ಮಲೆನಾಡ ಪರಿಸರ ಗೌರಿ….. #malnad spl-gouri-fest# gouri habba part-02


ಮಲೆನಾಡು ವೈವಿಧ್ಯ, ಜೀವ ವೈವಿಧ್ಯಗಳ ಬೀಡು. ಇಲ್ಲಿಯ ಆಚರಣೆ, ಹಬ್ಬ ಹರಿದಿನಗಳೂ ಕೂಡಾ ಪರಿಸರಾಧಾರಿತ, ಪ್ರಕೃತಿ ಪೂರಕ. ದೇವರಕಾಡಲಿ ನಾಗರಕಲ್ಲು ಇಟ್ಟು ಪೂಜಿಸುವುದು, ಕೆರೆ, ಭಾವಿಗಳಲ್ಲಿ ಚೌಡಿ ಅಥವಾ ಚೌಡೇಶ್ವರಿ ಆರಾಧನೆ,ನೀರಿನಲ್ಲಿ ಬಲೀಂದ್ರ,ಗಂಗೆ, ಗೌರಿ ಕಾಣುವುದು ಮಲೆನಾಡಿನ ಸಾಂಪ್ರದಾಯಿಕತೆ ಕೂಡಾ. ಈಗ ಗೌರಿ ಗಣೇಶ ಹಬ್ಬದ ಸಮಯ ಬಿಡುವಿಲ್ಲದ ಬದುಕಿನ ಒತ್ತಡದ ಜೀವನದಲ್ಲಿ ಸಂಪ್ರದಾಯ, ಆಚರಣೆ ಕಷ್ಟ ಎಂದು ಎಲ್ಲರೂ ಕೃತಕ ಸಿದ್ಧ ವಸ್ತುಗಳಿಗಾಗಿ ಹುಡುಕುವವರೆ.
ಬಹುತೇಕ ಬಿಜಿಜೀವಿಗಳೆಲ್ಲ ಸಮಸ್ತ ಒತ್ತಡಗಳ ನಡುವೆಯೂ ಗೌರಿ-ಗಣೇಶ ಹಬ್ಬಕ್ಕೆ ಹುಟ್ಟೂರಿಗಂತೂ ಬಂದೇ ಬರುತ್ತಾರೆ. ಆಗ ಸ್ವಲ್ಪ ಸಮಯಮಾಡಿಕೊಂಡು ಗೌರಿ ಗಣಪನಿಗಾಗಿ ನಾವೂ ಬದಲಾದರೆ ಹೇಗೆಲ್ಲಾ ಹಬ್ಬದ ಗಮ್ಮತ್ತು ಹೆಚ್ಚುವುದು ಗೊತ್ತಾ?


ಭಾದ್ರಪದ ಶುಕ್ಲಪಕ್ಷದ ತದಗೆ ದಿನ ಮಲೆನಾಡಿನ ಗೌರಮ್ಮನೋ… ಪೇಟೆಗಳ ಸ್ವರ್ಣಗೌರಿಯೋ ಮನೆಗೆ ಬರುತ್ತಾಳೆ.ಈ ಸ್ವರ್ಣ ಗೌರಿ ತಮ್ಮೆಲ್ಲರ ಮನೆಗೆ ಬಂದು ಸಂಪತ್ತು- ಸಂಮೃದ್ಧಿಗೆ ಹಾರೈಸಿ ಮಾರನೆ ದಿನ ಮಗ ಗಣಪನೊಂದಿಗೆ ಮರಳಿ ಕೈಲಾಸಕ್ಕೆ ಹೋಗಲೇಬೇಕು.
ಈ ಗೌರಿ ಪೂಜೆಗೆ ಊರಿಗೆ,ಮನೆಗೆ ಬರುವವರು ಗೌರಿಯ ಶೃಂಗಾರಕ್ಕೆ ಬಂಗಾರವನ್ನು ಪೇಟೆಯಿಂದಲೇ ತನ್ನಿ ಆದರೆ ಗೌರಿಯ ಪ್ರೀತಿಯ ಕೇದಿಗೆ ಹೂವಿಗೆ ಪಟ್ಟಣದಲ್ಲಿ ಹುಡುಕಬೇಡಿ ಈಗಲೂ ನಮ್ಮ ಪಶ್ಚಿಮಘಟ್ಟದ ತೊಪ್ಪಲಲ್ಲಿ ಅಲ್ಲಲ್ಲಿ ಕೆರೆ ಕಟ್ಟೆ, ಹೊಳೆಗಳ ಅಂಚಲ್ಲಿ ಮುಳ್ಳುಗಳ ಮಧ್ಯೆ ಕೇದಿಗೆ ಸುವಾಸನೆ ಬೀರುತ್ತಾ ಕೂತಿರುತ್ತದೆ. ಹಾವಿನ ಹೆದರಿಕೆಯ ಎಚ್ಚರಿಕೆಯೊಂದಿಗೆ ಕೇದಿಗೆ ವನಕ್ಕೆ ನೀವು ಹೋದರೆ ನಿಮಗೆ ಕೇದಿಗೆ ತೋಟದ ಸುಖ ಸುಲಭವಾಗಿ ದಕ್ಕುತ್ತದೆ.


ಹಾಗೆಯೇ ಗೌರಿಗೆ ಇಂದ್ರನ ಹೂವು ಎನ್ನುವ ಅಗ್ನಿಶಿಖೆ ಬೇಕು. ಗ್ಲೋರಿಯೋಸಾ ಸುಪರ‍್ಬಾ ಎನ್ನುವ ವೈಜ್ಞಾನಿಕ ಹೆಸರಿನ ಆಯರ‍್ವೇದಿಕ್‌ ಗೌರಿ ಹೂವು ಮಲೆನಾಡಿನ ಕಾಡಿನಲ್ಲಿ ಯತೇಚ್ಛವಾಗಿ ದೊರೆಯುತ್ತವೆ. ಸ್ಥಳೀಯ ಪರಿಸರದ ಅರಿವಿರುವ ಮಕ್ಕಳು ಜೊತೆಗಿದ್ದರೂ ನೀವು ತಮಿಳುನಾಡಿನ ರಾಜ್ಯಪುಷ್ಪ ಇಂದ್ರನ ಹೂವನ್ನು ತಂದು ಗೌರಮ್ಮನ ಮುಡಿಗೇರಿಸಿದರೆ ನಿಮಗೆ ಟ್ರೆಕ್ಕಿಂಗ್‌ ಅನುಭವ ಉಚಿತ!


ಗೌರಿ-ಗಣೇಶ ಚತುರ್ಥಿ ಹೆಂಗಳೆಯರ ಪ್ರೀತಿಯ ಹಬ್ಬವಾದರೂ ಇಲ್ಲಿ ಕಾಡೋ, ನಾಡೋ ಎಲ್ಲಿಂದಲಾದರೂ ಫಲಾವಳಿಗಳನ್ನು ಹೊತ್ತು ತರುವವರು ಗಂಡಸರೇ, ಪೂಜೆ ಮಾಡುವವರೂ ಪುರುಷ ಪೂಜಾರಿಗಳೇ ಆಗಿರುವುದರಿಂದ ಕಲಸಪೂಜೆ, ಮೂರ್ತಿ ಪೂಜೆ ಮಾಡುವವರು ಕಳಲೆ, ಕೆಸುವಿನ ಎಲೆ ಸೇರಿದ ಪ್ರಕೃತಿಯಲ್ಲಿ ಸಿಗುವ ಸಸ್ಯಗಳನ್ನೇ ಬಳಸಿ ಅವು ನಿಮಗೆ ರಾಸಾಯನಿಕ ಬಳಸಿ ಬೆಳೆಯುವ ಇತರ ಕಾಯಿಪಲ್ಲೆ, ಸೊಪ್ಪಿಗಿಂತ ಉತ್ತಮ, ಆರೋಗ್ಯಕರ.


ಹಾಗೆಯೇ ಮೂರ್ತಿ ಪೂಜೆ ಮಾಡುವವರು ಪರಿಸರ ಪೂರಕ ಗೌರಿ-ಗಣೇಶನನ್ನು ತರಬಹುದು ಅವು ಮಾರುಕಟ್ಟೆಯಲ್ಲಿ ದೊರೆಯುತ್ತವೆ. ಕಲಸ ಪೂಜೆ ಮಾಡುವವರಿಗೆ ಹೆಚ್ಚು ಪರಿಸರವಾದಿಯಾಗುವ ಸುವರ್ಣಾವಕಾಶ. ಗೌರಮ್ಮನ ಸೀರೆ ತಂದು ಕಂಚಿನ ತಂಬಿಗೆಯಲ್ಲಿ ಬಾವಿಯ ನೀರು ತುಂಬಿ ಅದಕ್ಕೆ ಗರಿಕೆಜೊತೆ ಚಿಕ್ಕ ಕಲ್ಹಳ್ಳನ್ನೂ ಸೇರಿಸಿ,ಅಗ್ನಿಶಿಖೆ,ಅಡಿಕೆಯ ಸಿಂಗಾರ. ಕೇದಿಗೆ ಸೇರಿಸಿ ಮುಡಿ ಕಟ್ಟಿ ಸಿಹಿ ನೈವೇಧ್ಯಗಳೊಂದಿಗೆ ಗೌರಿ ಪೂಜಿಸಿದರೆ, ಗೌರಮ್ಮನಿಗೂ ಖುಷಿ ಜೊತೆಗೆ ಪರಿಸರ ಪೂರಕ. ಗೌರಮ್ಮನ ಹಬ್ಬ ಆಚರಣೆಯಾದಂತೆ. ಇಡೀ ಕುಟುಂಬ ಸೇರಿ ಆಚರಿಸುವ ಕುಟುಂಬದ ಹೆಂಗಳೆಯರ ಹಬ್ಬ ಗೌರಿ-ಗಣೇಶ್‌ ಚತುರ್ಥಿ ಮಲೆನಾಡಿನಲ್ಲಿ ನಡೆಯುವುದು ಹೀಗೇ. ಇದು ಒಂದು ಅಪೂರ್ವ, ನೈಸರ್ಗಿಕ ಗೌರಿ-ಗಣೇಶ್‌ ಹಬ್ಬದ ಮಾದರಿ ಎನಿಸುವುದಿಲ್ಲವೆ?

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

sslc ಸಿದ್ದಾಪುರ ರಾಜ್ಯಕ್ಕೇ ನಂ ೦೧ ? ೯೯.೭೫ ಫಲಿತಾಂಶ

ರಜತ್‌ ವಿನಾಯಕ ಶೇಟ್‌ (ಪ್ರಶಾಂತಿ ಪ್ರೌಢಶಾಲೆ)೬೨೨/ ಹಂಸಿನಿ ಮೋಹನ ಹೆಗಡೆ (ಪ್ರಶಾಂತಿ ಪ್ರೌಢಶಾಲೆ)೬೨೦/ ಮಾನ್ಯ ಕೃಷ್ಣಮೂರ್ತಿ ಭಟ್‌ ( ಕಾಳಿಕಾ ಭವಾನಿ ಆ.ಮಾ.ಶಾಲೆ ಕಾನಸೂರು)...

ksrtc -ಕೆಎಸ್‌ಆರ್‌ಟಿಸಿ ನೌಕರರು ನಮ್ಮ ನಡುವಿನ ಯೋಧರು: ಶಾಸಕ ಭೀಮಣ್ಣ ನಾಯ್ಕ ಶ್ಲಾಘನೆ

ಸಿದ್ದಾಪುರ: “ಕೆಎಸ್‌ಆರ್‌ಟಿಸಿ ಚಾಲಕರು ಮತ್ತು ನಿರ್ವಾಹಕರು ತಮ್ಮ ಕುಟುಂಬವನ್ನು ಮರೆತು, ಪ್ರಯಾಣಿಕರ ಸುರಕ್ಷತೆಯನ್ನೇ ಗುರಿಯಾಗಿಸಿಕೊಂಡು ಪ್ರಾಮಾಣಿಕವಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರು ನಿಜಕ್ಕೂ ನಮ್ಮೆಲ್ಲರ ನಡುವಿನ...

adake-bhavana- ಕಾಗೇರಿ-ಭೀಮಣ್ಣ ಗುಟ್ಟಾಗಿ ಹೊಂದಾಣಿಕೆ?!

ರಾಜಕೀಯ, ಪಕ್ಷ, ಒಟ್ಟಾರೆ ಸಮಾಜದಲ್ಲಿ ಹೊಂದಾಣಿಕೆ, ಸಮನ್ವಯ ಅಗತ್ಯ ಎಂದು ಪ್ರತಿಪಾದಿಸಿರುವ ಶಾಸಕ ಭೀಮಣ್ಣ ನಾಯ್ಕ ತಾವು ಮತ್ತು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ...

ಶಿರಳಗಿ ಗ್ರಾ.ಪಂ. ಎರಡು ಪ್ರಕರಣಗಳು…. ಯಾರದ್ದೋ ಲಾಭಕ್ಕೆ ಯಾರಿಗೋ ಬರೆ! # love jihAd! #

ಸಿದ್ಧಾಪುರ ತಾಲೂಕಿನ ಶಿರಳಗಿ ಗ್ರಾಮ ಪಂಚಾಯತ್‌ ವ್ಯಾಪ್ತಿಯಲ್ಲಿ ನಡೆದ ಎರಡು ಪ್ರಕರಣಗಳು ಪಿಸುಮಾತು ಬಹುದೂರ ಕೇಳಿಸುತ್ತದೆ ಎನ್ನುವಂತೆ ಸದ್ದು ಮಾಡಿವೆ. ಪ್ರಕರಣ ಒಂದು- ಶಿರಳಗಿ...

ಏಪ್ರಿಲ್ 14 ರಿಂದ ಕಾನಳ್ಳಿ ಕಾರ್ಯಕ್ರಮ….#ಊರಿಗೆ ಕಾಲಿಟ್ಟ ಹುಲಿ#

ಸಿದ್ದಾಪುರ: ಜಿಲ್ಲೆಯ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ಸಿದ್ದಾಪುರ ತಾಲೂಕಿನ ಕಾನಳ್ಳಿಯ ಶ್ರೀ ಚೌಡೇಶ್ವರಿ ದೇವಾಲಯದ 30ನೇ ವಾರ್ಷಿಕೋತ್ಸವ ಎಪ್ರಿಲ್ 14 ರಿಂದ 16 ರವರೆಗೆ...

Latest Posts

sslc ಸಿದ್ದಾಪುರ ರಾಜ್ಯಕ್ಕೇ ನಂ ೦೧ ? ೯೯.೭೫ ಫಲಿತಾಂಶ

ರಜತ್‌ ವಿನಾಯಕ ಶೇಟ್‌ (ಪ್ರಶಾಂತಿ ಪ್ರೌಢಶಾಲೆ)೬೨೨/ ಹಂಸಿನಿ ಮೋಹನ ಹೆಗಡೆ (ಪ್ರಶಾಂತಿ ಪ್ರೌಢಶಾಲೆ)೬೨೦/ ಮಾನ್ಯ ಕೃಷ್ಣಮೂರ್ತಿ ಭಟ್‌ ( ಕಾಳಿಕಾ ಭವಾನಿ ಆ.ಮಾ.ಶಾಲೆ ಕಾನಸೂರು) ೬೨೦/ ದಿಶಾ ರವಿ ನಾಯ್ಕ (ಸ.ಪ್ರೌ. ಹಾಳದಕಟ್ಟಾ) ೬೧೯/ ನಿಶಾ ಪರಮೇಶ್ವರ ಮಡಿವಾಳ ಸ.ಪ್ರೌ.ಶಾ.ಜಿಡ್ಡಿ ೬೧೭/ ಶಿಕ್ಷಣ ಮತ್ತು ಸಾಂಸ್ಕೃತಿಕವಾಗಿ ಮುಂದುವರಿದಿರುವ ಸಿದ್ಧಾಪುರ ತಾಲೂಕು ಅತಿ ಹೆಚ್ಚು ಜನ...

Recommended For You

About the Author: Kanneshwar Naik

Leave a Reply

Your email address will not be published. Required fields are marked *