ ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ವಸಂತ ನಾಯ್ಕರನ್ನು ಬಂಧಿಸಲು ಆಗ್ರಹಿಸಿದ್ದರು.
ದಿನಾಂಕ ೧೦ ಜೂನ್ ೨೫ ರಂದು ಆತ್ಮಹತ್ಯೆ ಪ್ರಕರಣದ ಗಣಪತಿ ನಾಯ್ಕರ ದೂರಿನ ನಂತರ ಬುಧವಾರ ಬಿ.ಜೆ.ಪಿ. ಒತ್ತಾಯದ ನಂತರ ಇದೇ ಗಣಪತಿ ಮತ್ತೆ ಪೊಲೀಸರಿಗೆ ಹೆಚ್ಚುವರಿ ಹೇಳಿಕೆ ನೀಡಿ ವಸಂತ ನಾಯ್ಕರನ್ನು ಬಂಧಿಸುವಂತೆ ಒತ್ತಾಯಿಸಿದ್ದರು ಎನ್ನಲಾಗುತ್ತಿದೆ.



ಈ ದೂರು, ಕೆಲವು ದಾಖಲೆ ಆಧರಿಸಿ ಪೊಲೀಸರು ಇಂದು ವಸಂತ ನಾಯ್ಕ ಮತ್ತು ವಕೀಲ ಎಂ.ಎನ್. ನಾಯ್ಕರನ್ನು ಠಾಣೆಗೆ ವಿಚಾರಣೆಗೆ ಕರೆದು ಬಂಧಿಸುವ ತಯಾರಿ ನಡೆಸಿದ್ದರು ಎನ್ನಲಾಗುತ್ತಿದೆ. ಆದರೆ ಬಿ.ಜೆ.ಪಿ. ಹೆಣೆದ ಈ ಕಾರ್ಯತಂತ್ರ ಕೈ ಕೊಟ್ಟಂತೆ ಕಾಣುತ್ತಿದೆ.
ಕಾಂಗ್ರೆಸ್ ತಾಲೂಕಾ ಅಧ್ಯಕ್ಷ ವಸಂತ ನಾಯ್ಕ ವಿಚಾರಣೆಗೆ ಹಾಜರಾಗಿ ತಮ್ಮ ಹೇಳಿಕೆ ನೀಡಿ ಪೊಲೀಸರು, ಬಿ.ಜೆ.ಪಿ. ಪ್ರೇರಿತ ಷಡ್ಯಂತ್ರದ ಮೂಲಕ ನನ್ನನ್ನು ಬಂಧಿಸುವ ಪ್ರಯತ್ನ ಮಾಡಲಾಗಿತ್ತು ಆದರೆ ಈ ಪ್ರಕರಣದ ಬಗ್ಗೆ ಕೂಲಂಕುಶ ತನಿಖೆಯಾಗಲಿ ಇದರಲ್ಲಿ ನನ್ನ ಪಾತ್ರವಿದ್ದರೆ ನನ್ನನ್ನು ಬಂಧಿಸಲಿ ಎಂದು ಸವಾಲೆಸೆದರು.
ಇದೇ ಪ್ರಕರಣದ ಇನ್ನೊಬ್ಬ ಶಂಕಿತ ಆರೋಪಿ ವಕೀಲ ಎಂ.ಎನ್. ನಾಯ್ಕ ಕೂಡಾ ಈ ಪ್ರಕರಣ, ಆತ್ಮಹತ್ಯೆಗೂ ನನಗೂ ಯಾವುದೇ ಸಂಬಂಧವಿಲ್ಲ ಪೊಲೀಸರ ಅಚಾತುರ್ಯದಿಂದ ನಮಗೆ ತೊಂದರೆ ಆಯಿತು ಎಂದು ದೂರಿದರು.
_______________________________________________________________
ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi
_______________________________________________________________







3 Comments