ಆತ ಅಸಾಮಾನ್ಯ… ಆದರೆ ತಾನೇ ದೇವ ಮಾನವ ಎನ್ನಲಾರ…ಈ ಛಲದಂಕಮಲ್ಲನಿಗೆ ಜಯವಾಗಲಿ…

ವಿಶ್ವದ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ ಒಂದರ ರಾಜಮನೆತನದಂಥ ಶ್ರೀಮಂತ ಕುಟುಂಬದಲ್ಲಿ ಹುಟ್ಟಿದ ರಾಜಪುತ್ರನೀತ. ಈತನಿಗೆ ಕರಾಟೆ, ವಿದೇಶಿ ಪ್ರಯಾಣ, ವಿಮಾನ ಚಾಲನೆ, ವಿಮಾನಯಾನ ಎಲ್ಲವೂ ಸಲೀಸು, ಆದರೆ ಈತ ಜನಸಾಮಾನ್ಯನಲ್ಲಿ ಅತಿ ಸಾಮಾನ್ಯನಾಗಿ ಜನರೊಂದಿಗೆ ಬೆರೆಯುತ್ತಾನೆ. ಬುಡಕಟ್ಟುಗಳು, ದುರ್ಬಲ ವರ್ಗದ ಜನರ ಹಣೆಯ ಬೆವರು ಒರೆಸುತ್ತಾನೆ.

ಈತನ ಅಜ್ಜಿ, ಅಪ್ಪ ದುರಂತ ಸಾವು ಕಂಡರೂ ಈತ ನಾನು ಈ ದೇಶಕ್ಕೆ ಸಮರ್ಪಿತ ಎನ್ನುತ್ತಾನೆ. ಕುಲೀನ ಕುಟುಂಬದ ಕೋಮಲ ಕುಡಿಯಾದ ಈತ ಪಾದಯಾತ್ರೆಯ ಮೂಲಕ ದೇಶ ಪರ್ಯಟನೆ ಮಾಡುತ್ತಾನೆ, ಮಣಿಪುರ, ಜಮ್ಮು-ಕಾಶ್ಮೀರ ದೇಶದ ಉದ್ದಗಲಕ್ಕೂ ಪ್ರಧಾನಿ ಸರ್ಕಾರಿ ಕರ್ಚಿನಲ್ಲಿ ಪ್ರಯಾಣಿಸುವ ಮೊದಲು ಅಲ್ಲಿ ಹಾಜರಿರುತ್ತಾನೆ. ಈತನ ಚುರುಕುತನ, ಹೋರಾಟ ಫಲನೀಡಬಾರದೆಂದು ಈತನ ವಿರುದ್ಧ ಅಪಪ್ರಚಾರಕ್ಕೆ ದೊಡ್ಡ ಜನಸಂಖ್ಯೆಯದೇಶದ ಪ್ರಧಾನಿ ಮತ್ತವರ ಜಗತ್ತಿನ ದೊಡ್ಡ ಪಕ್ಷ ಸಾವಿರಾರು ಕೋಟಿ ವ್ಯಯಿಸುತ್ತದೆ!. ಈ ಅಸಾಮಾನ್ಯ ಮನುಷ್ಯ ದೊಡ್ಡಉದ್ಯಮಿಗಳು, ಪಟ್ಟಭದ್ರರ ಪರಿವಾರದ ಪರವಾಗಿದ್ದರೆ ವ್ಯವಸ್ಥೆ ಈತನನ್ನು ಇಂದ್ರ-ಚಂದ್ರ ಎಂದು ಬಣ್ಣಿಸಿ ಹಾಡಿ ಹೊಗಳುತಿತ್ತು ಆದರೆ ಈತ ಹಾರ ತುರಾಯಿಗೆ ತಲೆಬಾಗದೆ ಸಂವಿಧಾನದ ಪುಸ್ತಕ ಹಿಡಿದು ನಡೆಯುತ್ತಾನೆ.. ಸಂವಿಧಾನ ರಕ್ಷಿಸಿ, ಪ್ರಜಾಪ್ರಭುತ್ವ ಉಳಿಸಿ ಎನ್ನುತ್ತಾನೆ.

ಈತನ ವಿರೋಧಿಗಳು ಅಜ್ಜನ ವಿಷಯದಲ್ಲಿ, ಕುಟುಂಬದ ವಿಷಯದಲ್ಲಿ, ದೇಶಕಟ್ಟಿದ ಚಾರಿತ್ರಿಕ ಪಕ್ಷದ ವಿಚಾರದಲ್ಲಿ ಹೀಗಳಿಯುತ್ತಾರೆ ಅದಕ್ಕೆ ಪ್ರತಿಯಾಗಿ ಬನ್ನಿ ಪ್ರೀತಿಯ ಅಂಗಡಿ ತೆರೆಯೋಣ, ಧರ್ಮ, ಕೋಮುವಾದಿ ಮನಸ್ಥಿತಿಯಿಂದ ದೇಶಕ್ಕಾಗುತ್ತಿರುವ ತೊಂದರೆ ತಡೆಯೋಣ ಎನ್ನುತ್ತಾನೆ. ಈ ಸಿಡಿಲ ಮರಿಯ ವಿರೋಧಿ ಗುಂಪು ತಂತ್ರ-ಮಂತ್ರ- ಷಡ್ಯಂತ್ರಗಳ ಮೂಲಕ ಇತನ ಗೆಲುವು ತಡೆಯುತ್ತಾರೆ, ಈತನ ಹೆಸರಿಗೆ, ಚಿತ್ರಕ್ಕೆ ಮಸಿ ಬಳಿಯುತ್ತಾರೆ. ಈತ ದ್ವೇಶದ ಜನರ ವಿರುದ್ಧ ಭಾರತ ಜೋಡಿಸುತ್ತೇನೆ, ಭಾರತದ ಜನರನ್ನು ಕೂಡಿಸುತ್ತೇನೆ ಎನ್ನುತ್ತಾನೆ. ಈ ಪ್ರೀತಿಯ ರಾಯಭಾರಿಗೆ ಇಂದು ಹುಟ್ಟುಹಬ್ಬ, ಭಾರತದಂಥ ಬಹುತ್ವದ ನಾಡನ್ನು ಕೋಮುವಾದಿಗಳ ಅಂಗಳ ಮಾಡಲು ಬಿಡದ ಛಲದಂಕ ಮಲ್ಲ, ಹೋರಾಟಗಾರ ಭಾರತದ ಭರವಸೆ ಈ ಸಮಚಿತ್ತದ ನಾಯಕನಿಗೆ ಹುಟ್ಟುಹಬ್ಬದ ಶುಭಾಶಯಗಳು… ರಾಹುಲ್‌ ಜಿ. ಭವ್ಯ ಭಾರತ ನಿಮ್ಮೊಂದಿಗಿದೆ ಮುನ್ನುಗ್ಗಿ….ಜಯವಾಗಲಿ.

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

ಗ್ರಾಮೀಣ ಸೇವಾ ಸಹಕಾರಿ ಸಂಘಗಳು ಮುಳುಗುತ್ತಿವೆ..! ಜಾಗೃತೆ..

ರೈತರ ಅನುಕೂಲಕ್ಕಿರುವ ಗ್ರಾಮೀಣ ಸೇವಾ ಸಹಕಾರಿ ಸಂಘಗಳು ಮುಳುಗುತ್ತಿವೆ ಎನ್ನುವುದಕ್ಕೆ ಅನೇಕ ದೃಷ್ಟಾಂತಗಳಿವೆ. ಆದರೆ ಸಹಕಾರಿ ಕ್ಷೇತ್ರ ನಿಯಂತ್ರಿಸುವವರು ತಮ್ಮ ಅನುಕೂಲಕ್ಕೆ ಸಂಘಗಳನ್ನು ಬಳಸಿಕೊಂಡು...

bhaarat jodo… ಯುವ ಸಂಘ ನೋಂದಣಿಗೆ ಶಾಸಕರ ಮನವಿ

ಸಿದ್ದಾಪುರ: ರಾಜ್ಯದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ರ ಮಹತ್ವಾಕಾಂಕ್ಷೆ ಭಾರತ್ ಜೋಡೋ ಯುವ ಸಂಘಗಳನ್ನು ತಕ್ಷಣ ನೊಂದಣಿ ಮಾಡಿಸಿಕೊಂಡು ಸರ್ಕಾರದ ಅನುದಾನ ಸದುಪಯೋಗ ಪಡಿಸಿಕೊಳ್ಳುವಂತೆ ಶಿರಸಿ-ಸಿದ್ದಾಪುರ...

ಶ್ರೇಷ್ಠ ಶಿಕ್ಷಕ ವಿರೂಪಾಕ್ಶಪ್ಪ ಮೇಟಿ

ಕೆ.ಪಿ.ಸಿ.ಸಿ ಯಿಂದ ನೀಡಲಾಗುವ ಮಾಜಿ ಪ್ರಧಾನಿ ಶ್ರೀ ರಾಜೀವ ಗಾಂಧಿ ರಾಜ್ಯ ಮಟ್ಟದ ಶ್ರೇಷ್ಠ ಶಿಕ್ಷಕ ಪ್ರಶಸ್ತಿಗೆ ಆಯ್ಕೆಯಾದ ಉಪನ್ಯಾಸಕ ವಿರುಪಾಕ್ಷಪ್ಪ ಮೇಟಿ ಸಿದ್ದಾಪುರ,ಸೆ,೩:-...

kolsirsi vss issue…part -04 ನಾನೇ ಹೊಣೆ ನಾನೇ ಜವಾಬ್ದಾರಿ ಎಂದ ಸಿಇಒ ಮಾಳವಿ….

ಕೋಲ ಶಿರಸಿ vss ನ ಪ್ರಕರಣ ಹಗರಣದ ಸ್ವರೂಪ ಪಡೆದಿದೆ… ಈ ಅಪರಾ ತಪರಾ ರೂವಾರಿ ಸಿಇಒ/ ಸೆಕ್ರೆಟರಿ ಎಂಬುದು ನಿರ್ವಿವಾದ. ಈ ಬಗ್ಗೆ...

ಕೋಲಶಿರಸಿ vss ಆಡಳಿತ ಸಮೀತಿ & ಸಿಇಒ ವಿರುದ್ಧ ಇಲಾಖೆಗೆ ದೂರು

ಸಿದ್ದಾಪುರ ತಾಲೂಕಿನ ಕೋಲಶಿರಸಿ vss ನಲ್ಲಿ ನಡೆದಿದೆ ಎನ್ನಲಾದ ಬಹುಕೋಟಿ ಹಗರಣದ ಹಿಂದೆ ಇರುವ ಹಾಲಿ ಆಡಳಿತ ಮಂಡಳಿ & ಸಿಇಒ/ ಕಾರ್ಯದರ್ಶಿ ಗಳ...

Latest Posts

ಗ್ರಾಮೀಣ ಸೇವಾ ಸಹಕಾರಿ ಸಂಘಗಳು ಮುಳುಗುತ್ತಿವೆ..! ಜಾಗೃತೆ..

ರೈತರ ಅನುಕೂಲಕ್ಕಿರುವ ಗ್ರಾಮೀಣ ಸೇವಾ ಸಹಕಾರಿ ಸಂಘಗಳು ಮುಳುಗುತ್ತಿವೆ ಎನ್ನುವುದಕ್ಕೆ ಅನೇಕ ದೃಷ್ಟಾಂತಗಳಿವೆ. ಆದರೆ ಸಹಕಾರಿ ಕ್ಷೇತ್ರ ನಿಯಂತ್ರಿಸುವವರು ತಮ್ಮ ಅನುಕೂಲಕ್ಕೆ ಸಂಘಗಳನ್ನು ಬಳಸಿಕೊಂಡು ಸಹಕಾರಿ ಕ್ಷೇತ್ರ ಜನಪರ ಎನ್ನುವ ಸುಳ್ಳು ಪ್ರಚಾರದಲ್ಲಿ ತೊಡಗಿದ್ದಾರೆ. ಸಿದ್ದಾಪುರ ಕೋಲಶಿರ್ಸಿ ಸೇವಾ ಸಹಕಾರಿ ಸಂಘದ ಬಹುಕೋಟಿ ಹಗರಣದ ನಂತರ ಒಂದೊಂದೇ ಗುಟ್ಟುಗಳು ರಟ್ಟಾಗತೊಡಗಿವೆ. ಸಿದ್ದಾಪುರದ ಪ್ರಮುಖ ಸಹಕಾರಿಗಳು,...

Recommended For You

About the Author: Kanneshwar Naik

Leave a Reply

Your email address will not be published. Required fields are marked *