ವಿಧಾನಸಭಾಧ್ಯಕ್ಷರ ಮಗಳ ಮದುವೆ ಆರತಕ್ಷತೆಯಲ್ಲಿ ಆಪ್ತರೇ ನಾಪತ್ತೆ! ಕಾಗೇರಿ ಪಲಾಯನಕ್ಕೆ ಪೂರ್ವಭಾವಿ ಸಿದ್ಧತೆಯ ನಿರೀಕ್ಷೆ?

ಉತ್ತರ ಕನ್ನಡ ಜಿಲ್ಲೆಯ ಮಟ್ಟಿಗೆ ಈ ವಾರ ಎರಡು ವಿಶೇಶ ಸಂದರ್ಭಗಳು ಸಾರ್ವಜನಿಕ ಆಸಕ್ತಿಯ ಕೇಂದ್ರಗಳಾಗಿದ್ದವು.
ಮೊದಲನೆಯದು ಯಲ್ಲಾಪುರ ಕ್ಷೇತ್ರದ ಉಪಚುನಾವಣೆ,
ಎರಡನೆಯದು ರಾಜ್ಯ ವಿಧಾನಸಭೆಯ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿಯವರ ಮಗಳ ಮದುವೆ ಮತ್ತು ಆರತಕ್ಷತೆ.
ಯಲ್ಲಾಪುರ ಉಪಚುನಾವಣೆಯನ್ನು ಪ್ರತಿಷ್ಠೆಯಪ್ರಶ್ನೆ ಯನ್ನಾಗಿಸಿಕೊಂಡ ರಾಜ್ಯ ಬಿ.ಜೆ.ಪಿ. ಮತ್ತು ಯಡಿಯೂರಪ್ಪ ನೇತೃತ್ವದ ಸರ್ಕಾರ ನಿರೀಕ್ಷೆಯಂತೆ ಬಹುಮತದಿಂದ ಯಲ್ಲಾಪುರ ಕ್ಷೇತ್ರವನ್ನು ವಶಪಡಿಸಿಕೊಂಡಿವೆ.
ಈ ಚುನಾವಣೆಯಲ್ಲಿ ಶಿವರಾಮ ಹೆಬ್ಬಾರ್ ಸ್ಫರ್ಧಿಸುವುದು, ಗೆಲ್ಲುವುದು ಪೂರ್ವನಿಯೋಜಿತವಾಗಿತ್ತು. ಇವರ ಎದುರಾಳಿ ಭೀಮಣ್ಣ ನಾಯ್ಕ ಕಾಂಗ್ರೆಸ್ ನ ಅನಿವಾರ್ಯ ಆಯ್ಕೆಯಾಗಿದ್ದರೂ ಕಾಂಗ್ರೆಸ್ ಮುಖಂಡ ಮಾಜಿ ಸಚಿವ ಆರ್.ವಿ.ದೇಶಪಾಂಡೆ ತಮ್ಮ ಮಗ ಅಥವಾ ತಮ್ಮ ತಲೆದಂಡದ ಬದಲು ಭೀಮಣ್ಣ ನಾಯ್ಕರನ್ನು ಬಳಸಿಕೊಂಡರು ಎನ್ನುವ ಆರೋಪಗಳಿವೆ.
ಅದೇನೇ ಇರಲಿ ಭೀಮಣ್ಣ ನಾಯ್ಕ ಶಿರಸಿ ಕ್ಷೇತ್ರದಲ್ಲಿ ಮತ್ತು ಯಲ್ಲಾಪುರ ಕ್ಷೇತ್ರದಲ್ಲಿ ಕೂಡಾ ಕಾಂಗ್ರೆಸ್ ವಿರೋಧದ ಅಲೆ ನಡುವೆ ಅರ್ಧ ಲಕ್ಷ ಮತಗಳನ್ನು ಬಾಚಿರುವುದು ಅವರ ವೈಯಕ್ತಿಕ ಸಾಮಥ್ರ್ಯ ಮತ್ತು ಕಾಂಗ್ರೆಸ್ ಸಾಂಪ್ರದಾಯಿಕ ಮತಗಳ ದೆಸೆಯಿಂದಾಗಿ ಎನ್ನುವುದೂ ಸಾಬೀತಾಗಿದೆ.
ಕಾಂಗ್ರೆಸ್ ಬಹುಸಂಖ್ಯಾತ ದಲಿತ, ಹಿಂದುಳಿದ ವರ್ಗಗಳ ಪರವಾಗಿದೆಯಾದರೂ ಅದು ಭಾರತೀಯ ಕಾಯಸ್ಥ ಜಾತಿ, ಉಚ್ಛವರ್ಗದ ಪರಿವಾರದ ಮನಸ್ಥಿತಿಯಿಂದ ಹೊರಗೆ ಬಂದಿಲ್ಲ. ಹಾಗಾಗಿ ಕಾಂಗ್ರೆಸ್ ನಲ್ಲಿ ಭೀಮಣ್ಣ, ಬಂಗಾರಪ್ಪ, ಸಿದ್ಧರಾಮಯ್ಯ ತರಹದವರು ಒಳಏಟುಗಳ ಜೊತೆಗೆ ಹೊರಏಟುಗಳಿಗೂ ಎದೆಯೊಡ್ಡುವ ಅನಿವಾರ್ಯತೆ ಇದೆ.
ಇಂಥ ಎದೆಗಾರರು ಇರದಿದ್ದರೆ ಬಿ.ಜೆ.ಪಿ. ಮನಸ್ಥಿತಿಯಾದ ಮನುವಾದ ಮತ್ತು ಕಾಂಗ್ರೆಸ್ ನ ಮೃಧು ಹಿಂದುತ್ವವಾದದ ಅವಕಾಶವಾದಿ ಮನುವಾದಿಗಳು ವ್ಯವಸ್ಥೆಯನ್ನು ಹದಗೆಡಿಸಿಬಿಡುತ್ತಾರೆ. ಹಾಗಾಗಿ ಸೋಲು, ನೋವು, ವೈಯಕ್ತಿಕ ಹಾನಿಗಳ ನಡುವೆ ಇಂಥವರು ನಾಯಕತ್ವದ ನೊಗ ಹೊರಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ರಾಜ್ಯ ಜಿಲ್ಲೆಯಲ್ಲಿ ಜಾದಳ, ಕಾಂಗ್ರೆಸ್ ಗಳ ಸೋಲು ಬರಲಿರುವ ಗೆಲುವುಗಳಿಗೆ ಅಡಿಪಾಯ.
ಕಾಗೇರಿ ಮಗಳ ಆರತಕ್ಷತೆ-
ಇದೇವಾರ ಶಿರಸಿ ಕಾಗೇರಿಯಲ್ಲಿ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿಯವರ ಮಗಳ ಮದುವೆ ಮತ್ತು ಗೋಳಿ ದೇವಸ್ಥಾನದಲ್ಲಿ ಆರತಕ್ಷತೆಗಳು ನಡೆದಿವೆ.
ಕ್ಷೇತ್ರ-ರಾಜ್ಯದ ಪ್ರಮುಖರು, ಜನಸಾಮಾನ್ಯರಾದಿಯಾಗಿ ಎಲ್ಲರನ್ನೂ ಆಹ್ವಾನಿಸಿದ್ದ ಕಾಗೇರಿ ಪರಿವಾರ ತಮ್ಮ ಅಂತಸ್ಥಿಗೆ ತಕ್ಕಂತೆ ತಮ್ಮ ಸರಳತೆ, ಸಜ್ಜನಿಕೆಗಳ ಆರೋಪಗಳನ್ನು ಸುಳ್ಳು ಮಾಡುವಂತೆ ಕೌಟುಂಬಿಕ ಕಾರ್ಯಕ್ರಮ ಮಾಡಿದ್ದಾರೆ.
ಆದರೆ ಈ ಬಾರಿ ಕಾಗೇರಿಯವರ ಪರಮಾಪ್ತರೆನಿಸಿಕೊಂಡ ಕೆಲವು ಬಿ.ಜೆ.ಪಿ. ಪ್ರಮುಖರು, ಅವರ ಪಕ್ಷ, ಸ್ನೇಹಿತವಲಯದ ಕೆಲವು ಪ್ರಮುಖರು ಕಾಗೇರಿಯವರ ಈ ಅದ್ಧೂರಿ ಸಮಾರಂಭಗಳಲ್ಲಿ ಸ್ವಾಗತಕಾರರಾಗಬೇಕಿದ್ದವರು ಗೈರು ಹಾಜರಾಗಿರುವುದು ಚರ್ಚೆಯ ವಿಷಯವಾಗಿದೆ.
ವಿಧಾನಸಭಾ ಅಧ್ಯಕ್ಷರು ತಮ್ಮ ಖಾಸಗಿ ಕಾರ್ಯಕ್ರಮದಲ್ಲಿ ತಮಗೆ ಬೇಕಾದವರನ್ನು ಕರೆಯಿಸಿಕೊಳ್ಳಲು ಸಂಪೂರ್ಣ ಸ್ವತಂತ್ರರು. ಆದರೆ ಅವರ ಗೆಲುವಿಗಾಗಿ ನಡೆಸಿದ ಮೆರವಣಿಗೆಯ ಅಂಬಾರಿ ಹೊತ್ತ ಭಕ್ತರೇ ಅವರ ಖಾಸಗಿ ಕಾರ್ಯಕ್ರಮದಲ್ಲಿ ಕಾಣಿಸಿಕೊಳ್ಳದಿರುವುದು ಸಾರ್ವಜನಿಕ ಚರ್ಚೆಯನ್ನಂತೂ ಹುಟ್ಟುಹಾಕಿದೆ.
ಶಿರಸಿ ಕ್ಷೇತ್ರದಲ್ಲಿ ಕಳಪೆಕಾಮಗಾರಿ,ಅಕ್ರಮ ಮದ್ಯ ಮಾರಾಟ, ಇಸ್ಫೀಟ್ ಜುಗಾರಿ ಸೇರಿದಂತೆ ಸಕ್ರಮವಲ್ಲದ ಅನೇಕ ಕೆಲಸಗಳನ್ನು ತಮ್ಮವರು, ತಮ್ಮವರ ಆಪ್ತರ ಮೂಲಕ ಮಾಡಿಸುತ್ತಿರುವ ಕಾಗೇರಿ ಪರಿವಾರ ಅನೇಕ ವರ್ಷಗಳ ರಾಜಕೀಯ ಪ್ರಯತ್ನದ ಸಹಚರರನ್ನು ಸಾರ್ವಜನಿಕ,ಖಾಸಗಿ ಕಾರ್ಯಕ್ರಮಗಳಲ್ಲಿ ತೆರೆಮೆರೆಗೆ ಸರಿಸಿ ಸಂಘದ ಕಾರ್ಯಾಚರಣೆ ಪ್ರಾರಂಭಿಸಿರುವ ಘನ ಉದ್ಧೇಶಗಳಿಗಾಗಿ ಕಾಗೇರಿ ಮೊಟ್ಟಮೊದಲ ಬಾರಿ ತಮ್ಮ ಆಪ್ತರನ್ನು ದೂರಸರಿಸಿ, ಶಿರಸಿ ಕ್ಷೇತ್ರದಿಂದ ಪಲಾಯನ ಗೈಯುವ ಯೋಜನೆ ಪ್ರಾರಂಭಿಸಿದ್ದಾರಾ ಎನ್ನುವ ಅನುಮಾನಗಳ ಹಿನ್ನೆಲೆಯಲ್ಲಿ ಸಂಘದ ಲಾಭಕೋರರು,ಕಾಗೇರಿ ಆಪ್ತರು ಅನ್ಯರನ್ನು ಹೊರಗಿಟ್ಟು ವ್ಯವಹರಿಸುತ್ತಿರುವ ಬಗ್ಗೆ ಅವರ ಪಕ್ಷದ ವಲಯದಲ್ಲೇ ಅಸಮಾಧಾನವಂತೂ ಮುಚ್ಚಿದ ಕೆಂಡದಂತೆ ಬೇಯತೊಡಗಿರುವ ವಿದ್ಯಮಾನವಂತೂ ನಿಗೂಢವಾಗಿದೆ.

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

ಗ್ರಾಮೀಣ ಸೇವಾ ಸಹಕಾರಿ ಸಂಘಗಳು ಮುಳುಗುತ್ತಿವೆ..! ಜಾಗೃತೆ..

ರೈತರ ಅನುಕೂಲಕ್ಕಿರುವ ಗ್ರಾಮೀಣ ಸೇವಾ ಸಹಕಾರಿ ಸಂಘಗಳು ಮುಳುಗುತ್ತಿವೆ ಎನ್ನುವುದಕ್ಕೆ ಅನೇಕ ದೃಷ್ಟಾಂತಗಳಿವೆ. ಆದರೆ ಸಹಕಾರಿ ಕ್ಷೇತ್ರ ನಿಯಂತ್ರಿಸುವವರು ತಮ್ಮ ಅನುಕೂಲಕ್ಕೆ ಸಂಘಗಳನ್ನು ಬಳಸಿಕೊಂಡು...

bhaarat jodo… ಯುವ ಸಂಘ ನೋಂದಣಿಗೆ ಶಾಸಕರ ಮನವಿ

ಸಿದ್ದಾಪುರ: ರಾಜ್ಯದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ರ ಮಹತ್ವಾಕಾಂಕ್ಷೆ ಭಾರತ್ ಜೋಡೋ ಯುವ ಸಂಘಗಳನ್ನು ತಕ್ಷಣ ನೊಂದಣಿ ಮಾಡಿಸಿಕೊಂಡು ಸರ್ಕಾರದ ಅನುದಾನ ಸದುಪಯೋಗ ಪಡಿಸಿಕೊಳ್ಳುವಂತೆ ಶಿರಸಿ-ಸಿದ್ದಾಪುರ...

ಶ್ರೇಷ್ಠ ಶಿಕ್ಷಕ ವಿರೂಪಾಕ್ಶಪ್ಪ ಮೇಟಿ

ಕೆ.ಪಿ.ಸಿ.ಸಿ ಯಿಂದ ನೀಡಲಾಗುವ ಮಾಜಿ ಪ್ರಧಾನಿ ಶ್ರೀ ರಾಜೀವ ಗಾಂಧಿ ರಾಜ್ಯ ಮಟ್ಟದ ಶ್ರೇಷ್ಠ ಶಿಕ್ಷಕ ಪ್ರಶಸ್ತಿಗೆ ಆಯ್ಕೆಯಾದ ಉಪನ್ಯಾಸಕ ವಿರುಪಾಕ್ಷಪ್ಪ ಮೇಟಿ ಸಿದ್ದಾಪುರ,ಸೆ,೩:-...

kolsirsi vss issue…part -04 ನಾನೇ ಹೊಣೆ ನಾನೇ ಜವಾಬ್ದಾರಿ ಎಂದ ಸಿಇಒ ಮಾಳವಿ….

ಕೋಲ ಶಿರಸಿ vss ನ ಪ್ರಕರಣ ಹಗರಣದ ಸ್ವರೂಪ ಪಡೆದಿದೆ… ಈ ಅಪರಾ ತಪರಾ ರೂವಾರಿ ಸಿಇಒ/ ಸೆಕ್ರೆಟರಿ ಎಂಬುದು ನಿರ್ವಿವಾದ. ಈ ಬಗ್ಗೆ...

ಕೋಲಶಿರಸಿ vss ಆಡಳಿತ ಸಮೀತಿ & ಸಿಇಒ ವಿರುದ್ಧ ಇಲಾಖೆಗೆ ದೂರು

ಸಿದ್ದಾಪುರ ತಾಲೂಕಿನ ಕೋಲಶಿರಸಿ vss ನಲ್ಲಿ ನಡೆದಿದೆ ಎನ್ನಲಾದ ಬಹುಕೋಟಿ ಹಗರಣದ ಹಿಂದೆ ಇರುವ ಹಾಲಿ ಆಡಳಿತ ಮಂಡಳಿ & ಸಿಇಒ/ ಕಾರ್ಯದರ್ಶಿ ಗಳ...

Latest Posts

ಗ್ರಾಮೀಣ ಸೇವಾ ಸಹಕಾರಿ ಸಂಘಗಳು ಮುಳುಗುತ್ತಿವೆ..! ಜಾಗೃತೆ..

ರೈತರ ಅನುಕೂಲಕ್ಕಿರುವ ಗ್ರಾಮೀಣ ಸೇವಾ ಸಹಕಾರಿ ಸಂಘಗಳು ಮುಳುಗುತ್ತಿವೆ ಎನ್ನುವುದಕ್ಕೆ ಅನೇಕ ದೃಷ್ಟಾಂತಗಳಿವೆ. ಆದರೆ ಸಹಕಾರಿ ಕ್ಷೇತ್ರ ನಿಯಂತ್ರಿಸುವವರು ತಮ್ಮ ಅನುಕೂಲಕ್ಕೆ ಸಂಘಗಳನ್ನು ಬಳಸಿಕೊಂಡು ಸಹಕಾರಿ ಕ್ಷೇತ್ರ ಜನಪರ ಎನ್ನುವ ಸುಳ್ಳು ಪ್ರಚಾರದಲ್ಲಿ ತೊಡಗಿದ್ದಾರೆ. ಸಿದ್ದಾಪುರ ಕೋಲಶಿರ್ಸಿ ಸೇವಾ ಸಹಕಾರಿ ಸಂಘದ ಬಹುಕೋಟಿ ಹಗರಣದ ನಂತರ ಒಂದೊಂದೇ ಗುಟ್ಟುಗಳು ರಟ್ಟಾಗತೊಡಗಿವೆ. ಸಿದ್ದಾಪುರದ ಪ್ರಮುಖ ಸಹಕಾರಿಗಳು,...

Recommended For You

About the Author: Kanneshwar Naik

Leave a Reply

Your email address will not be published. Required fields are marked *